ETV Bharat / bharat

ದೇಶದಲ್ಲಿ ಲಸಿಕೆ ಕೊರತೆಯಿಲ್ಲ, ನಿಮಗೆ ಪ್ರಬುದ್ಧತೆಯಿಲ್ಲ : ರಾಗಾಗೆ ಆರೋಗ್ಯ ಸಚಿವರ ತಿರುಗೇಟು - ಕಾಂಗ್ರೆಸ್ ನಾಯಕ ರಾಹುಲ್​ಗಾಂಧಿ

ಆರೋಗ್ಯ ಸಚಿವಾಲಯದ ಪ್ರಕಾರ, 49,49,89,550 ಕ್ಕೂ ಹೆಚ್ಚು ಲಸಿಕೆ ಡೋಸ್‌ಗಳನ್ನು ಈವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಲಾಗಿದೆ ಮತ್ತು ಇನ್ನೂ 8,04,220 ಡೋಸ್‌ಗಳು ಪೂರೈಕೆ ಹಂತದಲ್ಲಿವೆ..

ಆರೋಗ್ಯ ಸಚಿವ ಮನ್ಸುಖ್​ ಮಾಂಡವಿಯಾ
ಆರೋಗ್ಯ ಸಚಿವ ಮನ್ಸುಖ್​ ಮಾಂಡವಿಯಾ
author img

By

Published : Aug 1, 2021, 8:51 PM IST

ನವದೆಹಲಿ : ದೇಶದಲ್ಲಿ ಲಸಿಕೆ ಕೊರತೆ ವಿಚಾರವಾಗಿ ಮಾತನಾಡಿರುವ ರಾಹುಲ್​ ಗಾಂಧಿ ವಿರುದ್ಧ ಕೇಂದ್ರ ಆರೋಗ್ಯ ಸಚಿವ ಮನ್ಸುಖ್​ ಮಾಂಡವಿಯಾ ಕಿಡಿಕಾರಿದ್ದಾರೆ. ದೇಶದಲ್ಲಿ ಲಸಿಕೆ ಕೊರತೆಯಿಲ್ಲ, ನಿಮಗೆ ಪ್ರಬುದ್ಧತೆಯಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮಾಂಡವಿಯಾ, ಭಾರತದ ಆರೋಗ್ಯ ಕಾರ್ಯಕರ್ತರು ಮತ್ತು ವಿಜ್ಞಾನಿಗಳ ಬಗ್ಗೆ ಕಾಂಗ್ರೆಸ್​​ ನಾಯಕರು ಹೆಮ್ಮೆ ಪಡಬೇಕಿದೆ. ಜುಲೈ ತಿಂಗಳಲ್ಲಿ ದೇಶಾದ್ಯಂತ 13 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ.

  • भारत में जुलाई महीने में 13 करोड़ से अधिक टीके लगाए गए हैं।

    इस महीने इसमें और तेजी आने वाली है। इस उपलब्धि के लिए हमें अपने स्वास्थ्यकर्मियों पर गर्व है।

    अब तो उन पर और देश पर आपको भी गर्व होना चाहिए। https://t.co/fgdifM26k6

    — Mansukh Mandaviya (@mansukhmandviya) August 1, 2021 " class="align-text-top noRightClick twitterSection" data=" ">

ಈ ತಿಂಗಳು ವ್ಯಾಕ್ಸಿನೇಷನ್ ಮತ್ತಷ್ಟು ವೇಗಗೊಳ್ಳಲಿದೆ. ಇಂಥ ಸಂದಿಗ್ಧತೆ ಪರಿಸ್ಥಿತಿಯಲ್ಲೂ, ಸೇವೆ ಸಲ್ಲಿಸುತ್ತಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರು, ವಿಜ್ಞಾನಿಗಳ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ರಾಹುಲ್​ಗಾಂಧಿಗೆ ತಿರುಗೇಟು ಕೊಟ್ಟಿದ್ದಾರೆ.

  • सुना है, जुलाई में जिन 13 करोड़ लोगों को टीके लगाए गए, उनमें से आप भी एक हैं।

    लेकिन आपने हमारे वैज्ञानिकों के लिए एक शब्द नहीं बोला, जनता से वैक्सीन लगाने की अपील नहीं की। मतलब आप वैक्सीनेशन के नाम पर तुच्छ राजनीति कर रहे हैं।
    दरअसल वैक्सीन की नहीं, आपमें परिपक्वता की कमी है।

ಜುಲೈನಲ್ಲಿ 13 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. ಅದರಲ್ಲಿ ಕಾಂಗ್ರೆಸ್ ನಾಯಕ ಕೂಡ ಒಬ್ಬರು ಎಂದು ಕೇಳಿದ್ದೇನೆ. ಲಸಿಕೆ ಪಡೆದ ನೀವು ನಮ್ಮ ವಿಜ್ಞಾನಿಗಳ ಬಗ್ಗೆ ಒಂದು ಮಾತನ್ನೂ ಹೇಳಲಿಲ್ಲ. ಜನರು ಲಸಿಕೆ ಹಾಕಿಸಿಕೊಳ್ಳುವಂತೆ ಮನವಿಯನ್ನೂ ಮಾಡಿಲ್ಲ. ಇದರರ್ಥ ನೀವು ಲಸಿಕೆ ಹೆಸರಲ್ಲಿ ರಾಜಕೀಯ ಮಾಡ್ತಿದ್ದೀರಿ ಎಂದು. ದೇಶದಲ್ಲಿ ಲಸಿಕೆ ಕೊರತೆಯಿಲ್ಲ, ನಿಮಗೆ ಪ್ರಬುದ್ಧತೆಯಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಜುಲೈ ಕಳೆದಿದೆ, ವ್ಯಾಕ್ಸಿನ್ ಕೊರತೆ ಮಾತ್ರ ನೀಗಿಲ್ಲ : ನಮೋ ಸರ್ಕಾರದ ವಿರುದ್ಧ ಮತ್ತೆ ರಾಹುಲ್ ಕಿಡಿ

ಆರೋಗ್ಯ ಸಚಿವಾಲಯದ ಪ್ರಕಾರ, 49,49,89,550 ಕ್ಕೂ ಹೆಚ್ಚು ಲಸಿಕೆ ಡೋಸ್‌ಗಳನ್ನು ಈವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಲಾಗಿದೆ ಮತ್ತು ಇನ್ನೂ 8,04,220 ಡೋಸ್‌ಗಳು ಪೂರೈಕೆ ಹಂತದಲ್ಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.