ಕೋಯಿಕೋಡ್ (ಕೇರಳ): ಇಲ್ಲಿನ ಚತಮಂಗಲಂನಲ್ಲಿ ಕೆಲ ದಿನಗಳ ಹಿಂದೆ ಬಾಲಕನೋರ್ವ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ. ಬಾಲಕ ಮೃತಪಡುತ್ತಿದ್ದಂತೆ ನಿಫಾ ವೈರಸ್ನ ಆತಂಕ ಎದುರಾಗಿತ್ತು. ಆದರೆ ಇದೀಗ ವರದಿ ಕೈಸೇರಿದ್ದು, ಆತನಲ್ಲಿ ನಿಫಾ ವೈರಸ್ನ ಯಾವುದೇ ಲಕ್ಷಣ ಕಂಡುಬಂದಿಲ್ಲ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.
ಬಾಲಕನ ಅನುಮಾನಾಸ್ಪದ ಸಾವಿನ ಬಳಿಕ ಚತಮಂಗಲದ ಭಾಗದ ಹಣ್ಣುಗಳು, ಕೆಲ ಬೆಳೆಗಳ ಮಾದರಿಯನ್ನು ಪರೀಕ್ಷೆಗಾಗಿ ಪುಣೆಗೆ ಕಳುಹಿಸಲಾಗಿತ್ತು. ಇದೀಗ ವರದಿ ಸರ್ಕಾರದ ಕೈಸೇರಿದ್ದು ನಿಫಾ ವೈರಾಣು ಕಂಡುಬಂದಿಲ್ಲ ಎಂದು ಮಾಹಿತಿ ನೀಡಿದೆ. ರಾಬೂಟಾನ್ ಹಣ್ಣ, ಅಡಕೆ ಸೇರಿದಂತೆ ಹಲವು ಹಣ್ಣುಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು.
ಚತಮಂಗಲ ಪ್ರದೇಶವನ್ನು ಪರಿಶೀಲಿಸಲು ಮತ್ತು ಅಲ್ಲಿ ನಿಫಾ ವೈರಸ್ ಮೂಲವನ್ನು ಪತ್ತೆಹಚ್ಚಲು ಕೇಂದ್ರ ತಂಡವು ಭೇಟಿ ನೀಡಿತ್ತು. ತಜ್ಞರ ಪ್ರಾಥಮಿಕ ವರದಿಯ ಪ್ರಕಾರ 11 ವರ್ಷದ ಬಾಲಕನಿಗೆ ರಾಬೂಟಾನ್ನಿಂದ ವೈರಸ್ ತಗುಲಿರಬಹುದು ಎಂದು ಸುಳಿವು ನೀಡಿತ್ತು. ಆತ ಕುರಿಗಳನ್ನು ಮೇಯಿಸಲು ಜಮೀನಿಗೆ ತೆರಳುತ್ತಿದ್ದ, ಇದರಿಂದಾಗಿ ಬಾವಲಿಗಳಿಂದ ಆತನಿಗೆ ವೈರಾಣು ಹರಡಿರಬಹುದು ಎಂದು ಶಂಕಿಸಲಾಗಿತ್ತು.
ಕೇಂದ್ರ ತಜ್ಞರು ತಂಡ ಈ ಪ್ರದೇಶದ ಪ್ರಾಣಿಗಳು ಮತ್ತು ಪಕ್ಷಿಗಳ ಮಾದರಿ ಸಂಗ್ರಹಿಸಿದ್ದರು ಮತ್ತು ಅವುಗಳ ಫಲಿತಾಂಶಗಳು ಕೂಡ ಖುಣಾತ್ಮಕವಾಗಿವೆ. ಈ ನಡುವೆ ಕಾಡು ಹಂದಿಯ ಮಾದರಿ ಪರೀಕ್ಷೆ ಇನ್ನೂ ಬಾಕಿ ಇದೆ. ಮೃತ ಬಾಲಕನೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರನ್ನೂ ನಿಫಾ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಜಲಾಲಾಬಾದ್ Bike Blast: ‘ಭಯೋತ್ಪಾದನಾ ಕೃತ್ಯ’ ಎಂದ ಪೊಲೀಸ್