ಮಧ್ಯಪ್ರದೇಶ: ಮಧ್ಯಪ್ರದೇಶದ ಹಿಂದುಳಿದ ಬುಂದೇಲ್‌ಖಂಡ್‌ನ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಲಸಿಕೆ ಬಗ್ಗೆ ಅರಿವಿನ ಕೊರತೆಯಿಂದಾಗಿ, ಜನರು ಲಸಿಕೆ ಪಡೆಯಲು ನಿರಾಕರಿಸುತ್ತಿದ್ದಾರೆ.
ಈ ಹಿನ್ನೆಲೆ ಗ್ರಾಮದಲ್ಲಿ ಲಸಿಕೆ ನೀಡಲು ಮುಂದಾದರೆ ಆರೋಗ್ಯ ಸಿಬ್ಬಂದಿಯನ್ನು ನಿಂದಿಸುವುದರ ಜೊತೆಗೆ ನಿಂದಿಸುವುದು ಮಾತ್ರವಲ್ಲದೇ ಹಲ್ಲೆ ನಡೆಸುತ್ತಿದ್ದಾರೆ. ಇದರಿಂದಾಗಿ ನಿವರಿ ಜಿಲ್ಲೆಯ ಅಧಿಕಾರಿ ಆಶಿಶ್ ಭಾರ್ಗವ ಜನರಿಗೆ ಮನವರಿಕೆ ಮಾಡಲು ಮುಂದಾದಾಗ ಮಹಿಳೆಯೊಬ್ಬರು ಕೋಪಗೊಂಡು ಲಸಿಕೆ ಪಡೆಯಲು ನಿರಾಕರಿಸಿದ್ದಾರೆ. ಲಸಿಕೆಯಿಂದಾಗಿ ನಾವು ಸತ್ತರೆ ಯಾರು ಜವಾಬ್ದಾರರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಿಂದ ಕೋಪಗೊಂಡ ಅಧಿಕಾರಿ ಆಶಿಶ್ ಭಾರ್ಗವ ಲಸಿಕೆಯಿಂದ ಯಾರು ಹುಚ್ಚರಾಗಿಲ್ಲ. ಲಸಿಕೆ ಹಾಕಿದ ನಂತರ ಎಲ್ಲರೂ ಸತ್ತಿದ್ದಾರೆಯೇ. ನಾನು ನಿಮ್ಮೆಲ್ಲರ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಮನವರಿಕೆ ಮಾಡಿಸಲು ಯತ್ನಿಸಿದ್ದಾರೆ.