ನವದೆಹಲಿ : ಕೇಂದ್ರದ ಮಾಜಿ ಸಚಿವ ಎಂ ಜೆ ಅಕ್ಬರ್ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣವನ್ನು ದೆಹಲಿ ಕೋರ್ಟ್ನಲ್ಲಿ ಕಳೆದ ವರ್ಷ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ಬುಧವಾರ ನ್ಯಾಯಾಲಯ ನಡೆಸಿದ್ದು, ನಾನು ಮಾಡಿರುವ ಆರೋಪ ಸತ್ಯವಾಗಿದೆ ಎಂದು ರಮಣಿ ಕೋರ್ಟ್ಗೆ ಹೇಳಿದ್ದಾರೆ.
ಮಾಜಿ ಸಚಿವ ಅಕ್ಬರ್ ಅವರು ಪತ್ರಕರ್ತರಾಗಿದ್ದಾಗ ಸುಮಾರು 20 ವರ್ಷಗಳ ಹಿಂದೆ ನಡೆಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ಬಹಿರಂಗಪಡಿಸಿದ್ದು, ಒಂದು ಒಳ್ಳೆಯ ಉದ್ದೇಶದಿಂದ. ಇದರಿಂದ ಸಾರ್ವಜನಿಕರಿಗೆ ಒಳಿತಾಗಲಿ ಎಂದು ಪ್ರಿಯಾ ರಮಣಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ರಿಯಾ ಸಹೋದರ ಶೋವಿಕ್ಗೆ ಜಾಮೀನು ನೀಡಿದ ವಿಶೇಷ ಎನ್ಡಿಪಿಎಸ್ ಕೋರ್ಟ್
ರಮಣಿ ನನ್ನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿ ಅವಮಾನ ಮಾಡಿದ್ದಾರೆ ಎಂದು ಅಕ್ಬರ್ ದೂರು ನೀಡಿದ್ದರು. 2018ರಲ್ಲಿ #MeToo ಚಳವಳಿಯ ವೇಳೆ ಅಕ್ಬರ್ ವಿರುದ್ಧದ ನಾನು ಮಾಡಿದ ಆರೋಪಗಳು ಸತ್ಯ ಎಂದು ರಮಣಿ ಹೇಳಿದ್ದಾರೆ.
ರಮಣಿ, ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ರವೀಂದ್ರ ಕುಮಾರ್ ಪಾಂಡೆ ಅವರ ಮುಂದೆ ಹಿರಿಯ ವಕೀಲ ರೆಬೆಕಾ ಜಾನ್ ಮೂಲಕ ತಮ್ಮ ಹೇಳಿಕೆ ಸಲ್ಲಿಕೆ ಮಾಡಿದ್ದಾರೆ.