ಹೈದರಾಬಾದ್ : ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ನಿರಂತರವಾಗಿ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಎಫ್ಎಂವೊಂದರ ಸಂದರ್ಶನದ ವೇಳೆ ನೀರಜ್ ಮುಂದೆ ಹುಡುಗಿಯರು ನೃತ್ಯ ಮಾಡಿರುವ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
-
Ladiesssss..Yes I got the hard hitting, deep answers too but..Take the first 4 secs before the cam moves to the zoom call to guess who we are dancing for😇 ;) #udejabjabzulfeinteri and then tell me I did it for all of us😄 #gold #olympics #neerajchopra @RedFMIndia @RedFM_Mumbai pic.twitter.com/SnEJ99MK31
— Mumbai Ki Rani (@mymalishka) August 19, 2021 " class="align-text-top noRightClick twitterSection" data="
">Ladiesssss..Yes I got the hard hitting, deep answers too but..Take the first 4 secs before the cam moves to the zoom call to guess who we are dancing for😇 ;) #udejabjabzulfeinteri and then tell me I did it for all of us😄 #gold #olympics #neerajchopra @RedFMIndia @RedFM_Mumbai pic.twitter.com/SnEJ99MK31
— Mumbai Ki Rani (@mymalishka) August 19, 2021Ladiesssss..Yes I got the hard hitting, deep answers too but..Take the first 4 secs before the cam moves to the zoom call to guess who we are dancing for😇 ;) #udejabjabzulfeinteri and then tell me I did it for all of us😄 #gold #olympics #neerajchopra @RedFMIndia @RedFM_Mumbai pic.twitter.com/SnEJ99MK31
— Mumbai Ki Rani (@mymalishka) August 19, 2021
‘ನಾಚಿ ನೀರಾದ ನೀರಜ್’
ಒಲಿಂಪಿಕ್ಸ್ನಲ್ಲಿ ಭಾಗವಹಿಸಿ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಚೋಪ್ರಾರನ್ನು ಲಖನೌನ ಎಫ್ಎಂವೊಂದು ಆನ್ಲೈನ್ ಸಂದರ್ಶನ ನಡೆಸಿದೆ. ಈ ಸಮಯದಲ್ಲಿ ಹಾಜರಿದ್ದ ಹುಡುಗಿಯರು ನೀರಜ್ ಮುಂದೆ ಹಿಂದಿ ಹಾಡೊಂದಕ್ಕೆ (ಉಡೆ ಜಬ್-ಜಬ್ ಜುಲ್ಫೆನ್ ತೇರಿ) ಸಖತ್ ಸ್ಟೆಪ್ಸ್ ಹಾಕಿದ್ದಾರೆ. ನೃತ್ಯ ನೋಡಿ ನಾಚಿದ ನೀರಜ್, ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ್ದಾರೆ.
‘ನನ್ನ ಸಂಪೂರ್ಣ ಗಮನ ಕ್ರೀಡೆಯತ್ತ ಮಾತ್ರ’
ಇಷ್ಟೊಂದು ಅಭಿಮಾನಿಗಳ ಪ್ರೀತಿ ಪಡೆದಿರುವುದಕ್ಕೆ ಸಂತೋಷವಿದೆ ಎಂದಿರುವ ಅವರು, ನಾನು ಯಾರನ್ನೂ ಲವ್ ಮಾಡಿಲ್ಲ. ಸದ್ಯ ನನ್ನ ಗಮನವೆಲ್ಲವೂ, ನನ್ನ ಆಟದ ಮೇಲೆ ಮಾತ್ರ ಎಂದಿದ್ದಾರೆ.
‘ಕುಟುಂಬಸ್ಥರ ಅನುಮತಿ ಪಡೆದು ಮದುವೆ’
ನನ್ನ ಕುಟುಂಬಸ್ಥರ ಇಚ್ಛೆಯಂತೆ ಮದುವೆಯಾಗಲು ನನಗೆ ಯಾವುದೇ ಅಡ್ಡಿ, ಆತಂಕಗಳಿಲ್ಲ. ಒಂದು ವೇಳೆ ನಾನು ಪ್ರೇಮವಿವಾಹ ಆಗಲು ಬಯಸಿದರೂ ಸಮಸ್ಯೆಗಳಾಗುವುದಿಲ್ಲ. ಕುಟುಂಬಸ್ಥರೊಂದಿಗೆ ಮಾತನಾಡಿ, ಅವರ ಅನುಮತಿ ಪಡೆದೇ ಮದುವೆಯಾಗುತ್ತೇನೆ ಎಂದರು.
ಪ್ರಧಾನಿ ಪ್ರಶ್ನೆಗೆ ‘ಆತ್ಮವಿಶ್ವಾಸ’ದಿಂದ ಉತ್ತರಿಸಿದ ನೀರಜ್
ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ ಒಲಿಂಪಿಕ್ಸ್ ಕ್ರೀಡಾಪಟುಗಳ ಜತೆ ಸಂವಾದ ನಡೆಸಿದರು. ಈ ವೇಳೆ ನೀರಜ್ ಚೋಪ್ರಾಗೆ ತಮ್ಮ ಗೆಲುವಿನ ಗುಟ್ಟು ಏನು ಎಂದು ಕೇಳಿದರು.
-
#WATCH | Prime Minister Narendra Modi interacts with #TokyoOlympics gold medalist Neeraj Chopra. The PM appreciates him and says, "...I have seen that success doesn't get to your head and loss doesn't stay in your mind..." pic.twitter.com/ajgznSSnTK
— ANI (@ANI) August 18, 2021 " class="align-text-top noRightClick twitterSection" data="
">#WATCH | Prime Minister Narendra Modi interacts with #TokyoOlympics gold medalist Neeraj Chopra. The PM appreciates him and says, "...I have seen that success doesn't get to your head and loss doesn't stay in your mind..." pic.twitter.com/ajgznSSnTK
— ANI (@ANI) August 18, 2021#WATCH | Prime Minister Narendra Modi interacts with #TokyoOlympics gold medalist Neeraj Chopra. The PM appreciates him and says, "...I have seen that success doesn't get to your head and loss doesn't stay in your mind..." pic.twitter.com/ajgznSSnTK
— ANI (@ANI) August 18, 2021
ಇದಕ್ಕೆ ಪ್ರತಿಕ್ರಿಯಿಸಿದ ನೀರಜ್, ಆತ್ಮವಿಶ್ವಾಸವಿದ್ದರೆ ಏನು ಬೇಕಾದರೂ ಸಾಧಿಸಬಹುದು. ಆ ಆತ್ಮವಿಶ್ವಾಸವು ನಮ್ಮ ತರಬೇತಿಯಿಂದ ಬರುತ್ತದೆ. ನಿರಂತರ ಅಭ್ಯಾಸ ಮಾಡಿದರೆ ಯಾವುದೂ ಕಷ್ಟವಲ್ಲ ಎಂದರು.
ಇದನ್ನೂ ಓದಿ: ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 15 ಪದಕ ಗೆಲ್ಲುವ ನಿರೀಕ್ಷೆಯಲ್ಲಿ ಭಾರತ ತಂಡ