ಮುಂಬೈ (ಮಹಾರಾಷ್ಟ್ರ): ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಬಗ್ಗೆ ಟೀಕೆ ಮಾಡಿದ್ದ ಕಾರಣಕ್ಕಾಗಿ ಮರಾಠಿ ನಟಿ ಕೇತ್ಕಿ ಚಿತಾಳೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಫೇಸ್ಬುಕ್ನಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ ಆರೋಪದಡಿ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.
ಹಿರಿಯ ರಾಜಕಾರಣಿಯಾದ ಪವಾರ್ ಬಗ್ಗೆ ಅಸಹ್ಯಕರ ಪದಗಳ ಬಳಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ವಿವಾದಿತ ಪೋಸ್ಟ್ ಬಗ್ಗೆ ಪೊಲೀಸ್ ಠಾಣೆಯಲ್ಲಿ ಕೇತ್ಕಿ ಚಿತಾಳೆ ವಿರುದ್ಧ ದೂರು ದಾಖಲಾಗಿತ್ತು.
ಈ ದೂರಿನ್ವಯ ಅವರನ್ನು ಥಾಣೆ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಈ ನಟಿ ನಿತ್ಯ ಪೋಸ್ಟ್ಗಳನ್ನು ಮಾಡುತ್ತಿರುತ್ತಾರೆ.
ಇದನ್ನೂ ಓದಿ: ತೆಲಂಗಾಣದಲ್ಲಿ ಸರಣಿ ಕೊಲೆ : KGF ಸಿನಿಮಾ ಆರೋಪಿಗಳಿಗೆ ಪ್ರೇರಣೆಯಾಯಿತೇ ಎಂಬ ಶಂಕೆ!