ETV Bharat / bharat

ಮೋದಿ ಪ್ರಧಾನಿಯಾಗಿ ಇರೋತನಕ ಯಾವುದೇ ಕಂಪನಿ ರೈತರ ಭೂಮಿ ಕಿತ್ತುಕೊಳ್ಳೋಕೆ ಸಾಧ್ಯವೇ ಇಲ್ಲ: ಅಮಿತ್ ಶಾ - Amit Shah in Kisan Samman Nidhi event

ಪ್ರತಿಪಕ್ಷಗಳು ಲಜ್ಜೆಗೆಟ್ಟ ಸುಳ್ಳುಗಳನ್ನು ಹೇಳುತ್ತಿವೆ. ಎಂಎಸ್​​ಪಿ ಮುಂದುವರಿಯುತ್ತದೆ ಮತ್ತು ಮಂಡಿಗಳನ್ನು ಮುಚ್ಚಲಾಗುವುದಿಲ್ಲ ಎಂದು ನಾನು ಮತ್ತೆ ಪುನರುಚ್ಚರಿಸುತ್ತೇನೆ. ರೈತರ ಕಲ್ಯಾಣವು ಮೋದಿ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಅಮಿತ್ ಶಾ ಭರವಸೆ ನೀಡಿದರು.

Modi- Shah
ಮೋದಿ -ಶಾ
author img

By

Published : Dec 25, 2020, 3:27 PM IST

ನವದೆಹಲಿ: ನರೇಂದ್ರ ಮೋದಿ ಅವರು ದೇಶದ ಪ್ರಧಾನ ಮಂತ್ರಿಯಾಗಿ ಇರುವವರೆಗೂ ಯಾವುದೇ ಕಾರ್ಪೊರೇಟ್ ಸಂಸ್ಥೆ, ಯಾವುದೇ ರೈತರ ಭೂಮಿಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಭರವಸೆ ನೀಡಿದ್ದಾರೆ.

ಕನಿಷ್ಠ ಬೆಂಬಲ ಬೆಲೆ ಮುಂದುವರಿಯುತ್ತದೆ. ಯಾವುದೇ ಕಾರಣಕ್ಕೂ ಮಂಡಿಗಳನ್ನು ಮುಚ್ಚುವುದಿಲ್ಲ ಎಂದು ರಾಷ್ಟ್ರ ರಾಜಧಾನಿಯ ಕಿಶನ್‌ಗಢ್​ ಗ್ರಾಮದಲ್ಲಿ ನಡೆದ ಕಿಸಾನ್ ಸಮ್ಮಾನ್ ನಿಧಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಮೂರು ಹೊಸ ಕೃಷಿ ಕಾನೂನುಗಳ ನಿಬಂಧನೆಗಳು ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ರೈತ ಸಂಘಟನೆಗಳು ಭಾವಿಸಿವೆ. ಅದನ್ನು ಮುಕ್ತ ಮನಸ್ಸಿನಿಂದ ಚರ್ಚಿಸಲು ಮತ್ತು ಪರಿಗಣಿಸಲು ಮೋದಿ ಸರ್ಕಾರ ಸಿದ್ಧವಾಗಿದೆ. ಕನಿಷ್ಠ ಬೆಂಬಲ ಬೆಲೆ ಮತ್ತು ಕೃಷಿ ಕಾನೂನುಗಳ ಇತರ ನಿಬಂಧನೆಗಳ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: ರೈತರ ವಿರುದ್ಧ ಮಮತಾ ತೆಗೆದುಕೊಂಡ ನಿರ್ಧಾರ ನೋವು ತಂದಿದೆ: ಮೋದಿ

ಪ್ರತಿಪಕ್ಷಗಳು ಲಜ್ಜೆಗೆಟ್ಟ ಸುಳ್ಳುಗಳನ್ನು ಪ್ರಚಾರ ಮಾಡುತ್ತಿವೆ. ಎಂಎಸ್​​ಟಿ ಮುಂದುವರಿಯುತ್ತದೆ ಮತ್ತು ಮಂಡಿಗಳನ್ನು ಮುಚ್ಚಲಾಗುವುದಿಲ್ಲ ಎಂದು ನಾನು ಮತ್ತೆ ಪುನರುಚ್ಚರಿಸುತ್ತೇನೆ. ರೈತರ ಕಲ್ಯಾಣವು ಮೋದಿ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಭರವಸೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.