ETV Bharat / bharat

ಸಾರ್ವಜನಿಕ ಸ್ಥಳದಲ್ಲಿದ್ದ ಟಿವಿ ಪರದೆ ಮೇಲೆ ಅಶ್ಲೀಲ ಪದಗಳ ಪ್ರಸಾರ - ಈಟಿವಿ ಭಾರತ ಕನ್ನಡ

ಬಿಹಾರದ ಭಾಗಲ್‌ಪುರ ಸ್ಟೇಷನ್ ಚೌಕ್‌ನಲ್ಲಿರುವ ಟಿವಿ ಪರದೆಯಲ್ಲಿ ಅಶ್ಲೀಲ ಪದಗಳನ್ನು ಪ್ರದರ್ಶಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Obscene text displayed on TV screen at Baghalpur Station Chowk
ಟಿವಿ ಪರದೆಯ ಮೇಲೆ ಅಶ್ಲೀಲ ಪದ ಪ್ರದರ್ಶನ : ತನಿಖೆ ಚುರುಕುಗೊಳಿಸಿದ ಪೊಲೀಸರು
author img

By

Published : Apr 18, 2023, 4:45 PM IST

ಭಾಗಲ್ಪುರ್ (ಬಿಹಾರ): ಬಿಹಾರದ ಪಾಟ್ನಾ ರೈಲ್ವೇ ನಿಲ್ದಾಣದಲ್ಲಿ ಅಳವಡಿಸಿದ್ದ ಟಿವಿ ಪರದೆಯಲ್ಲಿ ಅಶ್ಲೀಲ ವಿಡಿಯೋ ಪ್ರಸಾರವಾದ ಕೆಲವು ದಿನಗಳ ನಂತರ ಇಲ್ಲಿನ ಭಾಗಲ್ಪುರ ಸ್ಟೇಷನ್​ ಚೌಕ್​​ ಬಳಿ ಇರುವ ಟಿವಿ ಪರದೆ ಮೇಲೆ ಆಶ್ಲೀಲ ಪದಗಳನ್ನು ಪ್ರದರ್ಶಿಸಿರುವ ಘಟನೆ ನಡೆದಿದೆ. ಸುಮಾರು 5 ರಿಂದ 10 ನಿಮಿಷಗಳ ಕಾಲ ಆಶ್ಲೀಲ ಪದಗಳು ಪ್ರಸಾರವಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ದಾರಿಹೋಕರು ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಕೆಲವರು ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಪರದೆಯನ್ನು ಸ್ಥಗಿತಗೊಳಿಸಿದ್ದಾರೆ. ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಉಪವಿಭಾಗಾಧಿಕಾರಿ (ಎಸ್​ಡಿಓ) ಧನಂಜಯ್​ ಕುಮಾರ್​ ಮತ್ತು ಉಪ ಪೊಲೀಸ್​ ಅಧೀಕ್ಷಕ ಅಜಯ್​ಕುಮಾರ್​​ ಚೌಧರಿ ಪ್ರತಿಕ್ರಿಯಿಸಿ, ಪ್ರಕರಣ ಸಂಬಂಧ ತನಿಖೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರತ್ಯಕ್ಷದರ್ಶಿ ಕನ್ಹಯ್ಯಾ ಯಾದವ್ ಮಾತನಾಡಿ, ರಾತ್ರಿ 10 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಸ್ನೇಹಿತರು ಸ್ಟೇಷನ್ ಚೌಕ್ ಬಳಿ ನಿಂತಿದ್ದಾಗ ಭೀಮರಾವ್ ಅಂಬೇಡ್ಕರ್ ಪ್ರತಿಮೆಯ ಮೇಲಿರುವ ಟಿವಿ ಪರದೆಯ ಮೇಲೆ ಅಶ್ಲೀಲ ಪದಗಳು ಪ್ರಸಾರಗೊಂಡಿವೆ. ಸುಮಾರು 5 ರಿಂದ 10 ನಿಮಿಷಗಳ ಕಾಲ ಪ್ರದರ್ಶನವಾಗಿದೆ. ತಕ್ಷಣವೇ ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದರು.

ಭೀಮರಾವ್ ಅಂಬೇಡ್ಕರ್ ಪ್ರತಿಮೆಯ ಮೇಲೆ ವಿವಾದಾತ್ಮಕ ಪದಗಳನ್ನು ಪ್ರದರ್ಶಿಸಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಕರಣದ ತನಿಖೆ ನಡೆಸಲು ನಾವು ತಂತ್ರಜ್ಞರನ್ನು ಕರೆಸಿದ್ದೇವೆ. ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗುವುದು. ತನಿಖೆ ಮುಂದುವರೆದಿದೆ ಎಂದು ಭಾಗಲ್ಪುರ ಡಿಎಸ್ಪಿ ಮಾಹಿತಿ ನೀಡಿದರು.

ಕಳೆದ ಮಾರ್ಚ್‌ ತಿಂಗಳಲ್ಲಿ, ಪಾಟ್ನಾ ರೈಲ್ವೇ ನಿಲ್ದಾಣದಲ್ಲಿ ಟಿವಿ ಪರದೆಯ ಮೇಲೆ ಅಶ್ಲೀಲ ವಿಡಿಯೋ ಪ್ರದರ್ಶನಗೊಂಡಿತ್ತು. ಒಟ್ಟು ಮೂರು ನಿಮಿಷಗಳ ಕಾಲ ವಿಡಿಯೋ ಪ್ಲೇ ಆಗಿದ್ದು, ಪ್ರಯಾಣಿಕರಲ್ಲಿ ಮುಜುಗರ ಮೂಡಿಸಿತ್ತು. ಪ್ರಯಾಣಿಕರು ರೈಲ್ವೆ ಪೊಲೀಸ್ ಮತ್ತು ರೈಲ್ವೆ ರಕ್ಷಣಾ ಪಡೆಗೆ ದೂರು ಸಲ್ಲಿಸಿದ್ದರು.

ಇದನ್ನೂ ಓದಿ : ಮೂರಂಸ್ತಿನ ರೈಸ್​ ಮಿಲ್​ ಕಟ್ಟಡ ಕುಸಿತ: ಇಬ್ಬರ ಸಾವು, 30 ಕ್ಕೂ ಅಧಿಕ ಮಂದಿ ನಾಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.