ಲಖನೌ: ಲಖನೌದಲ್ಲಿ ನಕ್ಸಲೈಟ್ ಅಜಿತ್ ಸಿಂಗ್ ಹತ್ಯೆಗೆ ಸಂಚು ರೂಪಿಸಿದ್ದಕ್ಕಾಗಿ ಮಾಜಿ ಬಿಎಸ್ಪಿ ಸಂಸದ ಮತ್ತು ಮಾಫಿಯಾ ಡಾನ್ ಧನಂಜಯ್ ಸಿಂಗ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ.
ಕಳೆದ ತಿಂಗಳು ಲಖನೌದಲ್ಲಿ ಅಜಿತ್ ಸಿಂಗ್ ಅವರನ್ನು ಕೊಲೆ ಮಾಡಿದ ಆರೋಪಿ ಗಿರಿಧಾರಿ ಎಂಬ ಶಾರ್ಪ್ಶೂಟರ್ನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಪ್ರಕರಣದಲ್ಲಿ ಬಿಎಸ್ಪಿ ಮಾಜಿ ಸಂಸದ ಧನಂಜಯ್ ಸಿಂಗ್ ಪಾತ್ರವನ್ನು ಪರಿಶೀಲಿಸಲಾಗುತ್ತಿದೆ ಮತ್ತು ಪಿತೂರಿಯಲ್ಲಿ ಅವರು ಭಾಗಿಯಾಗಿದ್ದಾರೆ ಎಂಬುದನ್ನು ಪುರಾವೆಗಳು ಸೂಚಿಸುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆ ನ್ಯಾಯಾಲಯವು ಧನಂಜಯ್ ಸಿಂಗ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ಇದನ್ನೂ ಓದಿ: 16 ಗಂಟೆಗಳ ಕಾಲ ಭಾರತ-ಚೀನಾ ಮಿಲಿಟರಿ ಮಾತುಕತೆ: ಇನ್ನೂ 3 ಪ್ರದೇಶಗಳಿಂದ ಹಿಂದಕ್ಕೆ ಸರಿಯಲಿವೆಯೇ ಸೇನೆಗಳು?