ETV Bharat / bharat

ಯುದ್ಧ ಹಳೆಯದು.. ಅಹಿಂಸೆಯೊಂದೇ ದಾರಿ.. ರಷ್ಯಾ-ಉಕ್ರೇನ್ ಯುದ್ಧದ ಕುರಿತು ದಲೈ ಲಾಮಾ ಮಾತು - ಉಕ್ರೇನ್​ ಮೇಲೆ ಸಮರ ಸಾರಿದ ರಷ್ಯಾ

"20ನೇ ಶತಮಾನವು ಯುದ್ಧ ಮತ್ತು ರಕ್ತಪಾತದ ಶತಮಾನವಾಗಿತ್ತು. 21ನೇ ಶತಮಾನವು ಸಂಭಾಷಣೆಯ ಶತಮಾನವಾಗಿರಬೇಕು" ಎಂದು ಟಿಬೆಟಿಯನ್​ ಧರ್ಮಗುರು ದಲೈ ಲಾಮಾ ಹೇಳಿದ್ದಾರೆ..

ದಲೈ ಲಾಮಾ
ದಲೈ ಲಾಮಾ
author img

By

Published : Feb 28, 2022, 7:16 PM IST

ಧರ್ಮಶಾಲಾ (ಹಿಮಾಚಲ ಪ್ರದೇಶ): ಬೌದ್ಧ ಧರ್ಮ ಪ್ರತಿಪಾದಕ, ಟಿಬೆಟಿಯನ್​ ಧರ್ಮಗುರು ದಲೈ ಲಾಮಾ ಅವರು ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಪೂರ್ವ ಯುರೋಪಿಯನ್ ದೇಶದಲ್ಲಿ ಶಾಂತಿಯನ್ನು ತ್ವರಿತವಾಗಿ ಪುನಾಃ ಸ್ಥಾಪಿಸಲು ಕರೆ ನೀಡಿದ್ದಾರೆ.

"ನಮ್ಮ ಪ್ರಪಂಚವು ಎಷ್ಟು ಪರಸ್ಪರ ಅವಲಂಬಿತವಾಗಿದೆ ಎಂದರೆ ಎರಡು ದೇಶಗಳ ನಡುವಿನ ಹಿಂಸಾತ್ಮಕ ಸಂಘರ್ಷವು ಪ್ರಪಂಚದ ಇತರ ಭಾಗಗಳ ಮೇಲೆ ಅನಿವಾರ್ಯವಾಗಿ ಪರಿಣಾಮ ಬೀರುತ್ತದೆ. ಯುದ್ಧವು ಹಳೆಯದಾಗಿದೆ- ಅಹಿಂಸೆಯೊಂದೇ ಏಕೈಕ ಮಾರ್ಗವಾಗಿದೆ.

ನಾವು ಇತರ ಮಾನವ ಜೀವಿಗಳನ್ನು ಸಹೋದರರು ಮತ್ತು ಸಹೋದರಿಯ ಎಂದು ಪರಿಗಣಿಸುವ ಮೂಲಕ ಮಾನವೀಯತೆಯ ಏಕತೆಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಶಾಂತಿಯುತ ಜಗತ್ತನ್ನು ನಿರ್ಮಿಸಲು ಸಾಧ್ಯ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪುಟಿನ್‌ ಸೇನಾ ದಾಳಿಗೆ 16 ಮಕ್ಕಳು ಬಲಿ, ರಷ್ಯಾದ 5,300 ಯೋಧರು ಸಾವು: ಉಕ್ರೇನ್‌ ರಾಯಭಾರಿ ಇಗೊರ್ ಪೊಲಿಖಾ

ಸಮಸ್ಯೆಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಉತ್ತಮ ಸಂಭಾಷಣೆಯ ಮೂಲಕ ಪರಿಹರಿಸಬಹುದು ಎಂಬುದನ್ನು ಪುನರುಚ್ಚರಿಸಿದ ದಲೈ ಲಾಮಾ, "ನಿಜವಾದ ಶಾಂತಿಯು ಪರಸ್ಪರ ತಿಳುವಳಿಕೆ ಮತ್ತು ಪರಸ್ಪರರ ಯೋಗಕ್ಷೇಮದ ಗೌರವದ ಮೂಲಕ ಬರುತ್ತದೆ.

ನಾವು ಭರವಸೆಯನ್ನು ಕಳೆದುಕೊಳ್ಳಬಾರದು. 20ನೇ ಶತಮಾನವು ಯುದ್ಧ ಮತ್ತು ರಕ್ತಪಾತದ ಶತಮಾನವಾಗಿತ್ತು. 21ನೇ ಶತಮಾನವು ಸಂಭಾಷಣೆಯ ಶತಮಾನವಾಗಿರಬೇಕು" ಎಂದು ಟಿಬೆಟಿಯನ್ ನಾಯಕ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.