ಭುವನೇಶ್ವರ(ಒಡಿಶಾ): ಒಡಿಯಾ ಚಿತ್ರರಂಗದ ನಟ ಬಾಬುಶಾನ್ ಮೊಹಾಂತಿ, ಪತ್ನಿ ತೃಪ್ತಿ ಸತಪತಿ ಮತ್ತು ನಟಿ ಪ್ರಕೃತಿ ನಡುವೆ ಇಂದು ಬೆಳಗ್ಗೆ ಜಗಳವಾಗಿದೆ. ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಂದು ಬೆಳಗ್ಗೆ ಭುವನೇಶ್ವರದ ಲಕ್ಷ್ಮೀಸಾಗರ್ ಪ್ರದೇಶದಲ್ಲಿ ಈ ಸೆಲೆಬ್ರಿಟಿಗಳು ಮತ್ತು ನಟನ ಪತ್ನಿ ಕಾರಿನಲ್ಲಿ ಜಗಳವಾಡಿದ್ದು, ಈ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಚಿತ್ರೀಕರಿಸಿ ವೈರಲ್ ಮಾಡಿದ್ದಾರೆ. ಕಾರಿನಲ್ಲಿದ್ದವರು ಒಬ್ಬರಿಗೊಬ್ಬರು ಕೈ ಮಾಡಿಕೊಂಡಿದ್ದನ್ನು ದೃಶ್ಯದಲ್ಲಿ ಕಾಣಬಹುದಾಗಿದೆ.
ಬಾಬುಶಾನ್ ಅವರು ನಟಿ ಪ್ರಕೃತಿ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ತೃಪ್ತಿ ಸತಪತಿ ಆರೋಪಿಸಿದ್ದಾರೆ. ಅವರನ್ನು ಕಾರಿನಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದ ತೃಪ್ತಿ ಸತಪತಿ ಇಬ್ಬರನ್ನು ಥಳಿಸಿದ್ದಾರೆ.
ಇದನ್ನೂ ಓದಿ: ಸಲಗ ಪಾರ್ಟ್ 2 ಬಗ್ಗೆ ದುನಿಯಾ ವಿಜಯ್ ಹೇಳಿದ್ದೇನು?
ನಟಿ ಪ್ರಕೃತಿ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದು, ತೃಪ್ತಿ ಅವರನ್ನು ಬೆನ್ನಟ್ಟಿದ್ದಾರೆ. ಪ್ರಕೃತಿಯನ್ನು ಆಟೋ ಹತ್ತದಂತೆ ತಡೆದ ತೃಪ್ತಿ ಅವರು ಆಕೆ ತನ್ನ ಕುಟುಂಬವನ್ನು ಹಾಳು ಮಾಡಿದ್ದಾರೆಂದು ರಸ್ತೆಯಲ್ಲೇ ಕಿಡಿಕಾರಿದ್ದಾರೆ.