ನವದೆಹಲಿ : ರೈಲ್ವೆ ಹಳಿಗಳ ಸುತ್ತಲೂ ಮತ್ತು ರೈಲ್ವೆ ಆವರಣದ ಒಳಗೆ ಬಿದ್ದಿರುವ ಸ್ಕ್ರ್ಯಾಪ್ (ನಿರುಪಯುಕ್ತವೆಂದು ಬಿಟ್ಟ ವಸ್ತುಗಳು)ಗಳನ್ನು ಮಾರಾಟ ಮಾಡುವ ಮೂಲಕ ಉತ್ತರ ರೈಲ್ವೆ ಬರೋಬ್ಬರಿ 227.71 ಕೋಟಿ ರೂಪಾಯಿ ಆದಾಯ ಗಳಿಸಿದೆ.
ಉತ್ತರ ರೈಲ್ವೆಯ ಜನರಲ್ ಮ್ಯಾನೇಜರ್ ಅಶುತೋಷ್ ಗಂಗಾಲ್ ಈ ಕುರಿತು ಪ್ರತಿಕ್ರಿಯಿಸಿ, "ಉತ್ತರ ರೈಲ್ವೆ ಇತರ ವಲಯ ರೈಲ್ವೆಗಳಿಗಿಂತ ಸ್ಕ್ರ್ಯಾಪ್ ಮಾರಾಟ ವಿಚಾರದಲ್ಲಿ ಮುಂದಿದೆ ಮತ್ತು ಈಗ ಭಾರತೀಯ ರೈಲ್ವೇಸ್ ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ (ಪಿಎಸ್‌ಯು) ಸ್ಕ್ರ್ಯಾಪ್ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ ಎಂದ್ರು.
ಕಳೆದ ಹಣಕಾಸು ವರ್ಷದಲ್ಲಿ ರೈಲ್ವೆ ಸ್ಕ್ರ್ಯಾಪ್ ಮಾರಾಟದಿಂದ ರೂ. 92.49 ಕೋಟಿ ಆದಾಯ ಪಡೆದಿದ್ರೆ, ಈ ಬಾರಿ 227.71 ಕೋಟಿ ರೂಪಾಯಿ ಆದಾಯ ಗಳಿಸುವ ಮೂಲಕ ದಾಖಲೆ ಬರೆದಿದೆ ಎಂದು ತಿಳಿಸಿದ್ರು.