ETV Bharat / bharat

ನಿಮ್ಮ ಸುತ್ತಮುತ್ತ ಎಲೆಮರೆ ಸಾಧಕರಿದ್ದರೆ, ಅವರನ್ನು 'ಪದ್ಮಪ್ರಶಸ್ತಿ'ಗೆ ಸೂಚಿಸಿ.. ಪ್ರಧಾನಿ ಮೋದಿ ಮನವಿ - ಪದ್ಮ ಪ್ರಶಸ್ತಿ 2021

ತಳಮಟ್ಟದಲ್ಲಿ ಅದ್ವಿತೀಯ ಸಾಧನೆ, ಕೆಲಸಗಳನ್ನು ಮಾಡುತ್ತಿರುವ ಪ್ರತಿಭಾವಂತ ವ್ಯಕ್ತಿಗಳು ನಿಮಗೆ ತಿಳಿದಿದ್ದರೆ ಅವರನ್ನು ದೇಶದ ಪ್ರತಿಷ್ಠಿತ 'ಪದ್ಮ ಪ್ರಶಸ್ತಿ'ಗಾಗಿ ನಾಮ ನಿರ್ದೇಶನ ಮಾಡಲು ಪ್ರಧಾನಿ ಮೋದಿ ದೇಶದ ಜನತೆಗೆ ಕೋರಿದ್ದಾರೆ.

PM Modi to citizens
ದೇಶದ ಜನತೆಗೆ ಪಿಎಂ ಮೋದಿ ಕರೆ
author img

By

Published : Jul 11, 2021, 3:28 PM IST

ನವದೆಹಲಿ: ಪದ್ಮ ಪ್ರಶಸ್ತಿಗೆ ಸೂಕ್ತ ವ್ಯಕ್ತಿಗಳ ಹೆಸರುಗಳನ್ನು ಸೂಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಲ್ಲಿ ಮನವಿ ಮಾಡಿದ್ದಾರೆ.

ಭಾರತವು ಪ್ರತಿಭಾವಂತ ವ್ಯಕ್ತಿಗಳನ್ನು ಹೊಂದಿದ್ದು ತಳಮಟ್ಟದಲ್ಲಿ ಅದ್ವಿತೀಯ ಸಾಧನೆ, ಕೆಲಸಗಳನ್ನು ಮಾಡುತ್ತಿದ್ದಾರೆ. ನಾವು ಅವರಲ್ಲಿ ಹೆಚ್ಚಿನವರನ್ನು ನೋಡುವುದಿಲ್ಲ ಅಥವಾ ಅವರ ಬಗ್ಗೆ ಕೇಳುವುದಿಲ್ಲ. ಅಂತಹ ಸ್ಫೂರ್ತಿದಾಯಕ ವ್ಯಕ್ತಿಗಳು ನಿಮಗೆ ತಿಳಿದಿದ್ದರೆ, ನೀವು ಅವರನ್ನು ಪದ್ಮ ಪ್ರಶಸ್ತಿಗಾಗಿ ನಾಮ ನಿರ್ದೇಶನ ಮಾಡಬಹುದು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

  • India has many talented people, who are doing exceptional work at the grassroots. Often, we don’t see or hear much of them. Do you know such inspiring people? You can nominate them for the #PeoplesPadma. Nominations are open till 15th September. https://t.co/BpZG3xRsrZ

    — Narendra Modi (@narendramodi) July 11, 2021 " class="align-text-top noRightClick twitterSection" data=" ">

ನಿಮಗೆ ತಿಳಿದಿರುವ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲು #PeoplesPadma ಎಂಬ ಹ್ಯಾಶ್ ಟ್ಯಾಗ್ ಬಳಸಿ ಪ್ರತಿಭಾವಂತರ ಹೆಸರುಗಳನ್ನು ನಾಮನಿರ್ದೇಶನ ಮಾಡಲು ಅವಕಾಶವಿದೆ. ಇದಕ್ಕೆ ಸೆಪ್ಟೆಂಬರ್ 15ರ ವರೆಗೆ ಕಾಲಾವಕಾಶ ನೀಡಲಾಗಿದೆ. ಸರ್ಕಾರದ ಪದ್ಮಪ್ರಶಸ್ತಿಯ ವೆಬ್​ಸೈಟ್ ಲಿಂಕ್​ http://padmaawards.gov.in ಅನ್ನು ಪ್ರಧಾನಿ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

1954 ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಗಳನ್ನು ಪ್ರತಿವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುತ್ತದೆ. ಪದ್ಮ ಪ್ರಶಸ್ತಿಗಳು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾಗಿದ್ದು, ಭಾರತ ರತ್ನ, ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನೊಳಗೊಂಡಿದೆ.

ಕಳೆದ ಕೆಲವು ವರ್ಷಗಳಿಂದ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಮಾಜಕ್ಕೆ ನೀಡಿದ ಜೀವಮಾನದ ಕೊಡುಗೆಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಳಿಗಾಗಿ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಾ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.