ನವದೆಹಲಿ/ಪಾಟ್ನಾ : ರಾಷ್ಟ್ರಮಟ್ಟದಲ್ಲಿ ಬಿಹಾರದ ರಾಜಕೀಯ ಭಾರಿ ಸುದ್ದಿಗೆ ಗ್ರಾಸವಾಗುತ್ತಿದೆ. ಎಲ್‌ಜೆಪಿಯಲ್ಲಿನ ಬೆಳವಣಿಗೆಗಳು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಕುತೂಹಲ ಮೂಡಿಸಿವೆ. ಕಳೆದ ಭಾರಿಯ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ಬೆಂಬಲ ಘೋಷಿಸುತ್ತಲೇ ಬಿಜೆಪಿ ಬೆಂಬಲಿತ ಜೆಡಿಯು ವಿರುದ್ಧ ತೊಡೆ ತಟ್ಟಿದ್ದ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್‌ರನ್ನು ಕುಗ್ಗಿಸುವಲ್ಲಿ ಸಿಎಂ ನಿತೀಶ್ ಕುಮಾರ್ ಯಶಸ್ವಿಯಾದ್ರಾ ಎಂಬ ಮಾತು ಕೇಳಿ ಬರುತ್ತಿವೆ.
ಬಿಹಾರ ಸಿಎಂ ನಿತೀಶ್ ಕುಮಾರ್ ಅವರನ್ನು ಬಿಹಾರ ರಾಜಕೀಯದ 'ಚಾಣಕ್ಯ' ಎಂದು ಏಕೆ ಕರೆಲಾಗುತ್ತದೆ. ಇದನ್ನು ಮತ್ತೊಮ್ಮೆ ಅವರು ಸಾಬೀತುಪಡಿಸಿದ್ದಾರೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಕೇಂದ್ರ ಮಾಜಿ ಸಚಿವ, ದಿ. ರಾಮ್ ವಿಲಾಸ್ ಪಾಸ್ವಾನ್ ಸ್ಥಾಪಿತ ಲೋಕ ಜನಶಕ್ತಿ ಪಕ್ಷದಲ್ಲಿನ ವಿದ್ಯಮಾನಗಳನ್ನು ನಿತೀಶ್ ಕುಮಾರ್ ತೆರೆಮರೆಯಲ್ಲಿ ಗಮನಿಸುತ್ತಿದ್ದರು.
ಎಲ್‌ಜೆಪಿಯಲ್ಲಿ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಹಾಗೂ ಸಹೋದರ ಪಶುಪತಿ ಕುಮಾರ್ ಪರಸ್ ಅವರ ನಡುವೆ ಉಂಟಾಗಿದ್ದ ರಾಜಕೀಯ ಮುನಿಸನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ನಿತೀಶ್ ಯಶಸ್ವಿಯಾಗಿದ್ದಾರೆ. ಎಲ್‌ಜೆಪಿಯಿಂದ ಚಿರಾಗ್ ಪಾಸ್ವಾನ್ ಅವರನ್ನು ಸೈಡ್‌ಲೈನ್ ಮಾಡಿಸುವ ಮಟ್ಟಿಗೆ ತಮ್ಮ ದಾಳ ಉರುಳಿಸಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: FB ನಕಲಿ ಖಾತೆ ಮೂಲಕ ಹಣಕ್ಕೆ ಬೇಡಿಕೆ: ಹುಬ್ಬಳ್ಳಿಯ 15,000ಕ್ಕೂ ಹೆಚ್ಚು ಮಂದಿ ಮೋಸದ ಜಾಲಕ್ಕೆ!
ಅನುಭವಿ ರಾಜಕಾರಣಿಯಾಗಿರುವ ಸಿಎಂ ನಿತೀಶ್ ಕುಮಾರ್, ವಿರೋಧಿಗಳ ವಿಶ್ವಾಸಾರ್ಹತೆಯನ್ನು ಮುರಿಯುವ ಮಾಸ್ಟರ್ ಪ್ಲಾನ್ ಮಾಡುತ್ತಾರೆ. ಬಿಹಾರ ರಾಜಕೀಯದಲ್ಲಿ ಎದುರಾಳಿಗಳನ್ನು ಸೋಲಿಸಲು ಮೌನದ ಆಟ ಆಡ್ತಾರೆ ಎಂಬುದು ಹಲವಾರು ಉದಾಹರಣೆಗಳಿವೆ. ಸಂಜಯ್ ಸಿಂಗ್, ಶ್ಯಾಮ್ ರಾಜಕ್, ಅಶೋಕ್ ಚೌಧರಿ ಸೇರಿದಂತೆ ಇನ್ನೂ ಅನೇಕರು ಒಮ್ಮೆ ನಿತೀಶ್ ಅವರ ವಿರೋಧಿ ಬಣದಲ್ಲಿ ಕಾಣಿಸಿಕೊಂಡು ಬಳಿಕ ಆಪ್ತರಾಗಿದ್ದಾರೆ.
ಪ್ರಸ್ತುತ ಬಿಡಿಯಾರ್ ವಿಧಾನ ಪರಿಷತ್ತಿನ ಸದಸ್ಯರಾಗಿರುವ ಜೆಡಿಯುನ ಸಂಜಯ್ ಸಿಂಗ್ ಅವರನ್ನು ಒಮ್ಮೆ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಬಲಗೈ ಎಂದು ಪರಿಗಣಿಸಲಾಗಿತ್ತು. ಅದೇ ರೀತಿ, ಶ್ಯಾಮ್ ರಾಜಕ್ ಅವರು ಲಾಲು ಪ್ರಸಾದ್ ಅವರೊಂದಿಗೆ ಬಹಳ ಆಪ್ತರಾಗಿದ್ದರು ಮತ್ತು ಅವರೂ ನಿತೀಶ್ ಅವರೊಂದಿಗೆ ಸೇರಿಕೊಂಡಿದ್ದರು.
ಇದನ್ನೂ ಓದಿ: ಕೊರೊನಾ ಸಂಬಂಧ ಪ್ರತಿಪಕ್ಷ ಹಳಿ ತಪ್ಪಿಸುವ ಕೆಲಸ ಮಾಡುತ್ತಿವೆ : ನಡ್ಡಾ ಕಿಡಿ
ಪಾಟ್ನಾ ಮೂಲದ ರಾಜಕೀಯ ತಜ್ಞ ಡಾ.ಸಂಜಯ್ ಕುಮಾರ್ ಅವರು, "ತನ್ನ ಮೇಲೆ ಹಲ್ಲೆ ನಡೆಸುತ್ತಿರುವ ಮತ್ತು ಮುಖ್ಯವಾಹಿನಿಯ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಎಲ್ಲ ನಾಯಕರನ್ನು ಮುರಿಯುವುದು ನಿತೀಶ್ ಅವರ ಕಾರ್ಯತಂತ್ರದ ಒಂದು ಭಾಗವಾಗಿದೆ ಎಂದು ಹೇಳಿದ್ದಾರೆ.