ETV Bharat / bharat

ಆಡಳಿತ ವಿರೋಧಿ ಅಲೆ ಇಲ್ಲ, ಇದೇ ನಮ್ಮ ಸಾಧನೆ: ರಾಜಸ್ಥಾನ ಸಿಎಂ ಗೆಹ್ಲೋಟ್ - ರಾಷ್ಟ್ರವ್ಯಾಪಿ ಸಾಮಾಜಿಕ ಭದ್ರತೆಗಾಗಿ ಅಗತ್ಯವಿರುವ ಹಣಕಾಸು

ಡಿಸೆಂಬರ್ 17 ರಂದು ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದರು.

gehlot
ರಾಜಸ್ಥಾನ ಸಿಎಂ ಗೆಹ್ಲೋಟ್
author img

By

Published : Dec 18, 2022, 1:16 PM IST

ಜೈಪುರ: ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. ಒಂದು ಸರ್ಕಾರಕ್ಕೆ ಇದಕ್ಕಿಂತ ದೊಡ್ಡ ಸಾಧನೆ ಯಾವುದೂ ಇರಲಿಕ್ಕಿಲ್ಲ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ನಾಲ್ಕು ವರ್ಷಗಳ ನಂತರವೂ ರಾಜಸ್ಥಾನದ ಜನತೆ ರಾಜ್ಯ ಸರ್ಕಾರದ ವಿರುದ್ಧವಾಗಿಲ್ಲ. ಸಾಮಾನ್ಯವಾಗಿ ಇಂಥ ಸಮಯದಲ್ಲಿ ಜನ ತಪ್ಪುಗಳನ್ನು ಹುಡುಕಲು ಪ್ರಾರಂಭಿಸುತ್ತಾರೆ. ಆದರೆ ರಾಜಸ್ಥಾನದಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ. ರಾಜ್ಯ ಸರ್ಕಾರಕ್ಕೆ ಇದಕ್ಕಿಂತ ದೊಡ್ಡ ಸಾಧನೆ ಇನ್ನೊಂದಿಲ್ಲ ಎಂದು ಅವರು ಹೇಳಿದರು.

ದೇಶಾದ್ಯಂತ ಸಾಮಾಜಿಕ ಭದ್ರತೆಯನ್ನು ಜಾರಿಗೊಳಿಸಲು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ತಮ್ಮ ಬೇಡಿಕೆಯನ್ನು ಈ ಸಂದರ್ಭದಲ್ಲಿ ಅವರು ಪುನರುಚ್ಚರಿಸಿದರು. ಹಳೆಯ ಪಿಂಚಣಿ ಯೋಜನೆ (OPS) ಕುರಿತು ಮಾತನಾಡಿದ ಗೆಹ್ಲೋಟ್, ಸರ್ಕಾರದಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿದ ವ್ಯಕ್ತಿಗೆ ಭದ್ರತೆ ಸಿಗುವುದು ಬಹಳ ಮುಖ್ಯ. ಏಕೆಂದರೆ ಅಷ್ಟು ವರ್ಷ ಸೇವೆ ಸಲ್ಲಿಸಿದ ವ್ಯಕ್ತಿಯ ಸಾಮಾಜಿಕ ಭದ್ರತೆಯ ಬಗ್ಗೆ ಕಾಳಜಿ ವಹಿಸಲೇಬೇಕು. ರಾಷ್ಟ್ರವ್ಯಾಪಿ ಸಾಮಾಜಿಕ ಭದ್ರತೆಗಾಗಿ ಅಗತ್ಯವಿರುವ ಹಣಕಾಸುಗಳನ್ನು ಕೇಂದ್ರ ಮತ್ತು ರಾಜ್ಯಗಳೆರಡೂ ನಿರ್ವಹಿಸುವಂತೆ ಸಾಮಾನ್ಯ ನೀತಿ ಇರಬೇಕು ಎಂದರು.

ರಾಜಸ್ಥಾನ ಸರ್ಕಾರ ಒಪಿಎಸ್ ಅನ್ನು ಜಾರಿಗೆ ತಂದಿದೆ. ಆದರೆ ಕೇಂದ್ರವು ಅದರಲ್ಲಿ ಹಸ್ತಕ್ಷೇಪ ಮಾಡಿದ್ದು ಸಂವಿಧಾನಕ್ಕೆ ವಿರುದ್ಧವಾಗಿದೆ. ಪಿಂಚಣಿಯನ್ನು ನಿರ್ಧರಿಸುವ ಹಕ್ಕು ರಾಜ್ಯ ಸರ್ಕಾರಕ್ಕೆ ಇದೆ. ಪಿಂಚಣಿ ರಾಜ್ಯದ ವಿಷಯವಾಗಿದೆ. ಹೀಗಾಗಿ ಓಪಿಎಸ್ ಮುಂದುವರಿಯಲಿದೆ. ಇದರಲ್ಲಿ ಕೇಂದ್ರವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಪಿಂಚಣಿ ಹಕ್ಕು ರಾಜ್ಯ ಸರ್ಕಾರಗಳಿಗೆ ಇರುತ್ತದೆ ಎಂದು ಸಂವಿಧಾನದಲ್ಲಿಯೇ ನಿಬಂಧನೆ ಇದೆ ಗೆಹ್ಲೋಟ್ ಹೇಳಿದರು.

ಕಳೆದ ಚುನಾವಣೆಯ ಸಂದರ್ಭದಲ್ಲಿ ಪೂರ್ವ ರಾಜಸ್ಥಾನ ಕಾಲುವೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಡಿ ತರುವುದಾಗಿ ಪ್ರಧಾನಿ ಮೋದಿ ಅವರೇ ಇಲ್ಲಿ ಸಾರ್ವಜನಿಕ ಸಭೆಗಳಲ್ಲಿ ಭರವಸೆ ನೀಡಿದ್ದರು. ಆದರೆ ಈಗ ಕೇಂದ್ರವು ಈ ಯೋಜನೆಯನ್ನು ಸ್ಥಗಿತಗೊಳಿಸುತ್ತಿದೆ. ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೆ ಮತ್ತು ಗಜೇಂದ್ರ ಸಿಂಗ್ ನಡುವಿನ ಜಗಳ ವೈಯಕ್ತಿಕ. ಆದರೆ ಇಬ್ಬರ ನಡುವಿನ ವೈಯಕ್ತಿಕ ಸಂಘರ್ಷದಿಂದ ಸಾರ್ವಜನಿಕರು ಏಕೆ ನರಳಬೇಕು ಎಂದು ಅವರು ಪ್ರಶ್ನಿಸಿದರು.

ಇದನ್ನೂ ಓದಿ: ದ್ರೋಹಿ ಹೇಳಿಕೆಯ ನಂತರ ಕೈಹಿಡಿದು ಒಟ್ಟಾಗಿ ಕಾಣಿಸಿಕೊಂಡ ಸಿಎಂ ಗೆಹ್ಲೋಟ್, ಪೈಲಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.