ಭುವನೇಶ್ವರ(ಒಡಿಶಾ): ಮೃಗಾಯಲದಲ್ಲಿದ್ದ ಆಟಿಕೆಯ ರೈಲು(Toy train) ಬೆಂಕಿಗೆ ತುತ್ತಾಗಿ ಸುಮಾರು 45 ಪ್ರಯಾಣಿಕರು ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಒಡಿಶಾದ ನಂದನಕಾನನ್ ಮೃಗಾಲಯದಲ್ಲಿ ನಡೆದಿದೆ.
ತಾಂತ್ರಿಕ ಅಡಚಣೆಯಿಂದಾಗಿ ಆಟಿಕೆ ರೈಲಿನ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ನಂದನ್ಕಾನನ್ ಮೃಗಾಲಯದ ಉಪ ನಿರ್ದೇಶಕ ಸಂಜೀತ್ ಕುಮಾರ್ ತಿಳಿಸಿದ್ದು, ಆಟಿಕೆ ರೈಲನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದಾರೆ.
ಅಕ್ಟೋಬರ್ 8ರಂದು ಒಡಿಶಾದ ಅರಣ್ಯ ಮತ್ತು ಪರಿಸರ ಸಚಿವ ಬಿಕ್ರಂ ಕೇಶರಿ ಅರುಖಾ ಅವರು ನಂದನಕಾನನ್ ಮೃಗಾಯಲಯಕ್ಕೆ ಆಗಮಿಸಿ, ಪರಿಸರ ಸ್ನೇಹಿ, ಬ್ಯಾಟರಿ ಚಾಲಿತ ಆಟಿಕೆ ರೈಲಿಗೆ ಚಾಲನೆ ನೀಡಿದ್ದರು. ಈಗ ಆ ಆಟಿಕೆಯ ರೈಲು ಸ್ಥಗಿತಗೊಳ್ಳುವ ಸ್ಥಿತಿಗೆ ತಲುಪಿದೆ.
ಇದನ್ನೂ ಓದಿ:ಪಾಂಪೋರ್ ಎನ್ಕೌಂಟರ್: ಮೋಸ್ಟ್ ವಾಂಟೆಡ್ ಎಲ್ಇಟಿ ಉಗ್ರ ಸೆರೆ