ETV Bharat / bharat

ಇಲ್ಲಿನ ಮೊದಲ ಮಹಿಳಾ ಡ್ರೋನ್ ಪೈಲಟ್: ಕೃಷಿಯಲ್ಲಿ ಡ್ರೋನ್ ಬಳಸಲು ರೈತರಿಗೆ ತರಬೇತಿ ನೀಡುತ್ತಿರುವ ದಿಟ್ಟೆ! - ETv Bharat Kannada news

ಹರಿಯಾಣದಲ್ಲಿ ನಿಶಾ ಸಲೋಂಕಿ ಎಂಬ ಮೊದಲ ಮಹಿಳಾ ಡ್ರೋನ್​ ಪೈಲಟ್ - ಡ್ರೋನ್ ಬಳಸಲು ರೈತರಿಗೆ ತರಬೇತಿ - ಕರ್ನಲ್​ ಮಾಹಾರಾಣಾ ಪ್ರತಾಪ್​ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಕೃಷಿ ಇಂಜಿನಿಯರಿಂಗ್​ ಪದವಿ

Female drone pilot Nisha Sonki
ಮಹಿಳಾ ಡ್ರೋನ್ ಪೈಲಟ್ ನಿಶಾ ಸಲೋಂಕಿ
author img

By

Published : Jan 12, 2023, 8:52 PM IST

ಕರ್ನಲ್​ (ಹರಿಯಾಣ) : ಇತ್ತೀಚಿನ ದಿನಗಳಲ್ಲಿ, ಡ್ರೋನ್​ ತಂತ್ರಜ್ಞಾನವು ಅತ್ಯಂತ ಪರಿಣಾಮಕಾರಿ ತಂತ್ರಜ್ಞಾನವಾಗಿ ಹೊರಹೊಮ್ಮಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಡ್ರೋನ್​ ಬಳಕೆ ಹಂತ ಹಂತವಾಗಿ ಉಪಯುಕ್ತಕ್ಕೆ ಬರುತ್ತಿದೆ. ಆದರೆ, ಕೃಷಿ ಕ್ಷೇತ್ರದಲ್ಲಿ ಇದರ ಪ್ರಮುಖ ಪಾತ್ರ ಆಧುನಿಕ ರೈತರಿಗೆ ಸಹಕಾರಿಯಾಗಿದೆ. ಅಂದ ಹಾಗೆ ಹರಿಯಾಣದಲ್ಲಿ ನಿಶಾ ಸಲೋಂಕಿ ಎಂಬುವರು ಮೊದಲ ಮಹಿಳಾ ಡ್ರೋನ್​ ಪೈಲಟ್ ಆಗುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಹೆಚ್ಚಾಗಿ ಹರಿಯಾಣದ ಹೆಣ್ಣು ಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲೂ ಇತ್ತಿಚಿನ ದಿನಗಳಲ್ಲಿ ಹೆಸರು ಗಳಿಸುವುದರ ಮೂಲಕ ಇತರರಿಗೆ ಮಾದರಿಯಾಗುತ್ತಿದ್ದಾರೆ. ಈ ಮಾತಿಗೆ ಇಂಬು ನೀಡುವಂತೆ ಹರಿಯಾಣದ ಮೊದಲ ಮಹಿಳಾ ಡ್ರೋನ್​ ಪೈಲಟ್​ ಎಂದು ನಿಶಾ ಸೋಲಂಕಿ ಗುರುತಿಸಿಕೊಂಡಿದ್ದಾರೆ. ಕರ್ನಲ್​ ಮಾಹಾರಾಣಾ ಪ್ರತಾಪ್​ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಈ ಬಗ್ಗೆ ಅವರು ತರಬೇತಿ ನೀಡುತ್ತಿದ್ದಾರೆ. ಈ ಮೂಲಕ ರೈತರಿಗೆ ತಮ್ಮ ಕೃಷಿ ಕ್ಷೇತ್ರ ಪ್ರದೇಶದಲ್ಲಿ ಹೇಗೆ ಡ್ರೋನ್​ ಹಾರಿಸುವುದು ಮತ್ತು ಬಳುಸುವುದು ಎಂಬ ಅರಿವು ಮೂಡಿಸುತ್ತಿದ್ದಾರೆ.

ನಿಶಾ ಸೋಲಂಕಿ ಡ್ರೋನ್​ ಪೈಲಟ್​ ಆಗಲು ಸಾಕಷ್ಟು ಅನೇಕ ಕಷ್ಟಗಳನ್ನು ಎದುರಿಸಿದ್ದಾರೆ. ಕಷ್ಟಪಟ್ಟು ಡ್ರೋನ್ ಪೈಲಟ್​ ಆಗಿದ್ದಾರೆ. ತಮ್ಮ ಸ್ವ ಪ್ರಯತ್ನದಿಂದ ಈ ಸಾಧನೆ ಮಾಡಿದ ನಿಶಾಗೆ ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಡ್ರೋನ್​ ಉತ್ಸವದಲ್ಲಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಸುವರ್ಣಾವಕಾಶ ಸಿಕ್ಕಿತು.

ಕರ್ನಲ್​ ಮಾಹಾರಾಣಾ ಪ್ರತಾಪ್​ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಕೃಷಿ ಇಂಜಿನಿಯರಿಂಗ್​ ಪದವಿ ಪಡೆದಿರುವ ನಿಶಾ ಕೃಷಿ ಕೇತ್ರದ ಅಭಿವೃದ್ಧಿಯ ಕನಸು ಕಂಡಿದ್ದರು. ಈ ಕನಸು ನನಸು ಮಾಡುವ ಉದ್ದೇಶದಿಂದಲೇ ಅವರು ನೀಶಾ ಕೃಷಿ ಇಂಜಿನಿಯರಿಂಗ್​ ಮಾಡಿದ್ದಾರೆ. ಆ ಮೂಲಕ ಹೊಸ ಹೊಸ ಆಧುನಿಕ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸುವ ಪಣ ತೊಟ್ಟಿದ್ದಾರೆ. ಈ ದಿಶೆಯಲ್ಲಿ ರೈತರಿಗೆ ತರಬೇತಿ ನೀಡುತ್ತಿದ್ದೇನೆ ಅಂತಾರೆ ನಿಶಾ ಸೋಲಂಕಿ. ಕೃಷಿ ಕ್ಷೇತ್ರದಲ್ಲಿ ಪುರುಷರಷ್ಟೇ ಮಹಿಳೆರಿಗೂ ಸಮಾನವಾದ ಪ್ರಾಮುಖ್ಯತೆ ಇದೆ. ಆದರೆ ಮಹಿಳೆಯರು ಕೃಷಿಯಲ್ಲಿ ತೊಡಗಿಸಿಕೊಳ್ಳುವುದನ್ನು ಕಿಳಿರಿಮೆ ಎಂದುಕೊಳ್ಳಬಾರದು. ಈ ಕಿಳಿರಿಮೆ ತೊಡಗಿಸಲೆಂದೇ ಹೊಸ ತಂತ್ರಜ್ಞಾನವನ್ನು ರೈತರಿಗೆ ಪರಿಚಯಿಸಲಾಗುತ್ತಿದೆ ಎಂದು ಸೋಲಂಕಿ ಹೇಳಿದ್ದಾರೆ.

ಕೃಷಿಯಲ್ಲಿ ಡ್ರೋನ್​ ಹೇಗೆ ಸಹಾಯ ಮಾಡುತ್ತದೆ : ಸಾಮಾನ್ಯವಾಗಿ ಒಂದು ಎಕರೆ ಕೃಷಿ ಭೂಮಿಗೆ ಸಿಂಪಡಿಸಲು 200 ಲೀಟರ್​ ನೀರು ಬೇಕಾಗುತ್ತದೆ. ಅದೇ ಕೆಲಸವನ್ನು ಡ್ರೋನ್​​ ಮೂಲಕ ಮಾಡುವುದರಿಂದ ಕೇವಲ 10 ಲೀಟರ್​ ನೀರಿನಲ್ಲಿ ನಿರ್ದಿಷ್ಟವಾಗಿ ಕೆಲಸ ಮುಗಿಯುತ್ತದೆ. ಹಾಗೂ ನೀರು ಹೆಚ್ಚು ಪೋಲಾಗುವಾಗುವುದನ್ನು ತಪ್ಪಿಸಿ ಕಡಿಮೆ ಸಮಯದಲ್ಲಿ ಕಾರ್ಯ ನಿರ್ವಹಿಸುವುದರಿಂದ ರೈತರಿಗೆ ಅನುಕೂಲಕರವಾಗಿದೆ. ಇದರೊಂದಿಗೆ ರಾಸಾಯನಿಕನ ಸಿಂಪಡಣೆ ಸಂದರ್ಭದಲ್ಲಿ ಗಾಳಿಯಲ್ಲಿ ರಾಸಾಯನಿಕ ಕಣಗಳು ಹರಡಲು ಮತ್ತು ಪರಿಸರದ ಮೇಲೆ ಹಾನಿಯನ್ನುಂಟು ಮಾಡುವ ಸಾಧ್ಯತೆಗಳು ತೀರಾ ಕಡಿಮೆ ಇರುತ್ತದೆ. ಕಬ್ಬಿನಂತಹ ವಾರ್ಷಿಕ ಬೆಳೆಗಳನ್ನು ಬೆಳೆಯುವ ವೇಳೆ ಡ್ರೋನ್​ ಮೂಲಕ ಸಿಂಪಡಿಸುವುದು ತುಂಬಾ ಸುಲಭವಾಗಿದೆ. ಇದನ್ನೂ ಓದಿ : ಡ್ರೋನ್ ಮೂಲಕ ಅಡಿಕೆಗೆ ಔಷಧಿ ಸಿಂಪಡಣೆ.. ಸುಳ್ಯದಲ್ಲಿ ಮೊದಲ ಪ್ರಯೋಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.