ನುಹ್ (ಹರಿಯಾಣ): ಹರಿಯಾಣದ ನುಹ್ ಜಿಲ್ಲೆಯಲ್ಲಿ ವಾರದ ಹಿಂದೆ ನಡೆದ ಹಿಂಸಾಚಾರ ಮತ್ತು ಗಲಭೆಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 156 ಜನರನ್ನು ಬಂಧಿಸಲಾಗಿದ್ದು 56 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಹಿಂಸಾಚಾರದಲ್ಲಿ ಇದುವರೆಗೆ 6 ಜನರು ಮೃತಪಟ್ಟಿದ್ದು, 88 ಜನ ಗಾಯಗೊಂಡಿರುವುದಾಗಿ ಇಲ್ಲಿನ ಅಧಿಕಾರಿಗಳು ಖತಪಡಿಸಿದ್ದಾರೆ.
-
#WATCH | Barricading & checking underway by Haryana Police in Nuh.
— ANI (@ANI) August 7, 2023 " class="align-text-top noRightClick twitterSection" data="
Curfew will be lifted in Nuh from 9 am to 1 pm today for the movement of the public. pic.twitter.com/Bt2OzwptdL
">#WATCH | Barricading & checking underway by Haryana Police in Nuh.
— ANI (@ANI) August 7, 2023
Curfew will be lifted in Nuh from 9 am to 1 pm today for the movement of the public. pic.twitter.com/Bt2OzwptdL#WATCH | Barricading & checking underway by Haryana Police in Nuh.
— ANI (@ANI) August 7, 2023
Curfew will be lifted in Nuh from 9 am to 1 pm today for the movement of the public. pic.twitter.com/Bt2OzwptdL
ಜಿಲ್ಲೆ ಪುನಃ ಸಹಜಸ್ಥಿತಿಗೆ ಬರುತ್ತಿರುವುದರಿಂದ 144 ಜಾರಿಯನ್ನು ಸ್ವಲ್ಪ ಮಟ್ಟಿಗೆ ಸಡಿಲಗೊಳಿಸಲಾಗಿದೆ. ಭಾನುವಾರ ಕರ್ಫ್ಯೂ ಹಿಂದಕ್ಕೆ ಪಡೆಯುವ ಮೂಲಕ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರ ವರೆಗೆ ಸಾರ್ವಜನಿಕರ ಸಂಚಾರಕ್ಕಾಗಿ ಅನುವು ಮಾಡಿಕೊಡಲಾಗಿತ್ತು. ಸೋಮವಾರ ಸಹ ಇದೇ ರೀತಿ ಮುಂದುವರೆಯಲಿದೆ. ಇಂದು ಬ್ಯಾಂಕ್ ಮತ್ತು ಎಟಿಎಂಗಳು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಕರ್ಫ್ಯೂ ಸಡಿಲಿಕೆಯ ಸಮಯ ಮುಂದುವರೆಯಲಿದೆ. ಸಾರ್ವಜನಿಕರು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಬಹುದು. ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರಿಗೆ ಜಿಲ್ಲೆಯಲ್ಲಿ ಇಂಟರ್‌ನೆಟ್ ನಿಷೇಧ ಮುಂದುವರಿಯಲಿದೆ ಎಂದು ನುಹ್ ಉಪ ಆಯುಕ್ತ ಧೀರೇಂದ್ರ ಖಡ್ಗತಾ ತಿಳಿಸಿದ್ದಾರೆ.
ಇದನ್ನೂ ಓದಿ: ಹರಿಯಾಣ ಹಿಂಸಾಚಾರ: ಇಂದು ಸಹ ಮುಂದುವರಿದ ಬುಲ್ಡೋಜರ್ ಸದ್ದು, ಸಮಾಜಘಾತುಕರಿಗೆ ತಟ್ಟಿದ ಬಿಸಿ
ಕರ್ಫ್ಯೂ ಸಡಿಲಗೊಂಡರೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಅಕ್ರಮ ಕಟ್ಟಡ ನಿರ್ಮಿಸಿದವರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದ್ದು, ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆ ನಡೆಸಿತ್ತು. ಸದ್ಯ ಅದಕ್ಕೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತಡೆ ನೀಡಿದೆ. ನುಹ್ ನಗರದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಬ್ಯಾಂಕ್ ಮತ್ತು ಎಟಿಎಂಗಳನ್ನು ತೆರೆಯಲು ಆದೇಶ ನೀಡಲಾಗಿದೆ. ಬ್ಯಾಂಕ್‌ನಲ್ಲಿ ಹಣಕಾಸಿನ ವಹಿವಾಟಿನ ಸಮಯ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ, ಎಟಿಎಂಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 3ರ ವರೆಗೆ ತೆರೆದಿರುತ್ತವೆ ಎಂದು ಖಡ್ಗಟಾ ತಿಳಿಸಿದ್ದಾರೆ.
ಇದನ್ನೂ ಓದಿ: ಹರಿಯಾಣ ಹಿಂಸಾಚಾರದಲ್ಲಿ ಇಬ್ಬರು ಗೃಹರಕ್ಷಕ ದಳದ ಸಿಬ್ಬಂದಿ ಸಾವು: ಶಾಲಾ - ಕಾಲೇಜು ಬಂದ್, ಇಂಟರ್ನೆಟ್ ಸೇವೆ ಸ್ಥಗಿತ!
ಹರಿಯಾಣದ ನುಹ್ ಜಿಲ್ಲೆಯಲ್ಲಿ ಜುಲೈ 31ರ ಸೋಮವಾರ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿತ್ತು. ಹಿಂಸಾಚಾರದಲ್ಲಿ ಇಬ್ಬರು ಗೃಹರಕ್ಷಕ ದಳದ ಸಿಬ್ಬಂದಿ ಸೇರಿದಂತೆ ಒಟ್ಟು 6 ಜನ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ಪರಿಣಾಮ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಈ ಪರಿಣಾಮ ಗಲಭೆ ಸೃಷ್ಟಿಯಾಗಿದ್ದರಿಂದ ರಾಜ್ಯದ 8 ಜಿಲ್ಲೆಗಳಾದ ನುಹ್, ಪಲ್ವಾಲ್, ಫರಿದಾಬಾದ್, ರೆವಾರಿ, ಗುರುಗ್ರಾಮ್, ಮಹೇಂದ್ರಗಢ, ಸೋನಿಪತ್ ಮತ್ತು ಪಾಣಿಪತ್ನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಅಲ್ಲದೇ ಗಲಭೆ ಪೀಡಿದ ಪ್ರದೇಶದಲ್ಲಿ ಇಂಟರ್ನೆಟ್ ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಸದ್ಯ ಪರಿಸ್ಥಿತಿ ತಿಳಿಯಾಗುತ್ತಿರುವುದರಿಂದ ಹಲವಡೆ ಕರ್ಫ್ಯೂ ಸಡಿಲಿಕೆ ಮಾಡಲಾಗಿದೆ.
ಇದನ್ನೂ ಓದಿ: ಹರಿಯಾಣ ಘರ್ಷಣೆಗೆ 6 ಸಾವು, 116 ಮಂದಿ ಬಂಧನ; ಶಾಂತಿ ಕಾಪಾಡಲು ಸಿಎಂ ಖಟ್ಟರ್ ಮನವಿ