ETV Bharat / bharat

'ಕೌಂಟರ್-ಸೈಕ್ಲಿಕಲ್ ಕ್ಯಾಪಿಟಲ್ ಬಫರ್' ಸಕ್ರಿಯಗೊಳಿಸುವ ಅಗತ್ಯವಿಲ್ಲ: ಆರ್​ಬಿಐ

ಸಂಕಷ್ಟದ ಸಮಯದಲ್ಲಿ ಆರ್ಥಿಕತೆಗೆ ಸುಸ್ಥಿರ ಸಾಲ ನೀಡಿಕೆ ಉತ್ತೇಜಿಸುವ 'CCyB' 'ಕೌಂಟರ್-ಸೈಕ್ಲಿಕಲ್ ಕ್ಯಾಪಿಟಲ್ ಬಫರ್' ಅನ್ನು ಸದ್ಯಕ್ಕೆ ಸಕ್ರಿಯಗೊಳಿಸುವ ಅಗತ್ಯವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಆರ್​ಬಿಐ
ಆರ್​ಬಿಐ
author img

By

Published : Apr 6, 2022, 7:01 AM IST

ನವದೆಹಲಿ: ಈ ಸಂದರ್ಭದಲ್ಲಿ 'ಕೌಂಟರ್-ಸೈಕ್ಲಿಕಲ್ ಕ್ಯಾಪಿಟಲ್ ಬಫರ್' ಅನ್ನು ಸಕ್ರಿಯಗೊಳಿಸುವ ಅಗತ್ಯವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಂಗಳವಾರ ಹೇಳಿದೆ. ಸಂಕಷ್ಟದ ಸಮಯದಲ್ಲಿ ಆರ್ಥಿಕತೆಗೆ ಸುಸ್ಥಿರವಾದ ಸಾಲವನ್ನು ಉತ್ತೇಜಿಸಲು ಕೌಂಟರ್-ಸೈಕ್ಲಿಕಲ್ ಕ್ಯಾಪಿಟಲ್ ಬಫರ್ (CCyB) ಬಳಕೆ ಮಾಡಿಕೊಳ್ಳಲಾಗುತ್ತದೆ. ಆದರೆ ಇದು ಈಗ ಬ್ಯಾಂಕುಗಳಿಗೆ ಇರುವ ಈ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳುವ ಅಗತ್ಯ ಇಲ್ಲ ಎಂದು ಆರ್​ಬಿಐ ಸ್ಪಷ್ಟಪಡಿಸಿದೆ.

ಫೆಬ್ರವರಿ 5, 2015 ರಂದು ನೀಡಲಾದ ಮಾರ್ಗಸೂಚಿಗಳ ಪ್ರಕಾರ, 'ಸಿಸಿವೈಬಿ' ನ ಚೌಕಟ್ಟನ್ನು ರಿಸರ್ವ್ ಬ್ಯಾಂಕ್ ಜಾರಿಗೆ ತಂದಿದೆ. ಅದರಂತೆ, 'CCyB' ಅನ್ನು ಸೂಕ್ತ ಸಂದರ್ಭಗಳಲ್ಲಿ ಮಾತ್ರ ಸಕ್ರಿಯಗೊಳಿಸಬೇಕಾಗುತ್ತದೆ. ಸಾಮಾನ್ಯವಾಗಿ ಈ ಕುರಿತಾದ ಮಾಹಿತಿಯನ್ನ ಮುಂಚಿತವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

'CCyB' ಸೂಚಕಗಳ ಪರಿಶೀಲನೆ ಮತ್ತು ಪ್ರಾಯೋಗಿಕ ವಿಶ್ಲೇಷಣೆ ಆಧಾರದ ಮೇಲೆ, ಈ ಸಮಯದಲ್ಲಿ ಸಿಸಿವೈಬಿ ಅನ್ನು ಸಕ್ರಿಯಗೊಳಿಸುವ ಅಗತ್ಯವಿಲ್ಲ ಎಂದು ನಿರ್ಧರಿಸಲಾಗಿದೆ ಎಂದು ಆರ್​​​ಬಿಐ ತಿಳಿಸಿದೆ.

ಇದನ್ನೂ ಓದಿ: ರಾಜಕಾರಣಿಗಳಿಗೆ ಮಾತ್ರವಲ್ಲ ಮಾವಿನ ಗಿಡಕ್ಕೂ ಭದ್ರತೆ!..ಭೋಪಾಲ್​ನಲ್ಲಿವೆ ವಿವಿಐಪಿ ಮರಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.