ನವದೆಹಲಿ: ಜಾಮಾ ಮಸೀದಿಯು ದಿಲ್ಲಿಯಲ್ಲಿ ತನ್ನದೇ ಆದ ಪಾತ್ರವನ್ನು ನಿರ್ವಹಿಸುವುದಲ್ಲದೆ, ತನ್ನದೇ ಆದ ಧಾರ್ಮಿಕ ಗುರುತನ್ನು ಸಹ ಹೊಂದಿದೆ. ದೆಹಲಿಗೆ ಬರುವ ಪ್ರವಾಸಿಗರು ಜಾಮಾ ಮಸೀದಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಆದರೆ ಈಗ ಮಸೀದಿಗೆ ಹುಡುಗಿಯರು ಏಕಾಂಗಿಯಾಗಿ ಹೋಗುವುದನ್ನು ನಿಷೇಧಿಸಲಾಗಿದೆ.
ಈ ಕುರಿತು ಜಾಮಾ ಮಸೀದಿ ಆಡಳಿತ ಮಂಡಳಿಯಿಂದ ಮಸೀದಿಯ ಗೋಡೆಗೆ ನೋಟಿಸ್ ಅಂಟಿಸಲಾಗಿದೆ. ಜಾಮಾ ಮಸೀದಿ ಆವರಣದಲ್ಲಿ ಹುಡುಗಿಯರು ಗುಂಪುಗಳಲ್ಲಿ ಅಥವಾ ಒಬ್ಬಂಟಿಯಾಗಿ ಬರುವುದನ್ನು ನಿಷೇಧಿಸಲಾಗಿದೆ ಎಂದು ಈ ನೋಟಿಸ್‌ನಲ್ಲಿ ಬರೆಯಲಾಗಿದೆ.
ನೋಟಿಸ್ ಚರ್ಚೆಗೆ ಗ್ರಾಸ: ಜಾಮಾ ಮಸೀದಿ ಆಡಳಿತ ಮಂಡಳಿ ಅಂಟಿಸಿರುವ ಈ ಸೂಚನೆ ಜನರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಸೀದಿಯ ಪ್ರವೇಶ ದ್ವಾರಗಳು ಮೊದಲಿನಂತೆ ತೆರೆದಿದ್ದರೂ, ಯಾವುದೇ ಬ್ಯಾರಿಕೇಡ್‌ಗಳನ್ನು ಅಥವಾ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿಲ್ಲ. ಇದಲ್ಲದೇ ಇಂದಿಗೂ ಜಾಮಾ ಮಸೀದಿ ಆವರಣದಲ್ಲಿ ಜನರು ಸ್ವಚ್ಛಂದವಾಗಿ ತಿರುಗಾಡುತ್ತಿರುವುದು ಕಂಡು ಬಂತು. ಈ ಬಗ್ಗೆ ಜಾಮಾ ಮಸೀದಿ ಆಡಳಿತದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಬೀಬುಲ್ಲಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ ಅವರು ಈ ಬಗ್ಗೆ ಪ್ರತಿಕ್ರಿಯಿಸಿಲ್ಲ.
ಜಾಮಾ ಮಸೀದಿ ಮೊಘಲರ ಕಾಲದ್ದು: ದೆಹಲಿಯಲ್ಲಿರುವ ಜಾಮಾ ಮಸೀದಿಯ ನಿರ್ಮಾಣವು ಮೊಘಲರ ಕಾಲದ್ದು ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಮಧ್ಯಪ್ರಾಚ್ಯ ಪ್ರದೇಶದ ಬುಖಾರಾ ಪ್ರದೇಶದ ಇಮಾಮ್ ಅನ್ನು ಇಲ್ಲಿಗೆ ಕರೆತಂದು ಇರಿಸಿಕೊಳ್ಳಲಾಯಿತು. ಪ್ರವಾದಿ ಮೊಹಮ್ಮದ್ನ ನಂತರ ಇಮಾಮ್ ಧರ್ಮದ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ.
ಇಮಾಮ್ ಬುಖಾರಿ ಅವರ ಕುಟುಂಬವು ಇಂತಹದ್ದೊಂದು ಮಾರ್ಗದರ್ಶಕ ಅಂದರ್ ಇಮಾತ್ ಕುಟುಂಬವಾಗಿ ಗುರುತಿಸಿಕೊಂಡಿದೆ. ಅವರಿಗೆ ಶಾಹಿ ಇಮಾಮ್ ಎಂಬ ಬಿರುದು ನೀಡಲಾಗಿದೆ. ಜಾಮಾ ಮಸೀದಿ ಸಂಕೀರ್ಣವನ್ನು ಭಾರತೀಯ ಪುರಾತತ್ವ ಸಮೀಕ್ಷೆಯ ನಿರ್ದೇಶನದ ಅಡಿಯಲ್ಲಿ ಜಾಮಾ ಮಸೀದಿ ಆಡಳಿತವು ನಿರ್ವಹಿಸುತ್ತದೆ.
ಓದಿ: ದೆಹಲಿಯ ಜಾಮಾ ಮಸೀದಿ ಮುಂದೆ ಸಾವಿರಾರು ಮುಸ್ಲಿಮರ ಪ್ರತಿಭಟನೆ- ವಿಡಿಯೋ