ETV Bharat / bharat

ಎಸ್​ಐ ಎನ್ನುತ್ತಾ ವಕೀಲೆಯ ಒಲಿಸಿಕೊಳ್ಳಲು ಯತ್ನ: ಪೊಲೀಸ್ ಅತಿಥಿಯಾದ ಓಲಾ ಚಾಲಕ - ನಕಲಿ ಎಸ್‌ಐ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಓಲಾ ಚಾಲಕನೊಬ್ಬ ಸಬ್‌ಇನ್ಸ್​ಪೆಕ್ಟರ್​ ಅಂತಾ ಹೇಳಿಕೊಂಡು ಮಹಿಳಾ ವಕೀಲೆ ನಂಬಿಸಿ ಮೋಸ ಮಾಡಲು ಯತ್ನಿಸಿದ್ದಾನೆ.

fake sub inspector
ಓಲಾ ಚಾಲಕ
author img

By

Published : Nov 18, 2022, 2:32 PM IST

ಬರೇಲಿ: ಓಲಾ ಚಾಲಕನೊಬ್ಬ ಸಬ್‌ಇನ್ಸ್​ಪೆಕ್ಟರ್​ ಅಂತಾ ಹೇಳಿಕೊಂಡು ಮಹಿಳಾ ವಕೀಲರೊಬ್ಬರನ್ನು ಒಲಿಸಿಕೊಳ್ಳಲು ಯತ್ನಿಸಿ ಇದೀಗ ಪೊಲೀಸರ ಅತಿಥಿಯಾದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಲಕ್ನೋ ಮೂಲದ ಸತ್ಯಂ ತಿವಾರಿ ಬಂಧಿತ ಆರೋಪಿ. ಈ ಬಗ್ಗೆ ಮಹಿಳಾ ವಕೀಲರು ಪೊಲೀಸರಿಗೆ ದೂರು ನೀಡಿದ ನಂತರ ಗುರುವಾರ ಆರೋಪಿಯನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ವಕೀಲೆಯ ಜತೆ ನಕಲಿ ಎಸ್​ಐ ಸ್ನೇಹ ಬೆಳೆಸಿದ್ದು, ಮದುವೆಯಾಗುವುದಾಗಿ ತಿಳಿಸಿದ್ದಾನೆ. ಬಳಿಕ ವಕೀಲೆ ಅವನನ್ನು ಭೇಟಿಯಾಗಲು ಬರೇಲಿಗೆ ಕರೆದಿದ್ದಾರೆ. ಎಸ್‌ಐ ಸಮವಸ್ತ್ರ ಧರಿಸಿ, ನಕಲಿ ಗುರುತಿನ ಚೀಟಿಯೊಂದಿಗೆ ಆಕೆಯನ್ನು ಭೇಟಿಯಾಗಲು ಬಂದಿದ್ದ ಸತ್ಯಂ, ಲಕ್ನೋದ ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡಿರುವುದಾಗಿ ಹೇಳಿದ್ದಾನೆ. ಈ ವೇಳೆ, ಮಹಿಳೆ ಆತನಿಗೆ ಕಾನೂನಿನ ವಿವಿಧ ಸೆಕ್ಷನ್‌ಗಳ ಬಗ್ಗೆ ಕೇಳಿದಾಗ ಆತ ಎಡವಿದ್ದು, ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

fake sub inspector
ನಕಲಿ ಗುರುತಿನ ಚೀಟಿ

ಇದನ್ನೂ ಓದಿ: ಪೆಟ್ರೋಲ್ ಬಂಕ್‌ನಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನ: ಕೇರಳ ಮೂಲದ ವ್ಯಕ್ತಿಯ ಬಂಧನ

ಯುವತಿ ಕೇಳಿದ ಕೆಲ ಕಾನೂನಾತ್ಮಕ ಪ್ರಶ್ನೆಗಳಿಗೆ ಉತ್ತರಿಸಲು ಆರೋಪಿ ತಡಬಡಿಸಿದಾಗ, ಅನುಮಾನಗೊಂಡು ಆತನ ಗುರುತಿನ ಚೀಟಿಯನ್ನು ಕೇಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರನ್ನು ಕಂಡ ನಕಲಿ ಎಸ್‌ಐ ಪರಾರಿಯಾಗಲು ಯತ್ನಿಸಿದ್ದು, ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಎಎಸ್ಐ ಮನೆಗೆ ನುಗ್ಗಿ ನಗ, ನಾಣ್ಯ ಲೂಟಿ: ಮೂವರು ಅಂತಾರಾಜ್ಯ ದರೋಡೆಕೋರರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.