ETV Bharat / bharat

ಕೊರೊನಾ ಲಸಿಕೆ ಪಡೆಯುವುದು ಜನರ ಆಯ್ಕೆಗೆ ಬಿಟ್ಟಿದ್ದು, ಕಾನೂನಿನ ಒತ್ತಡವಿಲ್ಲ: ಸುಪ್ರೀಂಗೆ ಕೇಂದ್ರ ಸರ್ಕಾರ ಸ್ಪಷ್ಟನೆ

author img

By

Published : Nov 29, 2022, 5:40 PM IST

ಕೊರೊನಾ ಲಸಿಕೆ ಪಡೆಯುವುದನ್ನು ಕಾನೂನಾತ್ಮಕವಾಗಿ ಕಡ್ಡಾಯ ಮಾಡಲಾಗಿದೆಯೇ ಎಂಬ ಸುಪ್ರೀಂಕೋರ್ಟ್​ ಪ್ರಶ್ನೆಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಅದು ಜನರ ಆಯ್ಕೆಗೆ ಬಿಟ್ಟಿದ್ದು ಎಂದು ಅಫಿಡವಿಟ್​ ಸಲ್ಲಿಸಿದೆ.

vaccination-centre-tells-sc
ಸುಪ್ರೀಂಗೆ ಕೇಂದ್ರ ಸರ್ಕಾರ ಸ್ಪಷ್ಟನೆ

ನವದೆಹಲಿ: ಸಾಂಕ್ರಾಮಿಕ ರೋಗ ಕೊರೊನಾಗೆ ನೀಡಲಾಗುವ ಲಸಿಕೆಯನ್ನು ಜನರು ಪಡೆಯುವುದು, ಬಿಡುವುದು ಅವರಿಗೆ ಬಿಟ್ಟ ಆಯ್ಕೆಯಾಗಿದೆ. ಇದನ್ನು ಕಾನೂನಾತ್ಮಕವಾಗಿ ಕಡ್ಡಾಯ ಮಾಡಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಸ್ಪಷ್ಟಪಡಿಸಿದೆ.

ಕೋವಿಡ್​​ ಲಸಿಕೆ ಪಡೆದ ಬಳಿಕ ಅಡ್ಡಪರಿಣಾಮಗಳಿಂದಾಗಿ ತಮ್ಮ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಇಬ್ಬರು ಪೋಷಕರು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಪೀಠ, ಈ ಬಗ್ಗೆ ಕೇಂದ್ರದ ಅಭಿಪ್ರಾಯ ಕೇಳಿತ್ತು.

ಇದಕ್ಕೆ ಅಫಿಡವಿಟ್​ ಸಲ್ಲಿಸಿದ ಕೇಂದ್ರ ಸರ್ಕಾರ, ಲಸಿಕೆಯನ್ನು ಸಾರ್ವಜನಿಕ ಉದ್ದೇಶದಿಂದ ನೀಡಲಾಗುತ್ತಿದೆ. ಸಾಂಕ್ರಾಮಿಕ ರೋಗದಿಂದ ರಕ್ಷಿಸಿಕೊಳ್ಳಲು ಲಸಿಕಾಕರಣ ಅಭಿಯಾನ ನಡೆಸಲಾಗಿದೆ. ಜನರಿಗೆ ಯಾವುದೇ ಒತ್ತಾಯಪೂರ್ವಕವಾಗಿ ಲಸಿಕೆಯನ್ನು ಹಾಕಲಾಗಿಲ್ಲ. ಈ ಬಗ್ಗೆ ತಿಳಿವಳಿಕೆ ಮಾತ್ರ ನೀಡಲಾಗಿದೆ. ಪಡೆಯುವ ಮತ್ತು ತಿರಸ್ಕರಿಸುವ ಆಯ್ಕೆ ಜನರಿಗಿದೆ. ಇದರ ಮೇಲೆ ಯಾವುದೇ ಕಾನೂನಿನ ಒತ್ತಡವಿಲ್ಲ ಎಂದು ಕೇಂದ್ರ ತಿಳಿಸಿದೆ.

ಲಸಿಕೆ ಪಡೆದ ಬಳಿಕ ಆಗುವ ಅಡ್ಡಪರಿಣಾಮಗಳಿಗೆ ಯಾವುದೇ ಪುರಾವೆಗಳಿಲ್ಲ. ಲಸಿಕೆಯ ಮೇಲೆ ಸಂಶೋಧಕರು ತೀವ್ರ ನಿಗಾ ವಹಿಸಿದ್ದಾರೆ. ಎಲ್ಲ ರೀತಿಯ ಪ್ರಯೋಗಗಳ ಬಳಿಕವೇ ಲಸಿಕೆಯನ್ನು ಜನರಿಗೆ ನೀಡಲು ಅನುಮತಿ ನೀಡಲಾಗಿದೆ. ಇದನ್ನು ಪಡೆದು ಹಾನಿಗೊಳಗಾದ ಪ್ರಕರಣಗಳು ದಾಖಲಾಗಿಲ್ಲ ಎಂದು ಅಫಿಡವಿಟ್​ನಲ್ಲಿ ಕೇಂದ್ರ ಹೇಳಿದೆ.

ಕೊರೊನಾ ಲಸಿಕೆಯ ಅಡ್ಡಪರಿಣಾಮದಿಂದ ಜನರು ಸಾವನ್ನಪ್ಪಿದಲ್ಲಿ ಸೂಕ್ತ ಪುರಾವೆಗಳೊಂದಿಗೆ ಕಾನೂನಾತ್ಮಕವಾಗಿ ಅವರು ಪರಿಹಾರ ಪಡೆದುಕೊಳ್ಳುವ ಅವಕಾಶವಿದೆ. ಅರ್ಜಿದಾರರು ತಮ್ಮ ಮಕ್ಕಳ ಸಾವಿಗೆ ಲಸಿಕೆಯೇ ಕಾರಣ ಎಂಬುದನ್ನು ವೈದ್ಯಕೀಯವಾಗಿ ದೃಢಪಡಿಸಿಲ್ಲ. ಹೀಗಾಗಿ ಅರ್ಜಿಯನ್ನು ವಜಾ ಮಾಡಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಮನವಿ ಮಾಡಿದೆ.

ಓದಿ: ಬಾಡಿಗೆ ತಾಯ್ತನದ ಮಂಡಳಿ​ ರಚಿಸುವಂತೆ ಕೋರಿ ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ್ರು ಮಕ್ಕಳಿಲ್ಲದ ದಂಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.