ETV Bharat / bharat

'ದೇವರೇ ನಮಗೆ ಎರಡನೇ ಜೀವನ ನೀಡಿದಂತಿದೆ': ಒಡಿಶಾ ರೈಲು ಅಪಘಾತದಲ್ಲಿ ಬದುಕುಳಿದ ಕುಟುಂಬ - ಈಟಿವಿ ಭಾರತ ಕನ್ನಡ

ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ​​ ಪಶ್ಚಿಮ ಬಂಗಾಳದ ಒಂದೇ ಕುಟುಂಬದ ಮೂವರು ಅದೃಷ್ಟವಶಾತ್ ಬದುಕುಳಿದಿದ್ದಾರೆ.

Etv odisha-train-mishap-three-of-a-family-survive-horrific-tragedy
'ದೇವರೇ ನನಗೆ ಎರಡನೇ ಜೀವನ ನೀಡಿದಂತಿದೆ': ಒಡಿಶಾ ರೈಲು ಅಪಘಾತದಲ್ಲಿ ಬದುಕುಳಿದ ಕುಟುಂಬ
author img

By

Published : Jun 3, 2023, 6:59 PM IST

ಪುರ್ಬಾ ಮೇದಿನಿಪುರ (ಪಶ್ಚಿಮ ಬಂಗಾಳ): ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಸುಮಾರು 288 ಜನರು ಸಾವನ್ನಪ್ಪಿದ್ದು, 747ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಈ ದುರಂತದಲ್ಲಿ ಅದೃಷ್ಟವಶಾತ್ ಪಶ್ಚಿಮ ಬಂಗಾಳದ ಒಂದೇ ಕುಟುಂಬದ​ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿ ತಮ್ಮ ಮನೆಗೆ ಮರಳಿದ್ದಾರೆ.

ಪಶ್ಚಿಮಬಂಗಾಳದ ಪುರ್ಬಾ ಮೇದಿನಿಪುರದ ಮಾಲುಬಸನ್ ಗ್ರಾಮದ ಸುಬ್ರತೋ ಪಾಲ್​, ದೇಬೋಶ್ರೀ ಪಾಲ್​ ಮತ್ತು ಅವರ ಮಗ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದಂಪತಿಯು ತಮ್ಮ ಮಗನನ್ನು ಚೆನ್ನೈನ ವೈದ್ಯರಲ್ಲಿಗೆ ತಪಾಸಣೆ ನಡೆಸಲು ತೆರಳುತ್ತಿದ್ದರು. ಈ ವೇಳೆ ಒಡಿಶಾದ ಬಾಲಸೋರ್​​ನಲ್ಲಿ ರೈಲು ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಸುಬ್ರತೋ ಪಾಲ್​​, ಘಟನೆ ಬಳಿಕ ನಾನು ಹೊಸ ಜೀವನವನ್ನು ಪಡೆದಿದ್ದೇನೆ. ನಿನ್ನೆ ನಾವು ಖರಗ್‌ಪುರ ರೈಲು ನಿಲ್ದಾಣದಿಂದ ಚೆನ್ನೈಗೆ ಹೊರಟ್ಟಿದ್ದೆವು. ಈ ವೇಳೆ ನಾವು ಸಂಚರಿಸುತ್ತಿದ್ದ ರೈಲು ಇಲ್ಲಿನ ಬಾಲಸೋರ್ ನಿಲ್ದಾಣ ಕಳೆದ ಬಳಿಕ ಕಂಪಿಸಿದ ಅನುಭವವಾಯಿತು. ಬಳಿಕ ಏನಾಯಿತು ಎಂದು ಗೊತ್ತಾಗಲಿಲ್ಲ. ನಾನು ರೈಲ್ವೆ ಬೋಗಿಯಲ್ಲಿ ಹೊಗೆಯಿಂದ ತುಂಬಿರುವುದನ್ನು ಮಾತ್ರ ನೋಡಿದೆ. ಹೊಗೆಯ ಕಾರಣದಿಂದ ಬೇರೆ ಏನೂ ಕಾಣುತ್ತಿರಲಿಲ್ಲ. ಈ ವೇಳೆ ನನ್ನ ಸಹಾಯಕ್ಕೆ ಸ್ಥಳೀಯರು ಆಗಮಿಸಿದರು. ಅವರು ಅವಶೇಷಗಳ ನಡುವೆ ಸಿಲುಕಿದ್ದ ನನ್ನನ್ನು ಹೊರತೆಗೆದರು. ದೇವರು ನನಗೆ ಎರಡನೇ ಬದುಕನ್ನು ನೀಡಿದಂತಿದೆ ಎಂದು ಹೇಳಿದರು.

ಅಪಘಾತದ ಸಮಯದಲ್ಲಿ ನಾನು ಕಂಡ ದೃಶ್ಯಗಳು ಎಂದಿಗೂ ನನ್ನ ಮನಸ್ಸಿನಿಂದ ಮಾಸುವುದಿಲ್ಲ ಎಂದು ಅಪಘಾತದಿಂದ ಅದೃಷ್ಟವಶಾತ್ ಪಾರಾಗಿ ಬಂದ ದೇಬೋಶ್ರೀ ಪಾಲ್ ಹೇಳಿದ್ದಾರೆ. ನಾವು ನಮ್ಮ ಮಗುವನ್ನು ವೈದ್ಯರಿಗೆ ತೋರಿಸಲು ಚೆನ್ನೈಗೆ ಹೋಗುತ್ತಿದ್ದೆವು. ಈ ವೇಳೆ ಬಾಲಸೋರ್‌ನಲ್ಲಿ ಅಪಘಾತ ಸಂಭವಿಸಿದೆ. ಈ ವೇಳೆ ನಮ್ಮ ಸುತ್ತಮುತ್ತಲೂ ಏನಾಗುತ್ತಿದೆ ಎಂಬುದು ಗೊತ್ತಾಗಲಿಲ್ಲ. ಅಲ್ಲದೆ ಈ ವೇಳೆ ನಮ್ಮ ಮಗನನ್ನು ಹುಡುಕಲು ನಮಗೆ ಸಾಧ್ಯವಾಗಲಿಲ್ಲ. ನಾವು ಹೇಗೆ ಬದುಕುಳಿದೆವು ಎಂದು ತಿಳಿದಿಲ್ಲ. ಇದು ನಮಗೆ ಎರಡನೇ ಜೀವನದಂತಿದೆ. ನಾನು ಜೀವಂತವಾಗಿರುವವರೆಗೆ, ಈ ಅಪಘಾತದ ದೃಶ್ಯಗಳು ನನ್ನ ಮನಸ್ಸಿನಿಂದ ಹೋಗುವುದಿಲ್ಲ ಎಂದು ಹೇಳಿದರು.

288 ಮಂದಿ ಸಾವು : ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ಈವರೆಗೆ 288 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲುಗಳ ನಡುವೆ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಏಳು NDRF ತಂಡಗಳು, 5 ODRAF ತಂಡಗಳು ಮತ್ತು 24 ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ತುರ್ತು ರಕ್ಷಣಾ ಘಟಕಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದರು. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಅಪಘಾತ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದು, ತನಿಖೆ ನಡೆಯುತ್ತಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

ಇದನ್ನೂ ಓದಿ : 261 ಜನರ ಸಾವು.. ಭೀಕರ ರೈಲು ಅಪಘಾತಕ್ಕೆ ಕಾರಣ ತಾಂತ್ರಿಕ ದೋಷವೋ, ಮಾನವ ದೋಷವೋ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.