ETV Bharat / bharat

ನಿಫಾ ಸೋಂಕಿಗೆ ಕೇರಳದಲ್ಲಿ ಇಬ್ಬರು ಸಾವು ಶಂಕೆ: ರೋಗದ ಲಕ್ಷಣಗಳೇನು? ತಡೆ ಹೇಗೆ? ಸಂಪೂರ್ಣ ಮಾಹಿತಿ - ಆರೋಗ್ಯ ಸಚಿವೆ ವೀಣಾ ಜಾರ್ಜ್‌

Nipah alert in Kerala: ನಿಫಾ ಸೋಂಕಿಗೆ ಕೋಝಿಕ್ಕೋಡ್‌ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಜಿಲ್ಲೆಯಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್‌ ತಿಳಿಸಿದ್ದಾರೆ.

Representative image
ಪ್ರಾತಿನಿಧಿಕ ಚಿತ್ರ
author img

By PTI

Published : Sep 12, 2023, 7:17 AM IST

Updated : Sep 12, 2023, 9:32 AM IST

ತಿರುವನಂತಪುರಂ (ಕೇರಳ): ನಿಫಾ ವೈರಸ್‌ನಿಂದ ಇಬ್ಬರು ಸಾವನಪ್ಪಿರುವ ಶಂಕೆ ಹಿನ್ನೆಲೆಯಲ್ಲಿ ಕೇರಳ ಆರೋಗ್ಯ ಇಲಾಖೆ ಸೋಮವಾರ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಿದ್ದಾರೆ ಎಂದು ಆರೋಗ್ಯ ಇಲಾಖೆ ಸೋಮವಾರ ರಾತ್ರಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಜ್ವರದಿಂದ ಬಳಲುತ್ತಿದ್ದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಖಾಸಗಿ ಆಸ್ಪತ್ರೆ ವರದಿ ಮಾಡಿರುವುದಾಗಿ ಪ್ರಕಟಣೆ ಹೇಳಿದೆ. ಈ ಸಾವು ನಿಫಾ ವೈರಸ್‌ನಿಂದಲೇ ಉಂಟಾಗಿರಬಹುದು ಎಂದು ಬಲವಾಗಿ ಶಂಕಿಸಲಾಗಿದೆ. ಮೃತರಲ್ಲಿ ಒಬ್ಬರ ಸಂಬಂಧಿಯನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

2018 ಮತ್ತು 2021ರಲ್ಲಿ ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ಸೋಂಕಿನಿಂದ ಸಾಕಷ್ಟು ಸಾವುಗಳು ವರದಿಯಾಗಿದ್ದವು. ದಕ್ಷಿಣ ಭಾರತದಲ್ಲಿ ಮೊದಲ ನಿಫಾ ವೈರಸ್ ಕೋಝಿಕ್ಕೋಡ್‌ನಲ್ಲಿ ಮೇ 19, 2018 ರಂದು ಪತ್ತೆಯಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ, ನಿಫಾ ಸೋಂಕು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಝೂನೋಟಿಕ್ ಕಾಯಿಲೆಯಾಗಿದೆ. ಇದು ಕಲುಷಿತ ಆಹಾರದ ಮೂಲಕ ಅಥವಾ ನೇರವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಲ್ಲದು.

"ಸೋಂಕಿತ ಜನರಿಂದ, ಲಕ್ಷಣರಹಿತ (ಸಬ್‌ಕ್ಲಿನಿಕಲ್) ಸೋಂಕಿನಿಂದಾಗಿ ತೀವ್ರ ಉಸಿರಾಟದ ಸಮಸ್ಯೆ ಮತ್ತು ಮಾರಣಾಂತಿಕ ಎನ್ಸೆಫಾಲಿಟಿಸ್‌ವರೆಗೂ ಇದು ಹಲವಾರು ರೋಗಗಳನ್ನು ಉಂಟುಮಾಡುತ್ತದೆ" ಎಂದು ಡಬ್ಲ್ಯೂಹೆಚ್​ಒ ಹೇಳಿದೆ.

ನಿಫಾ ವೈರಸ್ ಎಂದರೇನು?: ಇದು ಝೂನೋಟಿಕ್ ವೈರಸ್. ಕೋವಿಡ್​ನಂತೆ ಸಾಂಕ್ರಾಮಿಕ ರೋಗ. ಬಾವಲಿಗಳಿಂದ ಹುಟ್ಟಿಕೊಂಡು ಇತರ ಪ್ರಾಣಿ ಮತ್ತು ಮನುಷ್ಯರಿಗೆ ಹರಡುತ್ತದೆ. ಇಂತಹ ವೈರಸ್ ಹರಡುವಿಕೆಯು ಸಾಮಾನ್ಯವಾಗಿ ಹಂದಿ, ನಾಯಿ ಮತ್ತು ಕುದುರೆಗಳಲ್ಲಿ ಕಂಡುಬರುತ್ತದೆ. ಆದರೆ ಮನುಷ್ಯರ ಮೂಲಕ ಹರಡಿದರೆ ಆಗ ಅದು ಮಾರಕವಾಗಬಹುದು. ಈ ವೈರಸ್‌ನ ಕಾಲಾವಧಿ 5ರಿಂದ 14 ದಿನಗಳು ಮತ್ತು 45 ದಿನಗಳವರೆಗೂ ಇರುತ್ತದೆ.

ನಿಫಾ ವೈರಸ್‌ನ ಲಕ್ಷಣಗಳಿವು:

  • ಮೆದುಳಿನ ಜ್ವರ.
  • ನಿರಂತರ ಕೆಮ್ಮು ಹಾಗೂ ಉಸಿರಾಟದ ಸಮಸ್ಯೆ.
  • ತಲೆನೋವು, ಸ್ನಾಯು ನೋವು, ಜ್ವರ, ವಾಂತಿ, ಗಂಟಲು ನೋವು, ತಲೆಸುತ್ತುವಿಕೆ, ಅರೆ ನಿದ್ರಾವಸ್ಥೆ.

ರೋಗ ನಿರ್ಣಯ ಹೇಗೆ?: ವೈರಸ್ ಪತ್ತೆ ಹಚ್ಚಲು ನೈಜ-ಸಮಯದ ಪಾಲಿಮರೇಸ್ ಚೈನ್ ರಿಯಾಕ್ಷನ್ (ಆರ್‌ಟಿಪಿಸಿಆರ್) ಅನ್ನು ದೈಹಿಕ ದ್ರವಗಳಿಂದ ತೆಗೆದುಕೊಳ್ಳಬೇಕು ಮತ್ತು ಕಿಣ್ವ ಸಂಯೋಜಿತ ಇಮ್ಯುನೊಸರ್ಬೆಂಟ್ ಅಸ್ಸೇ (ಎಲಿಸಾ) ಮೂಲಕ ಪ್ರತಿಕಾಯ ಪತ್ತೆ ಮಾಡಬಹುದು.

ಮನುಷ್ಯರಿಗೆ ಹೇಗೆ ಹರಡುತ್ತದೆ?: ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಎನ್‌ಸಿಡಿಸಿ)​ ಮಾರ್ಗಸೂಚಿ ಪ್ರಕಾರ, ಸೋಂಕಿತ ಬಾವಲಿ, ಹಂದಿ ಅಥವಾ ಮಾನವರೊಂದಿಗೆ ನಿಕಟ ಸಂಪರ್ಕದಿಂದಾಗಿ ಇತರರಿಗೆ ತಗಲುತ್ತದೆ. ಎನ್‌ಸಿಡಿಸಿ ಪ್ರಕಾರ, ಸೋಂಕಿತರ ಮೃತದೇಹಗಳು ಕೂಡ ರೋಗ ಹರಡುವಿಕೆಗೆ ಕಾರಣವಾಗಿರಬಹುದು.

ವೈರಸ್ ತಡೆಗಟ್ಟುವುದು ಹೇಗೆ?:

  • ಕೈಗಳನ್ನು ನಿಯಮಿತವಾಗಿ ಸಾಬೂನು ಮತ್ತು ನೀರಿನಿಂದ ತೊಳೆಯಿರಿ.
  • ವೈರಸ್‌ನಿಂದ ಬಳಲುತ್ತಿರುವವರ ಮೃತದೇಹಗಳ ನಿರ್ವಹಣೆಯನ್ನು ಮಾರ್ಗಸೂಚಿಗಳ ಪ್ರಕಾರವೇ ಮಾಡಬೇಕು.
  • ಹಣ್ಣುಗಳನ್ನು ಸರಿಯಾಗಿ ತೊಳೆದು ಸೇವಿಸಿ.
  • ಅನಾರೋಗ್ಯದ ಪ್ರಾಣಿಗಳನ್ನು ನಿರ್ವಹಿಸುವಾಗ ಕೈಗವಸು ಮತ್ತು ಇತರ ರಕ್ಷಣಾತ್ಮಕ ಬಟ್ಟೆಗಳನ್ನು ಧರಿಸಬೇಕು.

ನಿಫಾ ವೈರಸ್‌ಗೆ ಚಿಕಿತ್ಸೆ: ಪ್ರಸ್ತುತ, ನಿಫಾ ವೈರಸ್‌ಗೆ ಚಿಕಿತ್ಸೆ ನೀಡಲು ಯಾವುದೇ ನಿರ್ದಿಷ್ಟ ಔಷಧಿ ಇಲ್ಲ. ಸೋಂಕಿನಿಂದ ಉಂಟಾಗುವ ತೀವ್ರ ಉಸಿರಾಟ ಮತ್ತು ನರವೈಜ್ಞಾನಿಕ ತೊಡಕುಗಳ ಚಿಕಿತ್ಸೆಗಾಗಿ ಸಹಕಾರ ಅಗತ್ಯ ಎಂದು ಡಬ್ಲ್ಯೂಹೆಚ್​ಒ ಹೇಳಿದೆ.

ಇದನ್ನೂ ಓದಿ: ಕೇರಳದ 11 ವರ್ಷದ ಬಾಲಕ ನಿಫಾ ವೈರಸ್​​ನಿಂದ ಮೃತಪಟ್ಟಿಲ್ಲ: ಆರೋಗ್ಯ ಇಲಾಖೆ

Last Updated : Sep 12, 2023, 9:32 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.