ಶ್ರೀನಗರ (ಜಮ್ಮು-ಕಾಶ್ಮೀರ): ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಕುಲ್ಗಾಮ್, ಬಾರಾಮುಲ್ಲಾ, ಅನಂತನಾಗ್ ಸೇರಿದಂತೆ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ.
ಮೂಲಗಳ ಪ್ರಕಾರ, ಎನ್ಐಎ ತಂಡಗಳು ಶ್ರೀನಗರದ ಹೊರವಲಯದಲ್ಲಿರುವ ಲಸ್ಜನ್ ನಿವಾಸಿ ಮೊಹಮ್ಮದ್ ಶಫಿ ವಾನಿ ಎಂಬುವರ ಮನೆಯ ಮೇಲೆ ದಾಳಿ ನಡೆಸಿದ್ದು, ಶಫಿ ಮತ್ತು ಅವರ ಮಗ ರಾಯೀಸ್ ಅಹ್ಮದ್ ವಾನಿಯ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ 60-70 ಪಾಕ್ ಉಗ್ರರು ಸಕ್ರಿಯ: ಲೆ.ಜನರಲ್ ಡಿ.ಪಿ.ಪಾಂಡೆ
ಕುಲ್ಗಾಮ್ ಜಿಲ್ಲೆಯ ಲಾರ್ಮ್ ಗಂಜಿಪೋರಾದ ವಸೀಮ್ ಅಹ್ಮದ್ ದಾರ್, ಅನಂತನಾಗ್ ಜಿಲ್ಲೆಯ ಬಾಮ್ನೂ, ಬಾರಾಮುಲ್ಲಾ ಜಿಲ್ಲೆಯ ಗುಲಾಂ ಮೊಹಿಯುದ್ದೀನ್ ವಾನಿ ಎಂಬುವರ ನಿವಾಸದ ಮೇಲೂ ಎನ್ಐಎ ತಲಾಶ್ ನಡೆಸಿದೆ.
ದಾಳಿಗಳ ಬಗ್ಗೆ ಎನ್ಐಎ ಹಾಗೂ ಪೊಲೀಸರು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ ಶೋಧ ಕಾರ್ಯ ಮುಂದುವರೆದಿವೆ ಎಂದು ಮೂಲಗಳು ತಿಳಿಸಿವೆ.