ETV Bharat / bharat

ಇಂಟರ್​ ಎಕ್ಸಾಂ ರಿಸಲ್ಟ್​ ಔಟ್​.. ರಾಜ್ಯಾದ್ಯಂತ 9 ವಿದ್ಯಾರ್ಥಿಗಳ ಆತ್ಮಹತ್ಯೆ! - ಪಿಯು ಪರೀಕ್ಷೆಯ ಫಲಿತಾಂಶ ಪ್ರಕಟ

ಆಂಧ್ರಪ್ರದೇಶದಲ್ಲಿ ದುರಂತ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಪಿಯು ಪರೀಕ್ಷೆ ಫಲಿತಾಂಶ ಹೊರ ಬಿದ್ದಿದ್ದು, ಇಂಟರ್‌ಮೀಡಿಯೇಟ್‌ ಪರೀಕ್ಷೆಯಲ್ಲಿ ಫೇಲ್​ ಆದ ಕಾರಣ ರಾಜ್ಯಾದ್ಯಂತ ಸುಮಾರು ಒಂಬತ್ತು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

nine inter students Suicide  intermediate exams fail  Suicide over intermediate exams fail  ಇಂಟರ್​ ಎಕ್ಸಾಂ ರಿಸಲ್ಟ್​ ಔಟ್  ರಾಜ್ಯಾದ್ಯಂತ 9 ವಿದ್ಯಾರ್ಥಿಗಳು ಆತ್ಮಹತ್ಯೆ  ಆಂಧ್ರಪ್ರದೇಶದಲ್ಲಿ ದುರಂತ ಘಟನೆ  ಪಿಯು ಪರೀಕ್ಷೆ ಫಲಿತಾಂಶ  ಇಂಟರ್‌ಮೀಡಿಯೇಟ್‌ ಪರೀಕ್ಷೆಯಲ್ಲಿ ಫೇಲ್​ ರಾಜ್ಯದಿಂದ ವಿಷಾದಕರ ಸುದ್ದಿ  ಪಿಯು ಪರೀಕ್ಷೆಯ ಫಲಿತಾಂಶ ಪ್ರಕಟ  ಮನನೊಂದ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ
ರಾಜ್ಯಾದ್ಯಂತ 9 ವಿದ್ಯಾರ್ಥಿಗಳು ಆತ್ಮಹತ್ಯೆ
author img

By

Published : Apr 28, 2023, 2:22 PM IST

ಅಮರಾವತಿ, ಆಂಧ್ರಪ್ರದೇಶ: ಈ ರಾಜ್ಯದಿಂದ ವಿಷಾದಕರ ಸುದ್ದಿಯೊಂದು ಕೇಳಿ ಬಂದಿದೆ. ಇತ್ತಿಚೇಗೆ ಪಿಯು ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆಯಲ್ಲಿ ಪಾಸಾಗದ ಹಿನ್ನೆಲೆ ಸುಮಾರು ಒಂಬತ್ತು ವಿದ್ಯಾರ್ಥಿಗಳು ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದಾರೆ. ಹೌದು, ಮಧ್ಯಂತರ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ, ಕಡಿಮೆ ಅಂಕ ಬಂದಿದ್ದಕ್ಕೆ ಮನನೊಂದ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದ ವಿವಿಧೆಡೆ ಒಂಬತ್ತು ಇಂಟರ್ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಅವರ ಸ್ಥಿತಿಯೂ ಚಿಂತಾಜನಕವಾಗಿದೆ ಎನ್ನಲಾಗ್ತಿದೆ.

ಚಿತ್ತೂರು ಜಿಲ್ಲೆಯ ಪುಂಗನೂರು ಮಂಡಲದ ಏಟವಕ್ಕಿಲಿಯ ವಿದ್ಯಾರ್ಥಿನಿ ಅನುಷಾ (17) ಇಂಟರ್‌ ಪರೀಕ್ಷೆಯಲ್ಲಿ ಫೇಲ್​ ಆಗಿದ್ದರಿಂದ ಮನನೊಂದು ಗುರುವಾರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನುಷಾ ಇತ್ತೀಚೆಗೆ ಕರ್ನಾಟಕದಲ್ಲಿದ್ದ ತಮ್ಮ ಅಜ್ಜಿಯ ಮನಗೆ ಹೋಗಿದ್ದರು. ಬುಧವಾರ ವಿದ್ಯಾರ್ಥಿನಿಯ ತಾಯಿ ಕರೆ ಮಾಡಿ ವಿಷಯವೊಂದರಲ್ಲಿ ಫೇಲ್​ ಆಗಿದ್ದೀಯಾ ಎಂದು ತಿಳಿಸಿದ್ದರು. ಇನ್ನೆರಡು ದಿನದಲ್ಲಿ ಬಂದು ಎಕ್ಸಾಮ್ ಫೀ ಕಟ್ಟಿ ಈ ಸಲ ಪಾಸ್ ಆಗುತ್ತೇನೆ ಎಂದು ಅಮ್ಮನಿಗೆ ಧೈರ್ಯ ಹೇಳಿದ್ದಳು ಅನುಷಾ. ಆದರೆ ಗುರುವಾರ ಬೆಳಗ್ಗೆ ಮಗಳ ಸಾವಿನ ಸುದ್ದಿ ಕೇಳಿ ಕಂಗಾಲಾದ ಪೋಷಕರು ಕರ್ನಾಟಕಕ್ಕೆ ತೆರಳಿದ್ದಾರೆ.

ಚಿತ್ತೂರು ಜಿಲ್ಲೆಯ ಬೈರೆಡ್ಡಿಪಲ್ಲಿಯ ಕೃಷ್ಣಪ್ಪ ಅವರ ಪುತ್ರ ಬಾಬು (17) ಇಂಟರ್ ಎಂಪಿಸಿ ದ್ವಿತೀಯ ವರ್ಷದ ಗಣಿತದಲ್ಲಿ ತೇರ್ಗಡೆಯಾಗಿರಲಿಲ್ಲ. ಇದರಿಂದ ಮನನೊಂದ ಅವರು ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಅನಕಾಪಲ್ಲಿಯ ಕರುಬೋಟು ರಾಮರಾವ್ ಮತ್ತು ಅಪ್ಪಲರಮಣ ದಂಪತಿಯ ಕಿರಿಯ ಪುತ್ರ ಕರುಬೋಟು ತುಳಸಿ ಕಿರಣ್ (17) ಗುರುವಾರ ಇಂಟರ್ ಮೊದಲ ವರ್ಷದಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದಕ್ಕೆ ಮನನೊಂದಿದ್ದ ಶ್ರೀಕಾಕುಳಂ ಜಿಲ್ಲೆ ಸಂತಬೊಮ್ಮಾಳಿ ತಾಲೂಕಿನ ದಂಡುಗೋಪಾಲಪುರಂ ಗ್ರಾಮದ ಬಾಲಕ ತರುಣ್ (17) ಗುರುವಾರ ತೆಕ್ಕಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಪೋಷಕರು ಕೃಷ್ಣರಾವ್ ಮತ್ತು ದಮಯಂತಿ ರಾಜಮಹೇಂದ್ರವರಂನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ವಿಶಾಖಪಟ್ಟಣದ ಆತ್ಮಕೂರು ಅಖಿಲಶ್ರೀ (16) ಇಂಟರ್‌ ಫಲಿತಾಂಶದಲ್ಲಿ ಪಾಸ್​ ಆಗಲಿಲ್ಲ ಎಂಬ ಬೇಸರದಿಂದ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ಕೂಲಿ ಮಾಡಿ ಮಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಶವವನ್ನು ರಹಸ್ಯವಾಗಿ ಸ್ಮಶಾನಕ್ಕೆ ಕೊಂಡೊಯ್ಯುತ್ತಿದ್ದಾಗ ಪೊಲೀಸರು ಅದನ್ನು ತಡೆದು ಮರಣೋತ್ತರ ಪರೀಕ್ಷೆಗಾಗಿ ಕೆಜಿಎಚ್‌ಗೆ ಸ್ಥಳಾಂತರಿಸಿದರು.

ವಿಶಾಖಪಟ್ಟಣದ ಶ್ರೀನಿವಾಸನಗರ ಪಲ್ನಾಟಿ ಕಾಲೋನಿಯ ನಿವಾಸಿ ಬೋನೇಲ ಜಗದೀಶ್ (18) ಇಂಟರ್ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದನು. ವಿಷಯವೊಂದರಲ್ಲಿ ಫೇಲ್​ ಆದ ಕಾರಣ ಮನನೊಂದ ಅವರು ಗುರುವಾರ ಬೆಳಗ್ಗೆ ತಮ್ಮ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವನಿಗೆ ತಂದೆ ಇರಲಿಲ್ಲ. ತಾಯಿ ರಾಮಲಕ್ಷ್ಮಿಯನ್ನು ಬಿಟ್ಟು ಅಗಲಿದ್ದಾನೆ. ಅನಂತಪುರ ಜಿಲ್ಲೆಯ ಕಣೇಕಲ್ಲು ತಾಲೂಕಿನ ಹಣಕನಹಾಳ್ ಗ್ರಾಮದ ಮಹೇಶ್ (17) ಮೊದಲ ವರ್ಷದ ಇಂಟರ್ ಪರೀಕ್ಷೆಗೆ ಹಾಜರಾಗಿರಲಿಲ್ಲ. ಬುಧವಾರ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪೋಷಕರು ಪ್ರಶ್ನಿಸಿದ್ದಾರೆ. ಇದರಿಂದ ಮನನೊಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಎನ್​ಟಿಆರ್ ಜಿಲ್ಲೆಯ ನಂದಿಗಾಮದಲ್ಲಿ ಇಂಟರ್ ಪ್ರಥಮ ವರ್ಷದ ವಿದ್ಯಾರ್ಥಿ ಶೇಖ್ ಜಾನ್ ಸೈದಾ (16) ಗಣಿತದಲ್ಲಿ, ಭೌತಶಾಸ್ತ್ರದಲ್ಲಿ ಹಾಗೂ ರಸಾಯನಶಾಸ್ತ್ರದಲ್ಲಿ ಅತೀ ಕಡಿಮೆ ಮಾರ್ಕ್ಸ್​ ಪಡೆದಿದ್ದರಿಂದ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಮ್ಮ ಮಗನ ಪರೀಕ್ಷೆಯ ಪತ್ರಿಕೆಗಳನ್ನು ಅಧಿಕಾರಿಗಳು ಸರಿಯಾಗಿ ಮೌಲ್ಯಮಾಪನ ಮಾಡಿಲ್ಲ ಎಂದು ವಿದ್ಯಾರ್ಥಿಯ ಪೋಷಕರು ಆರೋಪಿಸಿದರು ಮತ್ತು ಅವನ ಸಾವಿಗೆ ಅವರೇ ಹೊಣೆಗಾರರಾಗಿದ್ದಾರೆ ಎಂದು ದೂರಿದ್ದಾರೆ. ಎನ್​ಟಿಆರ್​ ಜಿಲ್ಲೆಯ ಚಿಲ್ಲಕಲ್ಲುವಿನ ರಮಣ ರಾಘವ ಎಂಬ ವಿದ್ಯಾರ್ಥಿ ಹಿರಿಯ ಇಂಟರ್‌ನಲ್ಲಿ ಒಂದು ವಿಷಯದಲ್ಲಿ ಫೇಲ್​ ಆಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಜಯನಗರಂ ಜಿಲ್ಲೆಯ ಗರಿವಿಡಿ ತಾಲೂಕಿನ ಗ್ರಾಮವೊಂದರ ವಿದ್ಯಾರ್ಥಿಯೊಬ್ಬ ಇಂಟರ್ ದ್ವಿತೀಯ ವರ್ಷದಲ್ಲಿ ಮೂರು ವಿಷಯಗಳಲ್ಲಿ ಅನುತ್ತೀರ್ಣನಾಗಿದ್ದಾನೆ. ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದನು. ಸಂಬಂಧಿಕರು ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಇದೇ ಜಿಲ್ಲೆಯ ರಾಜಂ ತಾಲೂಕಿನ ಗ್ರಾಮವೊಂದರ ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬ ಗುರುವಾರ ಪರೀಕ್ಷೆಯಲ್ಲಿ ಪಾಸಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ರಾಜಂ ಸಾಮಾಜಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಓದಿ: ಜಿಯಾ ಖಾನ್​​ ಆತ್ಮಹತ್ಯೆ ಪ್ರಕರಣ: ಸೂರಜ್ ಪಾಂಚೋಲಿ ನಿರ್ದೋಷಿ..ಕೋರ್ಟ್​​ ಮಹತ್ವದ ತೀರ್ಪು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.