ಪುಲ್ವಾಮ (ಜಮ್ಮು ಮತ್ತು ಕಾಶ್ಮೀರ): ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಇಂದು ಬೆಳಗ್ಗೆ ಪುಲ್ವಾಮದ ಉಗರಗುಂಡ ಮತ್ತು ಸೇತರ್ಗುಂಡ ಎಂಬ ಎರಡು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಸಂಪರ್ಕ ಮತ್ತು ಧನಸಹಾಯ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.
-
#WATCH | Jammu and Kashmir: NIA raids underway at various places in Pulwama district in connection with terror links and terror funding case.
— ANI (@ANI) August 4, 2023 " class="align-text-top noRightClick twitterSection" data="
More details are awaited. pic.twitter.com/gYVXjYwA9s
">#WATCH | Jammu and Kashmir: NIA raids underway at various places in Pulwama district in connection with terror links and terror funding case.
— ANI (@ANI) August 4, 2023
More details are awaited. pic.twitter.com/gYVXjYwA9s#WATCH | Jammu and Kashmir: NIA raids underway at various places in Pulwama district in connection with terror links and terror funding case.
— ANI (@ANI) August 4, 2023
More details are awaited. pic.twitter.com/gYVXjYwA9s
ಮೊದಲಿಗೆ ಉಗರಗುಂಡ ಪ್ರದೇಶದ ಅಲಿ ಮೊಹ್ಮಮದ್ ಎಂಬುವವರ ಮನೆ ಮೇಲೆ ದಾಳಿ ನಡೆಸಿ, ಮೊಬೈಲ್ ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಬಳಿಕ ಸಿತಾರಗುಂಡದ ಸೋಹೈಲ್ ಅಶ್ರಫ್ ಎಂಬುವವರ ಮನೆ ಮೇಲೂ ತನಿಖಾ ಸಂಸ್ಥೆ ದಾಳಿ ನಡೆಸಿ ಪರಿಶೀಲಿಸಿರುವುದಾಗಿ ವರದಿಯಾಗಿದೆ. ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿಗಳೊಂದಿಗೆ ಎನ್‌ಐಎ ಸಿಬ್ಬಂದಿ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 1 ರಂದು ಎನ್ಐಎ ಈ ಪ್ರದೇಶಗಳಲ್ಲಿ ದಾಳಿ ನಡೆಸಿತ್ತು. ಇದಕ್ಕೂ ಮುನ್ನ ಜೂನ್‌ನಲ್ಲಿ, ಭಯೋತ್ಪಾದನೆ ಸಂಬಂಧಿತ ಪ್ರಕರಣದ ತನಿಖೆಯ ಭಾಗವಾಗಿ ಎನ್ಐಎ ಜಮ್ಮು ಮತ್ತು ಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ದಾಳಿ ನಡೆಸಿತ್ತು.
ಹೈದರಾಬಾದ್‌ನಲ್ಲಿ ಹಿಜ್ಬ್ ಉತ್ ತಹ್ರೀರ್ ಪ್ರಕರಣದ ಆರೋಪಿ ಬಂಧನ: ಭೋಪಾಲ್ - ಹೈದರಾಬಾದ್‌ನಲ್ಲಿ ಬೇಸ್ (ಮಾಡ್ಯೂಲ್) ಆಗಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆ ಹಿಜ್ಬ್ ಉತ್ ತಹ್ರೀರ್ (ಹಟ್) ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮೊಹಮ್ಮದ್ ಸಲ್ಮಾನ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಬಂಧಿಸಿತ್ತು. ರಾಜೇಂದ್ರನಗರದಲ್ಲಿ ಆರೋಪಿಯನ್ನು ಬಂಧಿಸಿದ್ದ ಎನ್‌ಐಎ ಅಧಿಕಾರಿಗಳು, ಆತನ ಎರಡು ನಿವಾಸಗಳಲ್ಲಿ ಶೋಧಕಾರ್ಯ ನಡೆಸಿ, ಡಿಜಿಟಲ್ ಸಾಧನಗಳಾದ ಹಾರ್ಡ್ ಡಿಸ್ಕ್, ಪೆನ್ ಡ್ರೈವ್ ಮತ್ತು ಎಸ್‌ಡಿ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದರು.
ಸಲ್ಮಾನ್ ಹಟ್ ಸಂಘಟನೆಯ ಪ್ರಮುಖ ಸದಸ್ಯ ಎಂದು NIA ಪತ್ತೆ ಮಾಡಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವ ಸಲೀಂ ಎಂಬಾತನಿಂದ ಮಾಹಿತಿ ಸಂಗ್ರಹಿಸಿ ಸೆರೆ ಹಿಡಿದಿದ್ದರು. ಕಳೆದ ವರ್ಷ ಮೇ9 ರಂದು ಹಟ್ ಸಂಘಟನೆಯ ಭಯೋತ್ಪಾದಕ ಚಟುವಟಿಕೆಗಳನ್ನು ಭೋಪಾಲ್ ಪೊಲೀಸರು ಪತ್ತೆ ಹಚ್ಚಿದ್ದರು. ಮೇ 24 ರಂದು ಭೋಪಾಲ್, ಛಿಂದ್ವಾರಾ ಮತ್ತು ಹೈದರಾಬಾದ್‌ನಲ್ಲಿ ಏಕಕಾಲದಲ್ಲಿ ದಾಳಿ ಮಾಡಲಾಗಿತ್ತು. ಈ ವೇಳೆ, 16 ಜನರನ್ನು ಬಂಧಿಸಲಾಗಿತ್ತು. ಆರೋಪಿಗಳಿಂದ ವಶಪಡಿಸಿಕೊಂಡ ಮೊಬೈಲ್‌ಗಳನ್ನು ಪರಿಶೀಲಿಸಿದಾಗ ಹಲವಾರು ಸಂಗತಿಗಳು ಬೆಳಕಿಗೆ ಬಂದಿದ್ದವು.
ಟೈಲರ್, ಆಟೋ ಚಾಲಕರು, ಜಿಮ್ ತರಬೇತುದಾರರು, ಕಂಪ್ಯೂಟರ್ ಆಪರೇಟರ್‌ಗಳಾಗಿ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವಾಗ ಗುಪ್ತ ಸಭೆಗಳ ಮೂಲಕ ಭಯೋತ್ಪಾದಕ ದಾಳಿ ನಡೆಸಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: Fake NIA officer: ಗುಜರಾತ್‌ನಲ್ಲಿ ಎನ್‌ಐಎ ಅಧಿಕಾರಿಯಂತೆ ಸೋಗು ಹಾಕಿದ್ದ ವ್ಯಕ್ತಿ ಪೊಲೀಸ್ ಬಲೆಗೆ