ETV Bharat / bharat

ದುಧ್ವಾ ಹುಲಿ ಸಂರಕ್ಷಿತಾರಣ್ಯ: ಮರಿಯೊಂದಿಗೆ ತಾಯಿ ಹುಲಿ ಪತ್ತೆ - ಉತ್ತರಪ್ರದೇಶದ ಲಖಿಂಪುರ ಖೇರಿ ಜಿಲ್ಲೆ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿರುವ ದುಧ್ವಾ ಹುಲಿ ಸಂರಕ್ಷಿತಾರಣ್ಯದಲ್ಲಿ ಐದು ಮರಿಗಳೊಂದಿಗೆ ತಾಯಿ ಹುಲಿ ಪತ್ತೆಯಾಗಿದೆ.

number-of-tigers-increased-in-dudhwa-tiger-reserve-tigress-seen-with-five-cubs
ದುಧ್ವಾ ಹುಲಿ ಸಂರಕ್ಷಿತಾರಣ್ಯ : ಐದು ಮರಿಯೊಂದಿಗೆ ತಾಯಿ ಹುಲಿ ಪತ್ತೆ
author img

By

Published : Apr 6, 2023, 9:23 PM IST

ಲಖಿಂಪುರ ಖೇರಿ (ಉತ್ತರ ಪ್ರದೇಶ) : ಇಲ್ಲಿನ ದುಧ್ವಾ ಹುಲಿ ಸಂರಕ್ಷಿತಾರಣ್ಯದಲ್ಲಿ ಹುಲಿ ಸಂಖ್ಯೆ ಹೆಚ್ಚಳವಾಗುತ್ತಿದೆ. ಕಿಶನ್​ಪುರ ಸೆಂಚುರಿಯಲ್ಲಿ ಹೆಣ್ಣು ಹುಲಿಯೊಂದು ತನ್ನ ಐದು ಮರಿಗಳೊಂದಿಗೆ ಸಾಗುತ್ತಿರುವುದು ಪತ್ತೆಯಾಗಿದೆ. ಇದನ್ನು ಕಂಡು ಪ್ರವಾಸಿಗರು ಪುಳಕಗೊಂಡಿದ್ದಾರೆ.

ಕಿಶನ್​ಪುರ ಸೆಂಚುರಿಯಲ್ಲಿ ಹುಲಿ ಮತ್ತು ಮರಿಗಳು ಕಂಡುಬಂದ ಹಿನ್ನೆಲೆಯಲ್ಲಿ ದುಧ್ವಾ ಹುಲಿ ಸಂರಕ್ಷಿತಾರಣ್ಯದ ಆಡಳಿತ ಮಂಡಳಿ ಇವುಗಳ ಮೇಲೆ ಕಣ್ಗಾವಲಿರಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದುಧ್ವಾ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ಬಿ.ಪ್ರಭಾಕರ್​​, ಈ ಹುಲಿ ಮರಿಗಳ ಮೇಲೆ ಕ್ಯಾಮರಾಗಳ ಮೂಲಕ ನಿಗಾ ಇಡಲಾಗುವುದು. ತಾಯಿ ಹುಲಿಯ ಮೇಲೂ ನಿಗಾ ಇಡಲಾಗುವುದು. ಈ ಪ್ರದೇಶಕ್ಕೆ ಪ್ರವಾಸಿಗರನ್ನು ಭೇಟಿ ನಿರ್ಬಂಧಿಸಲಾಗುವುದು ಎಂದು ತಿಳಿಸಿದರು.

ದುಧ್ವಾ ಹುಲಿ ಸಂರಕ್ಷಿತಾರಣ್ಯವು ಅಳಿವಿನಂಚಿನಲ್ಲಿರುವ ಹುಲಿಗಳಿಗೆ ವರದಾನವಾಗಿದೆ. ಕಿಶನ್​ಪುರ್​ ಸಂಚುರಿಯಲ್ಲಿ ಐದು ಮರಿಗಳೊಂದಿಗೆ ಹುಲಿ ಕಾಣಿಸಿಕೊಂಡಿರುವ ವಿಡಿಯೋವನ್ನು ದುಧ್ವಾದ ಉಪನಿರ್ದೇಶಕ ರಂಗರಾಜು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಐದು ಮರಿಗಳು ವಿವಿಧೆಡೆ ಕಾಣಿಸುತ್ತಿವೆ. ಒಂದೆಡೆ ಮೂರು, ಮತ್ತೊಂದೆಡೆ ಎರಡು ಮರಿಗಳು ಪತ್ತೆಯಾಗಿದೆ. ಕಿಶನ್ ಪುರನಲ್ಲಿ ಮರಿಗಳು ಪತ್ತೆಯಾಗಿರುವುದು ಸಂತಸದ ಸಂಗತಿ. ಇದು ನಮಗೆ ಯಾವುದೇ ಇತರ ದೊಡ್ಡ ಸುದ್ದಿಗಿಂತ ಕಡಿಮೆಯಲ್ಲ ಎಂದು ದುಧ್ವಾನ ಉಪನಿರ್ದೇಶಕ ಡಾ.ರಂಗರಾಜು ಹೇಳಿದ್ದಾರೆ.

ನಮ್ಮ ನೇಚರ್​​ ಗೈಡ್​ ಮತ್ತು ಸಿಬ್ಬಂದಿ ಹುಲಿ ಮತ್ತು ಮರಿಗಳು ಇರುವ ಸ್ಥಳ ಪತ್ತೆ ಹಚ್ಚಿದ್ದಾರೆ. ಇವುಗಳ ವಿಡಿಯೊವನ್ನು ಮತ್ತು ಫೋಟೋಗಳನ್ನು ತೆಗೆದುಕೊಳ್ಳಲಾಗಿದೆ. ಹೊಸ ಹುಲಿ ಮರಿಗಳು ಕಂಡ ಬಳಿಕ ನಮ್ಮ ಸಿಬ್ಬಂದಿಗಳ ಜವಾಬ್ದಾರಿಯೂ ಹೆಚ್ಚಿದೆ. ಈ ಮರಿಗಳ ಮೇಲೆ ನಿಗಾ ಇಡಲು ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ. ಇಲ್ಲಿನ ಪ್ರದೇಶದಲ್ಲಿ ಕ್ಯಾಮರಾ ಅಳವಡಿಸಲಾಗಿದ್ದು, ಈ ಹುಲಿಗಳ ಮೇಲೆ ನಿಗಾ ಇಡಲಾಗುತ್ತಿದೆ ಎಂದು ಡಾ.ರಂಗರಾಜು ಹೇಳಿದ್ದಾರೆ.

ಸಂರಕ್ಷಿತಾರಣ್ಯದ ಎಲ್ಲಾ ಸಿಬ್ಬಂದಿ ಈ ಮರಿಗಳನ್ನು ಸುರಕ್ಷಿತವಾಗಿಡುವ ನಿಟ್ಟಿನಲ್ಲಿ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ಭದ್ರತೆಯ ದೃಷ್ಟಿಯಿಂದ ಕಿಶನ್‌ಪುರ ಸೆಂಚುರಿ ಸುತ್ತಮುತ್ತಲೂ ಪ್ರವಾಸಿ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಭಾರತ ಮತ್ತು ನೇಪಾಳ ಗಡಿಯ ಸಂಪೂರ್ಣನಗರ ವ್ಯಾಪ್ತಿಯಲ್ಲಿ ಎರಡು ಮರಿಗಳೊಂದಿಗೆ ಹುಲಿಯೊಂದು ಕಾಣಿಸಿಕೊಂಡಿತ್ತು. ಈ ಎರಡು ಮರಿಗಳ ಭದ್ರತೆಯನ್ನು ದುಧ್ವಾ ಹುಲಿ ಸಂರಕ್ಷಿತಾರಣ್ಯದ ಅಧಿಕಾರಿಗಳು ವಹಿಸಿಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಕಿಶನ್‌ಪುರ ಸೆಂಚುರಿಯಲ್ಲಿ ಮೂರು ಹುಲಿ ಮರಿಗಳು ಕಾಣಿಸಿಕೊಂಡಿದ್ದವು. ಬಳಿಕ ಈ ಮರಿಗಳು ನಾಪತ್ತೆಯಾಗಿದ್ದವು. ಆ ಸಂದರ್ಭದಲ್ಲಿ ಮರಿಗಳ ಸುರಕ್ಷತೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.

ಇದನ್ನೂ ಓದಿ : ಹುಲಿ - ಕರಡಿ ನಡುವೆ ಕಾದಾಟ: ಪ್ರವಾಸಿಗರ ಮೊಬೈಲ್​ನಲ್ಲಿ ರೋಚಕ ದೃಶ್ಯ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.