ನವದೆಹಲಿ: 9 ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ ನೋಯ್ಡಾದ ಸೂಪರ್ಟೆಕ್ ಅವಳಿ ಕಟ್ಟಡಗಳು ನೆಲಸಮವಾಗಿವೆ. ಇಂದು ಮಧ್ಯಾಹ್ನ 2:30ಕ್ಕೆ ಎರಡೂ ಗಗನಚುಂಬಿ ಕಟ್ಟಡಗಳನ್ನು ಕ್ಷಣಾರ್ಧದಲ್ಲೇ ಧರೆಗುರುಳಿಸಲಾಯಿತು. ಕಟ್ಟಡಗಳ ನೆಲಸಮ ಕಾರ್ಯಾಚರಣೆಯ ಸ್ಥಳದಲ್ಲಿ 560ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಮೀಸಲು ಪಡೆಗಳ 100 ಸಿಬ್ಬಂದಿ, ಎನ್ಡಿಆರ್ಎಫ್ ವಿಶೇಷ ತಂಡಗಳನ್ನು ನಿಯೋಜಿಸಲಾಗಿತ್ತು.
70 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಅವಳಿ ಕಟ್ಟಡಗಳ ನೆಲಸಮಕ್ಕೆ 3,700 ಕೆಜಿ ಸ್ಫೋಟಕ ಬಳಕೆ ಮಾಡಲಾಯಿತು. ಬೆಳಗ್ಗೆ 6 ಗಂಟೆಯಿಂದಲೇ ಅವಳಿ ಕಟ್ಟಡ ಉರುಳಿಸುವ ಕಾರ್ಯಾಚರಣೆ ಆರಂಭವಾಗಿತ್ತು. ಮಧ್ಯಾಹ್ನ ಸರಿಯಾಗಿ 2:30ಕ್ಕೆ ಸ್ಫೋಟಕಗಳನ್ನು ಸ್ಫೋಟಿಸುವ ಮೂಲಕ ಧರೆಗುರುಳಿಸಲಾಯಿತು. ಈ ನೆಲಸಮ ಕಾರ್ಯಾಚರಣೆಗಾಗಿಯೇ 20 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.
ಒಂಭತ್ತು ಸೆಕೆಂಡ್ಗಳಲ್ಲೇ ಧ್ವಂಸ: ಈ ಅಕ್ರಮ ಅವಳಿ ಕಟ್ಟಡಗಳು ಕೇವಲ ಒಂಬತ್ತು ಸೆಕೆಂಡ್ಗಳಲ್ಲೇ ನೆಲಕ್ಕುರುಳಿ ಬಿದ್ದವು. ಈ ಕಟ್ಟಡಗಳು ಒಟ್ಟಾರೆ 915 ಫ್ಲಾಟ್‌ಗಳನ್ನು ಒಳಗೊಂಡಿದ್ದವು. ಎರಡೂ ಗೋಪುರಗಳು ಧ್ವಂಸಗೊಳ್ಳುತ್ತಿದ್ದಂತೆ ಇಡೀ ಪ್ರದೇಶದಲ್ಲಿ ದಟ್ಟವಾದ ಧೂಳ ಆವರಿಸಿತ್ತು. ಧ್ವಂಸಗೊಂಡ ಕಟ್ಟಡಗಳ ಪೈಕಿ ಸೆಯಾನೆ ಹೆಸರಿನ ಕಟ್ಟಡವು 29 ಮಹಡಿಗಳು ಹಾಗೂ ಅಪೆಕ್ಸ್ ಎಂಬ ಹೆಸರಿನ ಕಟ್ಟಡವು 32 ಮಹಡಿಗಳನ್ನು ಹೊಂದಿತ್ತು.
ಕಾರ್ಯಾಚರಣೆ ನಡೆದಿದ್ದು ಹೇಗೆ?: ದೇಶದ ಅತಿ ಎತ್ತರದ ಗೋಪುರಗಳಾದ ಇವುಗಳ ನೆಲಸಮ ಕಾರ್ಯಾಚರಣೆಗೂ ಮುನ್ನ ಅತ್ಯಂತ ಮುಂಜಾಗ್ರತೆಯನ್ನು ವಹಿಸಲಾಗಿತ್ತು. ಈ ಕಾರ್ಯಕ್ಕೆ ನೇಮಕವಾಗಿದ್ದ ಮುಂಬೈ ಮೂಲದ ಎಡಿಫೈಸ್ ಇಂಜಿನಿಯರಿಂಗ್ ಸಂಸ್ಥೆಯ ಮಾಸ್ಟರ್ ಬ್ಲಾಸ್ಟರ್ ಚೇತನ್ ದತ್ತಾ ಬಟನ್ ಒತ್ತುವ ಮೂಲಕ ಕಟ್ಟಡಗಳು ನೆಲಸಮಗೊಂಡವು.
ಎಡಿಫೈಸ್ ಇಂಜಿನಿಯರಿಂಗ್ ಸಂಸ್ಥೆಯ ಜೊತೆಗೆ ದಕ್ಷಿಣ ಆಫ್ರಿಕಾ ಮೂಲದ ಸಂಸ್ಥೆಯಾದ ಜೆಟ್ ಡೆಮಾಲಿಷನ್ಸ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಜೋ ಬ್ರಿಂಕ್‌ಮನ್ ಸಹ ಇದ್ದರು. ಈ ಕಟ್ಟಡಗಳು ಭೂಕಂಪನ ವಲಯದಲ್ಲಿ ನಿರ್ಮಿಸಲ್ಪಟ್ಟಿರುವುದರಿಂದ ಇದು ಅತ್ಯಂತ ಕಷ್ಟಕರವಾದ ಕಾರ್ಯಗಳಲ್ಲಿ ಒಂದಾಗಿತ್ತು ಎಂದು ಹೇಳಲಾಗ್ತಿದೆ.
ವಿಮಾನ ಸಂಚಾರವೂ ರದ್ದು: ನೆಲಸಮ ಕಾರ್ಯಾಚರಣೆ ವೇಳೆ ಸಾಕಷ್ಟು ಮುನ್ನಚ್ಚರಿಕೆ ಕ್ರಮಗಳನ್ನು ವಹಿಸಲಾಗಿತ್ತು. ಇದರ ಭಾಗವಾಗಿಯೇ ಈ ಕಟ್ಟಡಗಳ ಸುತ್ತ-ಮುತ್ತಲು ಆಕಾಶದಲ್ಲಿ ವಿಮಾನಯಾನದಂತಹ ಸಂಚಾರವನ್ನೂ ಸುಮಾರು 30 ನಿಮಿಷಗಳ ಕಾಲ ರದ್ದು ಮಾಡಲಾಗಿತ್ತು. ವಿಮಾನಗಳ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿತ್ತು.
-
#WATCH | 3,700kgs of explosives bring down Noida Supertech twin towers after years long legal battle over violation of construction laws pic.twitter.com/pPNKB7WVD4
— ANI (@ANI) August 28, 2022 " class="align-text-top noRightClick twitterSection" data="
">#WATCH | 3,700kgs of explosives bring down Noida Supertech twin towers after years long legal battle over violation of construction laws pic.twitter.com/pPNKB7WVD4
— ANI (@ANI) August 28, 2022#WATCH | 3,700kgs of explosives bring down Noida Supertech twin towers after years long legal battle over violation of construction laws pic.twitter.com/pPNKB7WVD4
— ANI (@ANI) August 28, 2022
ಅಲ್ಲದೇ, ಈ ಗೋಪುರಗಳ ಸುತ್ತಮುತ್ತ ಸುಮಾರು 7 ಸಾವಿರ ಜನರು ವಾಸವಾಗಿದ್ದು, ಭಾನುವಾರ ಬೆಳಗ್ಗೆ 7 ಗಂಟೆಯಿಂದ ಎಲ್ಲರನ್ನೂ ಜಾಗ ಖಾಲಿ ಮಾಡಿಸಲಾಗಿತ್ತು. ಇದಾದ ಬಳಿಕ ಈ ಪ್ರದೇಶದಲ್ಲಿ ವಿದ್ಯುತ್, ಅನಿಲ್ ಸೇರಿದಂತೆ ಎಲ್ಲ ಸೇವೆಗಳನ್ನೂ ಸ್ಥಗಿತಗೊಳಿಸಲಾಗಿದೆ. ಸಂಚಾರ ಮಾರ್ಗ ಬದಲಾವಣೆಯನ್ನೂ ಮಾಡಲಾಗಿದ್ದು, ಸಂಜೆ 5 ಗಂಟೆಗೆ ಎಲ್ಲ ಸೇವೆ ಪುನಾರಂಭವಾಗಿದ್ದು, ಎಲ್ಲ ನಿವಾಸಿಗಳು ತಮ್ಮ ಮನೆಗಳಿಗೆ ಮರಳಲು ಅವಕಾಶ ಕಲ್ಪಿಸಲಾಗಿದೆ.
ಈ ಅವಳಿ ಗೋಪುರ 2004ರಲ್ಲಿ ನಿರ್ಮಾಣ ಮಾಡಲಾಗಿತ್ತು. ಒಂದು ಕಟ್ಟಡ 103 ಮೀಟರ್ ಹಾಗೂ ಇನ್ನೊಂದು 97 ಮೀಟರ್ ಎತ್ತರವಿತ್ತು. ಆದರೆ, ಈ ಕಟ್ಟಡಗಳನ್ನು ನಿಯಮ ಬಾಹಿರವಾಗಿ ನಿರ್ಮಾಣ ಮಾಡಿರುವ ಕಾರಣ ಸುಪ್ರೀಂಕೋರ್ಟ್ 2021ರಲ್ಲಿ ಕಟ್ಟಡ ಧ್ವಂಸಗೊಳಿಸಲು ಆದೇಶ ನೀಡಿತ್ತು.
ಇದನ್ನೂ ಓದಿ: ನೋಯ್ಡಾ ಅವಳಿ ಕಟ್ಟಡಗಳ ಬಳಿ ನಿಂತು ಕೊನೆಯ ಬಾರಿ ಫೋಟೋ ಕ್ಲಿಕ್ಕಿಸಿಕೊಂಡ ಸ್ಥಳೀಯರು