ETV Bharat / bharat

No Confidence Motion: ಮೋದಿ ಸರ್ಕಾರದ ವಿರುದ್ಧದ ಪ್ರತಿಪಕ್ಷಗಳ 'ಅವಿಶ್ವಾಸ ನಿರ್ಣಯ'ಕ್ಕೆ ಸೋಲು - Manipur violence

No Confidence Motion defeated: ಲೋಕಸಭೆಯಲ್ಲಿ ಮಣಿಪುರ ವಿಚಾರದ ಸಲುವಾಗಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ.

No Confidence Motion defeated in the Lok Sabha through voice vote
ಮೋದಿ ಸರ್ಕಾರದ ವಿರುದ್ಧದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯಕ್ಕೆ ಸೋಲು
author img

By

Published : Aug 10, 2023, 7:49 PM IST

Updated : Aug 10, 2023, 8:12 PM IST

ನವದೆಹಲಿ: ಮಣಿಪುರ ಹಿಂಸಾಚಾರ ಕುರಿತಾಗಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದೆ. ಧ್ವನಿ ಮತದಾನದಲ್ಲಿ ಸರ್ಕಾರ ಗೆದ್ದಿದೆ.

ಮಣಿಪುರಕ ಕುರಿತು ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿದ್ದಾರೆ ಎಂದು ಆರೋಪಿಸಿ ಲೋಕಸಭೆಯಲ್ಲಿ ಕಾಂಗ್ರೆಸ್​ ಸಂಸದ ಗೌರವ್​ ಗೊಗೊಯ್​, ಅವಿಶ್ವಾಸ ನಿಲುವಳಿ ಮಂಡಿಸಿದ್ದರು. ಈ ನಿಲುವಳಿ ಮೇಲೆ ಸತತ ಮೂರು ದಿನಗಳ ಕಾಲ ಚರ್ಚೆ ನಡೆಸಲಾಗಿತ್ತು. ಇಂದು ಸದನದಲ್ಲಿ ಪ್ರಧಾನಿ ಮೋದಿ 2 ಗಂಟೆ 15 ನಿಮಿಷಗಳ ಕಾಲ ಸುದೀರ್ಘ ಉತ್ತರ ನೀಡಿದರು. ಬಳಿಕ ನಿರ್ಣಯವನ್ನು ಧ್ವನಿ ಮತದಾನಕ್ಕೆ ಹಾಕಲಾಯಿತು. ಇದಕ್ಕೂ ಮುನ್ನ ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದಾಗಲೇ ಕಾಂಗ್ರೆಸ್​ ಸೇರಿ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದ್ದವು.

  • #WATCH | Delhi: Congress MP Gaurav Gogoi says, "This no-confidence motion was presented by me in the Lok Sabha as member of I.N.D.I.A. alliance...After struggling for so many days, after so many difficulties, finally today the country is seeing PM Modi speaking in the… https://t.co/lmLsGaDJKK pic.twitter.com/JTkE8fAwxs

    — ANI (@ANI) August 10, 2023 " class="align-text-top noRightClick twitterSection" data=" ">

ಮೂರು ಪ್ರಶ್ನೆಗಳಿಗೆ ಸಿಗದ ಉತ್ತರ - ಗೊಗೊಯ್: ಸದನದ ಹೊರಗೆ ಮಾತನಾಡಿದ ಗೌರವ್​ ಗೊಗೊಯ್​, "ಪ್ರಧಾನಿ ಮೋದಿ ಅವರ ಭಾಷಣದಲ್ಲಿ ನಮ್ಮ ಮೂರು ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ. ಹೀಗಾಗಿ ಸಭಾತ್ಯಾಗ ಮಾಡಬೇಕಾಯಿತು. ಮಣಿಪುರದ ಜನರ ಬಗ್ಗೆ ನಮ್ಮ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು 'ಇಂಡಿಯಾ' ಮೈತ್ರಿಕೂಟದ ಪಕ್ಷಗಳು ಸದನದಿಂದ ಹೊರಬಂದವು'' ಎಂದು ತಿಳಿಸಿದರು.

  • #WATCH | Congress MPs Sonia Gandhi and Rahul Gandhi leave Parliament after opposition MPs staged a walkout from the Lok Sabha during PM Modi's speech on the no-confidence motion. pic.twitter.com/jaxp5dm7zt

"ಅವಿಶ್ವಾಸ ನಿರ್ಣಯವನ್ನು ನಾನು ಇಂಡಿಯಾ ಮೈತ್ರಿಕೂಟದ ಸದಸ್ಯನಾಗಿ ಲೋಕಸಭೆಯಲ್ಲಿ ಮಂಡಿಸಿದ್ದೆ. ಇಷ್ಟು ದಿನಗಳ ಹೋರಾಟದ ನಂತರ ಕೊನೆಗೂ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಮಾತನಾಡುತ್ತಿರುವುದನ್ನು ದೇಶ ಗಮನಿಸುತ್ತಿತ್ತು. ಪ್ರಧಾನಿ ಮೋದಿ ತಮ್ಮ ಜವಾಬ್ದಾರಿಯಿಂದ ಓಡಿ ಹೋಗುತ್ತಿದ್ದಾರೆ'' ಎಂದು ದೂರಿದರು.

''ಮೋದಿ ಅವರ ಮುಂದೆ ನಮ್ಮ ಮೂರು ಸ್ಪಷ್ಟ ಪ್ರಶ್ನೆಗಳಿದ್ದವು. ಮಣಿಪುರಕ್ಕೆ ಭೇಟಿ ನೀಡದಿರುವ ಅವರಿಗೆ ಇಷ್ಟೊಂದು ಹಠ ಯಾಕೆ?, ಮಣಿಪುರದ ಮುಖ್ಯಮಂತ್ರಿಯನ್ನು ಯಾಕೆ ವಜಾ ಮಾಡಿಲ್ಲ?. ಇಷ್ಟು ದಿನ ಮಣಿಪುರದ ಬಗ್ಗೆ ಮೌನ ವಹಿಸಿದ್ದೇಕೆ ಹಾಗೂ ಶಾಂತಿಗಾಗಿ ಜನರಿಗೆ ಮನವಿ ಏಕೆ ಮಾಡಲಿಲ್ಲ?. ಹೀಗಾಗಿ, ಮೋದಿ ಭಾಷಣ ಮಾಡಿದರೂ ಮಣಿಪುರಕ್ಕೆ ನ್ಯಾಯ ಸಿಗಲಿಲ್ಲ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.

  • #WATCH | Leader of Opposition in Lok Sabha Adhir Ranjan Chowdhury says, “I had to (walkout) because even today the PM remained 'Nirav' on the issue of Manipur. So, I thought what is the use of seeing the new 'Nirav Modi'. PM Modi says the whole country is with him but why is he… pic.twitter.com/tr4sByGMVz

ಕಾಂಗ್ರೆಸ್​ ಬಗ್ಗೆ ಭಯ ಯಾಕೆ? - ಅಧೀರ್​ ರಂಜನ್​: ಲೋಕಸಭೆಯಲ್ಲಿ ಕಾಂಗ್ರೆಸ್​ ಸಂಸದೀಯ ನಾಯಕರಾದ ಅಧಿರ್​ ರಂಜನ್​ ಚೌಧರಿ ಮಾತನಾಡಿ, "ಪ್ರಧಾನಿ ಮಣಿಪುರದ ವಿಷಯದಲ್ಲಿ ಇಂದಿಗೂ 'ನೀರವ್' ಆಗಿಯೇ ಉಳಿದಿದ್ದಾರೆ. ಹಾಗಾದರೆ, ಹೊಸ 'ನೀರವ್ ಮೋದಿ'ಯನ್ನು ನೋಡಿ ಏನು ಪ್ರಯೋಜನ?. ಇಡೀ ದೇಶವೇ ನನ್ನೊಂದಿಗಿದೆ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಆದರೆ, ಅವರು ಕಾಂಗ್ರೆಸ್‌ಗೆ ಏಕೆ ಹೆದರುತ್ತಿದ್ದಾರೆ'' ಎಂದು ಪ್ರಶ್ನಿಸಿದರು.

ಇದನ್ನೂ ಓದಿ: PM Modi: ಬೆಂಗಳೂರಿನಲ್ಲಿ ಯುಪಿಎ ಅಂತಿಮ ವಿಧಿವಿಧಾನ ನಡೆದಿದೆ; 2028ರಲ್ಲಿ ಮತ್ತೆ ಅವಿಶ್ವಾಸ ನಿರ್ಣಯ ತನ್ನಿ: ಮೋದಿ ವಾಗ್ದಾಳಿ

Last Updated : Aug 10, 2023, 8:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.