ETV Bharat / bharat

ಪೆಟ್ರೋಲ್ - ಡೀಸೆಲ್ ಬೆಲೆ ಇಳಿಸುವ ಪ್ರಸ್ತಾಪವಿಲ್ಲ: ಕೇಂದ್ರ ಪೆಟ್ರೋಲಿಯಂ ಸಚಿವರ ಸ್ಪಷ್ಟನೆ - ಪೆಟ್ರೋಲಿಯಂ ಸಚಿವ

Petrol Diesel Prices: ಇಂಧನ ಬೆಲೆ ಕಡಿತದ ಕುರಿತು ಮಾಧ್ಯಮ ವರದಿಗಳನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ತಳ್ಳಿಹಾಕಿದ್ದಾರೆ.

Etv Bharat
Etv Bharat
author img

By ETV Bharat Karnataka Team

Published : Jan 3, 2024, 4:37 PM IST

ನವದೆಹಲಿ: ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ''ಹೆಚ್ಚಿನ ಅಸ್ಥಿರತೆ'' ಇರುವುದರಿಂದ ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕಡಿತಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಬುಧವಾರ ಸ್ಪಷ್ಟನೆ ನೀಡಿದ್ದಾರೆ.

ಇಂಧನ ಬೆಲೆ ಕಡಿತದ ಕುರಿತು ಮಾಧ್ಯಮ ವರದಿಗಳನ್ನು ಎಂದು ತಳ್ಳಿಹಾಕಿದ ಸಚಿವರು, ಇದು ಕೇವಲ ಊಹಾತ್ಮಕವಾಗಿದೆ. ಇಂಧನ ಲಭ್ಯತೆಯೇ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದರು. ಇತ್ತೀಚೆಗೆ ಕಚ್ಚಾ ತೈಲದ ಬೆಲೆಗಳು ಗಗನಕ್ಕೇರಿದಾಗ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ಭಾರಿ ನಷ್ಟವನ್ನು ಅನುಭವಿಸಿವೆ ಎಂದೂ ಅವರು ತಿಳಿಸಿದ್ದಾರೆ.

ಇಂಧನ ಬೆಲೆ ಕಡಿತದ ಕುರಿತು ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಯಾವುದೇ ಚರ್ಚೆಗಳಿಲ್ಲ. ಕಂಪನಿಗಳು ಬೆಲೆಯ ವಿಷಯದಲ್ಲಿ ಸ್ಥಿರ ಮತ್ತು ಸಕಾರಾತ್ಮಕ ಭವಿಷ್ಯದ ಪರಿಸ್ಥಿತಿಯನ್ನು ಬಯಸುತ್ತಿದ್ದಾರೆ ಎಂದು ಪೆಟ್ರೋಲಿಯಂ ಸಚಿವರು ವಿವರಿಸಿದರು. ಇದೇ ವೇಳೆ, ಇತ್ತೀಚಿನ ತಿಂಗಳುಗಳಲ್ಲಿ ಇಂಧನ ಬೆಲೆ ಕಡಿಮೆಯಾದ ಏಕೈಕ ದೇಶ ಭಾರತವಾಗಿದೆ ಎನ್ನುವ ಮೂಲಕ ಅವರು ಗಮನಸೆಳೆದರು.

ದಕ್ಷಿಣ ಏಷ್ಯಾದ ದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸುಮಾರು ಶೇ40-80ರಷ್ಟು ಹೆಚ್ಚಾಗಿದೆ. ನೀವು ಪಾಶ್ಚಿಮಾತ್ಯ ಕೈಗಾರಿಕೀಕರಣಗೊಂಡ ಜಗತ್ತನ್ನು ನೋಡಿದರೆ, ಅಲ್ಲಿ ಬೆಲೆಗಳು ಹೆಚ್ಚಿವೆ. ಆದರೆ, ಭಾರತದಲ್ಲಿ ಬೆಲೆ ಕಡಿಮೆಯಾಗಿದೆ ಎಂದು ಸಚಿವ ಪುರಿ ಸಮರ್ಥಿಸಿಕೊಂಡರು.

ದೂರದೃಷ್ಟಿಯ ನಾಯಕತ್ವದಿಂದಾಗಿ ನಾವು ಇದನ್ನು ಮಾಡಲು ಸಾಧ್ಯವಾಗಿದೆ. 2021ರ ನವೆಂಬರ್ ಮತ್ತು 2022ರ ಮೇ ತಿಂಗಳ ಎರಡು ಸಂದರ್ಭಗಳಲ್ಲಿ ಕೇಂದ್ರ ಅಬಕಾರಿ ಸುಂಕ ಕಡಿತವನ್ನು ಮಾಡಿದೆ. ಇದನ್ನು ನಾವು 2023ರಲ್ಲೂ ಮಾಡಿದ್ದೆವು ಎಂದು ಅವರು ಹೇಳಿದರು. (ಐಎಎನ್​ಎಸ್​)

ಇದನ್ನೂ ಓದಿ: ಹಿಟ್​ ಅಂಡ್​ ರನ್ ಕೇಸ್​​ ಶಿಕ್ಷೆ, ದಂಡ ನಿಯಮ ಪರಿಷ್ಕರಣೆ ಭರವಸೆ: ಲಾರಿ ಮಾಲೀಕರ ಮುಷ್ಕರ ಅಂತ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.