ಹೈದರಾಬಾದ್: ದೇಶಾದ್ಯಂತ ಒಮಿಕ್ರಾನ್ ಭೀತಿ ಹೆಚ್ಚಾಗಿದ್ದು, ಈಗಾಗಲೇ ಬಹುತೇಕ ಎಲ್ಲ ರಾಜ್ಯಗಳಲ್ಲೂ ಹೊಸ ಸೋಂಕು ಕಾಣಿಸಿಕೊಂಡಿದೆ. ದಿನದಿಂದ ದಿನಕ್ಕೆ ಹೆಚ್ಚಿನ ವೈರಾಣು ಪ್ರಕರಣ ಕಾಣಿಸಿಕೊಳ್ಳಲು ಶುರುವಾಗಿರುವ ಕಾರಣ ಹೊಸ ಹೊಸ ಮಾರ್ಗಸೂಚಿ ಜಾರಿಗೊಳ್ಳುತ್ತಿವೆ.
ಹರಿಯಾಣದಲ್ಲಿ ಒಮಿಕ್ರಾನ್ ಸೋಂಕು ಹೆಚ್ಚಾಗಿರುವ ಕಾರಣ ಇಂದಿನಿಂದ ನೈಟ್ ಕರ್ಫ್ಯೂ ಜಾರಿಗೊಳ್ಳಲಿದ್ದು, ರಾತ್ರಿ 11ರಿಂದ ಬೆಳಗ್ಗೆ 5 ಗಂಟೆಯವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಇದರ ಜೊತೆಗೆ ಸಾರ್ವಜನಿಕ ಸಮಾರಂಭಗಳಲ್ಲಿ 200ಕ್ಕೂ ಅಧಿಕ ಜನರು ಒಟ್ಟಿಗೆ ಸೇರದಂತೆ ಸೂಚನೆ ನೀಡಲಾಗಿದೆ.
-
Maharashtra | All new guidelines including restriction on the gathering of more than 5 people from 9pm-6am in all public places and 50% capacity for gyms, spas, hotels, theatres & cinema halls to be effective from midnight today#Omicron pic.twitter.com/MTrX83WYzf
— ANI (@ANI) December 24, 2021 " class="align-text-top noRightClick twitterSection" data="
">Maharashtra | All new guidelines including restriction on the gathering of more than 5 people from 9pm-6am in all public places and 50% capacity for gyms, spas, hotels, theatres & cinema halls to be effective from midnight today#Omicron pic.twitter.com/MTrX83WYzf
— ANI (@ANI) December 24, 2021Maharashtra | All new guidelines including restriction on the gathering of more than 5 people from 9pm-6am in all public places and 50% capacity for gyms, spas, hotels, theatres & cinema halls to be effective from midnight today#Omicron pic.twitter.com/MTrX83WYzf
— ANI (@ANI) December 24, 2021
ಇದನ್ನೂ ಓದಿರಿ: ಉನ್ನತ ಸ್ಥಾನದ 100ಕ್ಕೂ ಅಧಿಕ ಅಧಿಕಾರಿಗಳು ಭ್ರಷ್ಟರು.. ಸದನದಲ್ಲಿ ಮಾಹಿತಿ ನೀಡಿದ ಸರ್ಕಾರ
ಉತ್ತರ ಪ್ರದೇಶದಲ್ಲೂ ನಾಳೆಯಿಂದ ನೈಟ್ ಕರ್ಫ್ಯೂ ಜಾರಿಯಾಗಲಿದ್ದು, ರಾತ್ರಿ 11ರಿಂದ ಬೆಳಗ್ಗೆ 5 ಗಂಟೆವರೆಗೆ ನಿಯಮ ಜಾರಿಯಲ್ಲಿರುತ್ತದೆ. ಮದುವೆ ಕಾರ್ಯಕ್ರಮಗಳಲ್ಲಿ 200 ಜನರು ಸೇರಲು ಮಾತ್ರ ಅವಕಾಶ ನೀಡಲಾಗಿದ್ದು, ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದೆ.
ಮಹಾರಾಷ್ಟ್ರದಲ್ಲೂ ರಾತ್ರಿ 9ರಿಂದ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ಜಾರಿಯಲ್ಲಿರಲಿದ್ದು, ರಾತ್ರಿ ವೇಳೆ 5ಕ್ಕಿಂತಲೂ ಹೆಚ್ಚಿನ ಜನರು ಗುಂಪುಗಳಾಗಿ ಹೋಗುವುದರ ಮೇಲೆ ನಿಷೇಧ ಹೇರಿದೆ. ಒಳಾಂಗಣ ಜಿಮ್, ಸ್ಪಾ, ಹೋಟೆಲ್, ಥಿಯೇಟರ್ ಮತ್ತು ಸಿನಿಮಾ ಹಾಲ್ಗಳಲ್ಲಿ ಶೇ. 50ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಇದರ ಜೊತೆಗೆ ದುಬೈನಿಂದ ಬರುವ ಎಲ್ಲರಿಗೂ ಏಳು ದಿನಗಳ ಕಾಲ ಕ್ವಾರಂಟೈನ್ ಕಡ್ಡಾಯಗೊಳಿಸಲಾಗಿದೆ.