ಬೆಳಕಿನ ಹಬ್ಬ ದೀಪಾವಳಿ ಇನ್ನೇನು ಸಮೀಪಿಸುತ್ತಿದೆ. ಹಬ್ಬಕ್ಕೆ ತಯಾರಿ ನಡೆಸುತ್ತಿರುವ ಜನರು ದೀಪ ಬೆಳಗಲು ಮಣ್ಣಿನ ದೀಪಗಳನ್ನು ಖರೀದಿ ಮಾಡ್ತಿದ್ದಾರೆ. ಇನ್ನೂ ಕೆಲವರು ಮನೆಗಳನ್ನು ಬೆಳಗಿಸಲು ಎಲ್ಇಡಿ ಮತ್ತು ಅಲಂಕಾರಿಕ ಲೈಟಿಂಗ್ಸ್ಗಳನ್ನು ಹಾಕಿ ಮನೆಗಳನ್ನು ಅಲಂಕರಿಸುತ್ತಾರೆ.
ಆದ್ರೆ ಇಲ್ಲೊಬ್ಬ ಮಹಿಳೆ ತನ್ನ ಸೀರೆಯಲ್ಲೇ ಎಲ್ಇಡಿ ಲೈಟ್ಸ್ ಹಾಕಿಕೊಂಡಿದ್ದಾರೆ. ಹೌದು, ಎಲ್‌ಇಡಿ ಲೈಟ್ ಸೀರೆ ಧರಿಸಿರುವ ಮಹಿಳೆಯ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದ್ದು ನೆಟ್ಟಿಗರಿಗೆ ಮನರಂಜನೆ ಒದಗಿಸುತ್ತಿದೆ.
-
LED Saree are a thing now. pic.twitter.com/bOf7qVi4y9
— Icecream Baba (@vichupedia) December 13, 2020 " class="align-text-top noRightClick twitterSection" data="
">LED Saree are a thing now. pic.twitter.com/bOf7qVi4y9
— Icecream Baba (@vichupedia) December 13, 2020LED Saree are a thing now. pic.twitter.com/bOf7qVi4y9
— Icecream Baba (@vichupedia) December 13, 2020
ಈ ವಿಡಿಯೋದಲ್ಲಿ ಎಲ್ಇಡಿ ಲೈಟ್ಸ್ನಿಂದ ಕೂಡಿದ ಬಿಳಿ ಬಣ್ಣದ ಸೀರೆಯುಟ್ಟು ಮಹಿಳೆ ತಿರುಗಾಡುವುದನ್ನು ಕಾಣಬಹುದು. ಆಕೆ ಅಂಗಡಿಯೊಂದರ ಹೊರಗೆ ನಿಂತಾಗ ಸೀರೆ ಮಿರಮಿರ ಮಿನುಗುತ್ತವೆ. ಈ ವಿಡಿಯೋ ಕ್ಲಿಪ್ ಅನ್ನು ಮೊದಲ ಬಾರಿಗೆ 2020ರಲ್ಲಿ ಹಂಚಿಕೊಳ್ಳಲಾಗಿತ್ತು. ಇದೀಗ ಇದು ಈ ವರ್ಷವೂ #DeepavaliSare #DiwaliSari ನಂತಹ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಮತ್ತೆ ವೈರಲ್ ಆಗುತ್ತಿದೆ. ಅನೇಕರು ಈ ವಿಚಿತ್ರವಾದ ಸೀರೆ ಬಗ್ಗೆ ಹಾಸ್ಯ ಮಾಡಿದರೆ, ಕೆಲವರು ಆಕೆಯನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರೊಬ್ಬರು "ಅವಳು ಬ್ಯಾಕ್‌ಅಪ್‌ಗಾಗಿ ಪವರ್ ಬ್ಯಾಂಕ್ ಪಡೆದಿದ್ದಾಳೆ" ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು ಅವಳು ಅದನ್ನು ಇನ್ನಷ್ಟು ಸುಂದರಗೊಳಿಸುತ್ತಿದ್ದಾಳೆ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:ಸೋನಿಯಾಗೆ ಪತ್ರ ಬರೆದು ಕಾಂಗ್ರೆಸ್‌ಗೆ ಅಮರೀಂದರ್ ಸಿಂಗ್ ಗುಡ್ ಬೈ; ಹೊಸ ಪಕ್ಷದ ಹೆಸರು ಘೋಷಣೆ