ETV Bharat / bharat

ಆನಂದದ ಸಮಾಧಿ ಸ್ಥಿತಿ, ಶೀಘ್ರವೇ ಹೊರ ಬಂದು ಭಕ್ತರಿಗೆ ದರ್ಶನ: ನಿತ್ಯಾನಂದ ಸ್ವಾಮಿ ಸಂದೇಶ

ತಾವೇ ಸೃಷ್ಟಿಸಿಕೊಂಡ ಕೈಲಾಸದಲ್ಲಿ ಸಮಾಧಿ ಸ್ಥಿತಿಯಲ್ಲಿರುವ ನಿತ್ಯಾನಂದ ಸ್ವಾಮಿ, ಸಮಾಧಿಯಲ್ಲಿ ಆನಂದಿಸುತ್ತಿರುವುದಾಗಿ, ಶೀಘ್ರವೇ ಇಲ್ಲಿಂದ ಹೊರಬಂದಿ ಭಕ್ತರ ಜೊತೆ ಸತ್ಸಂಗ ಮರಳಿ ನಡೆಸುವೆ ಎಂದು ಸಂದೇಶ ರವಾನಿಸಿದ್ದಾರೆ.

nityananda-come-out-soon
ನಿತ್ಯಾನಂದ ಸ್ವಾಮಿ ಸಂದೇಶ
author img

By

Published : Jun 7, 2022, 7:18 PM IST

ತನ್ನದೇ ಕೈಲಾಸ ನಿರ್ಮಿಸಿಕೊಂಡು ಸಮಾಧಿವಾಸಿಯಾಗಿರುವ ನಿತ್ಯಾನಂದ ಸ್ವಾಮಿ ಮರಣ ಹೊಂದಿದ್ದಾರೆ ಎಂಬ ಸುದ್ದಿ ಈ ಹಿಂದೆ ಹರಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ್ದ ನಿತ್ಯಾನಂದ ತಾನು ಸಮಾಧಿಯಲ್ಲಿ ಜೀವಂತವಾಗಿದ್ದೇನೆ ಎಂದು ಹೇಳಿದ್ದರು. ಐ ಆ್ಯಮ್​ ದ ಗಾಡ್​, ಗಾಡ್​ ಈಸ್​ ಸೇಫ್​ ಎಂಬ ಸಂದೇಶವನ್ನು ಸಮಾಧಿಯಿಂದಲೇ ನೀಡಿದ್ದರು.

ಇದೀಗ ಅದೇ ಸಮಾಧಿಯಿಂದ ಮತ್ತೊಂದು ಸಂದೇಶ ರವಾನಿಸಿರುವ ನಿತ್ಯಾನಂದ ಸ್ವಾಮಿ, ಸಮಾಧಿ ಸ್ಥಿತಿಯನ್ನು ತಾವು ಎಂಜಾಯ್​ ಮಾಡುತ್ತಿರುವುದಾಗಿ, ಶೀಘ್ರವೇ ಇಲ್ಲಿಂದ ಹೊರಬಂದು ಭಕ್ತರಿಗೆ ದರ್ಶನ ನೀಡಲಾಗುವುದು ಎಂದು ಸಂದೇಶ ರವಾನಿಸಿದ್ದಾರೆ.

ನಿತ್ಯಾನಂದ ಸ್ವಾಮಿಯ ಸಂದೇಶ
ನಿತ್ಯಾನಂದ ಸ್ವಾಮಿಯ ಸಂದೇಶ

'ಪ್ರಿಯ ಭಕ್ತರೇ, ಶಿಷ್ಯರೇ ಮತ್ತು ಕೈಲಾಸವಾಸಿಗಳೇ ನಾನು ಸಮಾಧಿ ಸ್ಥಿತಿಯನ್ನು ಆನಂದಿಸುತ್ತಿದ್ದೇನೆ. ಇಲ್ಲಿಂದಲೇ ನಿಮ್ಮನ್ನು ಆಂತರಿಕವಾಗಿ ಸಂಪರ್ಕಿಸುತ್ತಿದ್ದೇನೆ. ಸಮಾಧಿಯಲ್ಲಿ ದೇಹವನ್ನು ತಹಬದಿಗೆ ತಂದುಕೊಂಡು ಶೀಘ್ರವೇ ಇಲ್ಲಿಂದ ಹೊರಬರುವೆ. ಬಳಿಕ ಎಂದಿನಂತೆ ಸತ್ಸಂಗ, ದರ್ಶನ ಮತ್ತು ತತ್ವ ಸಾರಗಳನ್ನು ಪ್ರಚುರಪಡಿಸಲಾಗುವುದು. ಮಹಾ ಕೈಲಾಸ ಇನ್ನಷ್ಟು ಬೆಳಗಲಿದೆ, ಉತ್ಕೃಷ್ಟಗೊಳ್ಳಲಿದೆ ಎಂದು ನಿತ್ಯಾನಂದ ಸ್ವಾಮಿ ಹೇಳಿದ್ದಾರೆ.

2019ರಲ್ಲಿ ಭಾರತ ಬಿಟ್ಟು ಕೆಲ ಶಿಷ್ಯರೊಂದಿಗೆ ಪಲಾಯನ ಮಾಡಿರುವ ನಿತ್ಯಾನಂದ ಈಕ್ವಡಾರ್​​ನ ಬಳಿಯ ದ್ವೀಪದಲ್ಲಿ ಕೈಲಾಸ ಎಂಬ ದೇಶ ಸೃಷ್ಟಿ ಮಾಡಿದ್ದಾನೆ. ಅಲ್ಲದೇ ಕೆಲ ದಿನಗಳಿಂದ ತಾನು ಸಮಾಧಿಯಲ್ಲಿರುವುದಾಗಿ ಘೋಷಿಸಿಕೊಂಡಿದ್ದಾನೆ. ಅಲ್ಲಿಂದಲೇ ಈ ಸಂದೇಶಗಳನ್ನು ರವಾನಿಸುತ್ತಿದ್ದಾನೆ.

ಓದಿ: ಗ್ರಾಹಕರೇ ಎಚ್ಚರ: 55 ಸಾವಿರ ಸಾಲಕ್ಕೆ 2 ಲಕ್ಷ ರೂ. ಕಟ್ಟಿದರೂ ಯುವತಿಗೆ 76 ನಂಬರ್​​ಗಳಿಂದ ಅಶ್ಲೀಲ ಚಿತ್ರಗಳ ರವಾನೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.