ETV Bharat / bharat

ಉದಯ್‌ಪುರ್‌ ಹತ್ಯೆ: ವಿಡಿಯೋಗೆ ಲೈಕ್​, ಕಮೆಂಟ್​ ಮಾಡಿದ್ದವನ ಬಂಧನ

ರಾಜಸ್ಥಾನದ ಉದಯ್‌ಪುರ್‌ದಲ್ಲಿ ಕನ್ಹಯ್ಯಾ ಲಾಲ್ ಹತ್ಯೆಯ ಜ್ವಾಲೆಯು ನೋಯ್ಡಾ ತಲುಪಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದಕ್ಕೆ ಲೈಕ್ ಮತ್ತು ಕಮೆಂಟ್ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

noida-police-arrested-man-for-liking-and-commenting-on-udaipur-issue-viral-video

author img

By

Published : Jun 30, 2022, 9:42 PM IST

ನೋಯ್ಡಾ(ಉತ್ತರಪ್ರದೇಶ): ರಾಜಸ್ಥಾನದ ಉದಯಪುರದಲ್ಲಿ ನಡೆದ ಭೀಕರ ಕೊಲೆಗೆ ಸಂಬಂಧಿಸಿದಂತೆ ನೋಯ್ಡಾ ಪೊಲೀಸರು ಅಲರ್ಟ್ ಆಗಿದ್ದಾರೆ. ಇದರ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದಕ್ಕೆ ಲೈಕ್ ಮತ್ತು ಕಾಮೆಂಟ್​ ಮಾಡುವ ಮೂಲಕ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ನೋಯ್ಡಾ ಪೊಲೀಸ್ ಎಕ್ಸ್‌ಪ್ರೆಸ್‌ವೇ ಪೊಲೀಸರು ಛಪ್ರೌಲಿ ನಿವಾಸಿ ಯುವಕನನ್ನು ಬಂಧಿಸಿದ್ದಾರೆ. ಈ ವೇಳೆ ಆತನ ಬಳಿಯಿದ್ದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಎಕ್ಸ್‌ಪ್ರೆಸ್‌ವೇಯಲ್ಲಿರುವ ಛಪ್ರೌಲಿ ಗ್ರಾಮದ ಗ್ರಾಮಸ್ಥರು ಉದಯಪುರ ಘಟನೆಗೆ ಸಂಬಂಧಿಸಿದಂತೆ ಫೇಸ್‌ಬುಕ್‌ನಲ್ಲಿ ವಿಡಿಯೋ ವೈರಲ್ ಆಗುತ್ತಿದೆ ಎಂದು ಲಿಖಿತ ದೂರು ನೀಡಿದ್ದರು. ನೋಯ್ಡಾ ಸೆಕ್ಟರ್ -168 ರ ಛಪ್ರೌಲಿ ನಿವಾಸಿ ಆಸಿಫ್ ಖಾನ್ ಫೇಸ್‌ಬುಕ್‌ನಲ್ಲಿನ ವೈರಲ್ ವಿಡಿಯೋಗೆ ಲೈಕ್ ಮಾಡಿದ್ದು ಅದನ್ನು ಪ್ರಶಂಸಿಸುವ ಕಾಮೆಂಟ್​ ಮಾಡಿದ್ದ ಎಂದು ನೋಯ್ಡಾ ವಲಯ ಎಡಿಸಿಪಿ ರಣವಿಜಯ್ ಸಿಂಗ್ ಮಾಹಿತಿ ನೀಡಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ನಡೆದ ಘಟನೆ ಸಂಬಂಧ ನಗರದಲ್ಲಿ ಯಾವುದೇ ಅಹಿತಕರ ವಾತಾವರಣ ಉಂಟಾಗದಂತೆ ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರ ನಿಗಾ ವಹಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಕೂಡ ಜನರೊಂದಿಗೆ ಸಭೆ ನಡೆಸುತ್ತಿದ್ದಾರೆ. ಯಾವುದೇ ಪ್ರಚೋದನಕಾರಿ ಸಂದೇಶಗಳು ಮತ್ತು ವಿಡಿಯೋಗಳ ಕಡೆ ಗಮನ ಕೊಡಬೇಡಿ ಹಾಗೇನಾದರೂ ವಿಡಿಯೋಗಳು ಇದ್ದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ: ರಾಮ ಮಂದಿರ ನಿರ್ಮಾಣಕ್ಕೆ ಹರಿದುಬಂತು ದೇಣಿಗೆ: 11 ಕೋಟಿ ಜನರಿಂದ ಸಂಗ್ರಹವಾದ ಹಣವೆಷ್ಟು ಗೊತ್ತಾ!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.