ETV Bharat / bharat

2024ರ ಲೋಕ ಸಮರದಲ್ಲಿ ಪ್ರಧಾನಿ ಮೋದಿಗೆ ಪರ್ಯಾಯ ವ್ಯಕ್ತಿಯೇ ಇಲ್ಲ: ಮಹಾರಾಷ್ಟ್ರ ಡಿಸಿಎಂ ಪವಾರ್

author img

By ETV Bharat Karnataka Team

Published : Dec 25, 2023, 1:02 PM IST

ಎನ್​ಸಿಪಿಯಿಂದ ಬಂಡೆದ್ದು ಶಿವಸೇನೆ ಮತ್ತು ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರದಲ್ಲಿ ಡಿಸಿಎಂ ಆಗಿರುವ ಅಜಿತ್​ ಪವಾರ್ ಅವರು,​ ಪ್ರಧಾನಿ ಮೋದಿಗೆ ಬದಲಿ ವ್ಯಕ್ತಿಯೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಮಹಾರಾಷ್ಟ್ರ ಡಿಸಿಎಂ ಪವಾರ್
ಮಹಾರಾಷ್ಟ್ರ ಡಿಸಿಎಂ ಪವಾರ್

ಮುಂಬೈ (ಮಹಾರಾಷ್ಟ್ರ) : ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸುವ ಗುರಿ ಹಾಕಿಕೊಂಡು ವಿಪಕ್ಷಗಳೆಲ್ಲಾ ಸೇರಿ ರಚಿಸಿಕೊಂಡಿರುವ I.N.D.I.A ಕೂಟಕ್ಕೆ ನಿರಾಸೆ ಖಂಡಿತ. ಕಾರಣ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರ್ಯಾಯ ವ್ಯಕ್ತಿಗಳೇ ಇಲ್ಲ..!

ಇದು ಎನ್​ಸಿಪಿಯಿಂದ ಬಂಡೆದ್ದು ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿರುವ ಅಜಿತ್​ ಪವಾರ್​ ಅವರ ಖಡಕ್​ ಮಾತು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಎನ್​ಡಿಎ ಗೆಲುವು ಸಾಧಿಸಿ, ಮತ್ತೆ ಮೋದಿ ಪ್ರಧಾನಿಯಾಗಲಿದ್ದಾರೆ. ಸದ್ಯಕ್ಕೆ ಅವರಿಗೆ ಪರ್ಯಾಯವಾಗಿ ಪ್ರಧಾನಿಯಾಗಬಲ್ಲ ವ್ಯಕ್ತಿಗಳೇ ಇಲ್ಲ ಎಂದು ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.

ನರೇಂದ್ರ ಮೋದಿ ಅವರು ಪ್ರಧಾನಿ ಮರು ಆಯ್ಕೆಯಾಗಲು ಸಾಕಷ್ಟು ಕಾರಣಗಳಿವೆ. ದೇಶದ ಜನರು ಮತ್ತು ಬಿಜೆಪಿ ಮಿತ್ರ ಪಕ್ಷಗಳು ಇದರ ಆಧಾರದ ಮೇಲೆ ಅವರನ್ನು ಮತ್ತೆ ಪ್ರಧಾನಿ ಸ್ಥಾನದಲ್ಲಿ ಕೂರಿಸಲು ಯೋಜಿಸಿದ್ದಾರೆ. ಸದ್ಯಕ್ಕೆ ಮೋದಿಗೆ ಬದಲಿಯಾಗಿ ನಿಲ್ಲಬಲ್ಲ ವ್ಯಕ್ತಿ ಇನ್ನೊಬ್ಬರಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಅಭಿವೃದ್ಧಿ ಬಗ್ಗೆ ಜನ ಚಿಂತನೆ: ದೇಶದ ಹಿತಾಸಕ್ತಿಗಳನ್ನು ಯಾರು ಕಾಪಾಡುತ್ತಾರೆ. ಯಾರ ಕೈಯಲ್ಲಿ ದೇಶ ಸುರಕ್ಷಿತ ಮತ್ತು ಬಲಿಷ್ಠವಾಗಿರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಇಮೇಜ್ ಅನ್ನು ಯಾರು ಹೆಚ್ಚಿಸುತ್ತಾರೆ ಎಂಬ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಅವರೇ ಉತ್ತರವಾಗಿದ್ದಾರೆ. ಈ ಎಲ್ಲ ಅಂಶಗಳು ಬಹಳ ಮುಖ್ಯವಾಗಿ ಚುನಾವಣೆಯಲ್ಲಿ ಕೆಲಸ ಮಾಡುತ್ತವೆ. ಹೀಗಾಗಿ ಮೋದಿ ಅವರೇ ಜನರ ಮೊದಲ ಆಯ್ಕೆಯಾಗಿದ್ದಾರೆ ಎಂದು ಪವಾರ್ ಹೇಳಿದರು.

ವಿಧಾನಸಭೆ ಚುನಾವಣೆ ಫಲಿತಾಂಶವೇ ಸಾಕ್ಷಿ: ಈಚೆಗೆ ಮುಗಿದ ಪಂಚರಾಜ್ಯ ಚುನಾವಣೆಗಳ ಪೈಕಿ ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದೇ ಮುಂದಿನ ಲೋಕಸಭೆ ಚುನಾವಣೆಯ ದಿಕ್ಸೂಚಿಯಾಗಿದೆ. ಈ ಫಲಿತಾಂಶಗಳನ್ನು ಗಮನಿಸಿದರೆ, ಲೋಕ ಸಮರದ ಫಲಿತಾಂಶವನ್ನು ಊಹಿಸಬಹುದು. ಮಾಧ್ಯಮಗಳಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆಯಲ್ಲ ಎಂದು ಅವರು ಹೇಳಿದರು.

ಇನ್ನೂ ಮಹಾರಾಷ್ಟ್ರ ರಾಜಕೀಯದ ಬಗ್ಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಪುಣೆಯಲ್ಲಿ ರ‍್ಯಾಲಿಗಳನ್ನು ನಡೆಸುತ್ತಿರುವ ರಾಜಕೀಯ ಲಾಭಕ್ಕಾಗಿ. ವಿಚಿತ್ರ ಅಂದರೆ, ಎನ್​ಸಿಪಿಯ ಸಂಸದರೊಬ್ಬರು ತಮ್ಮ ಸ್ಥಾನದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಅವರ ಸ್ಥಾನಕ್ಕೆ ಮುಂದಿನ ಚುನಾವಣೆಯಲ್ಲಿ ಸೂಕ್ತ ವ್ಯಕ್ತಿಯನ್ನು ನಿಲ್ಲಿಸಲಾಗುವುದು. ನಮ್ಮ ಅಭ್ಯರ್ಥಿಯೇ ಗೆಲುವು ಸಾಧಿಸಲಿದ್ದಾನೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಉದ್ಯಮಿ​​ ಗೌತಮ್​ ಅದಾನಿ ಹೊಗಳಿದ ಶರದ್​ ಪವಾರ್​​; ಕಾರಣ ಇದು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.