ETV Bharat / bharat

ಐಎಸ್‌ ಸಂಪರ್ಕ: ಬೆಂಗಳೂರು, ಮಂಗಳೂರು, ಕಾಶ್ಮೀರದ 10ಕ್ಕೂ ಹೆಚ್ಚು ಶಂಕಿತರ ಮೇಲೆ ಎನ್‌ಐಎ ನಿಗಾ - NIA puts at least a dozen under scanner over IS links in Kashmir Mangaluru & Bengaluru

ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ ಗಂಭೀರ ಆರೋಪದಲ್ಲಿ ಬೆಂಗಳೂರು, ಮಂಗಳೂರು ಹಾಗೂ ಕಾಶ್ಮೀರದಲ್ಲಿ ಕೆಲವರ ಮೇಲೆ ಎನ್‌ಐಎ ಹದ್ದಿನ ಕಣ್ಣಿಟ್ಟಿದೆ ಎಂದು ಎನ್‌ಐಎ ಹಿರಿಯ ಅಧಿಕಾರಿಯೊಬ್ಬರು ಈಟಿವಿ ಭಾರತ್‌ ತಿಳಿಸಿದ್ದಾರೆ.

NIA puts at least a dozen under scanner over IS links in Kashmir, Mangaluru & Bengaluru
ಐಎಸ್‌ ಜೊತೆ ಸಂಪರ್ಕ ಆರೋಪ; ಬೆಂಗಳೂರು, ಮಂಗಳೂರು, ಕಾಶ್ಮೀರದಲ್ಲಿ 10ಕ್ಕೂ ಅಧಿಕ ಮಂದಿ ಮೇಲೆ ಎನ್‌ಐಎ ನಿಗಾ
author img

By

Published : Jan 4, 2022, 8:26 PM IST

ನವದೆಹಲಿ: ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ (ಐಎಸ್)ನೊಂದಿಗೆ ಸಂಪರ್ಕ ಹೊಂದಿರುವ ಗಂಭೀರ ಆರೋಪದಡಿ ದೇಶದ ಮೂರು ನಗರಗಳಲ್ಲಿ 10ಕ್ಕೂ ಹೆಚ್ಚು ಶಂಕಿತರ ಮೇಲೆ ರಾಷ್ಟ್ರೀಯ ತನಿಖಾ ದಳ ನಿಗಾ ವಹಿಸಿದೆ. ಈ ಮೂರು ನಗರಗಳ ಪೈಕಿ ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಕರಾವಳಿ ನಗರ ಮಂಗಳೂರು ಸೇರಿದೆ.

ಈ ಕುರಿತು ದೆಹಲಿಯಲ್ಲಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಎನ್‌ಐಎ ಹಿರಿಯ ಅಧಿಕಾರಿ, ಈ ಶಂಕಿತರೆಲ್ಲಾ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಲು ಹಣ ಸಂಗ್ರಹಿಸುವುದರ ಜೊತೆಗೆ, ಅಮಾಯಕ ಯುವಕರನ್ನು ಉಗ್ರ ಸಂಘಟನೆಗೆ ನೇಮಿಸಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ.

ಬೆಂಗಳೂರು, ಮಂಗಳೂರು ಹಾಗೂ ಕಾಶ್ಮೀರದಲ್ಲಿ ಕೆಲವರು ಇಸ್ಲಾಮಿಕ್ ಸ್ಟೇಟ್ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದಾರೆ. ಈ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಎನ್‌ಐಎ ಈ 3 ನಗರಗಳ ಐದು ಸ್ಥಳಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿ, ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಲ್ಲಿ 7 ಮಂದಿಯನ್ನು ಬಂಧಿಸಿತ್ತು.

ಈ ಬಂಧಿತರ ಪೈಕಿ ಇಬ್ಬರು ಮಹಿಳೆಯರು (ಮಿಝಾ ಸಿದ್ದಿಕ್, ಶೆಫಾ ಹಾರಿಸ್) ಸೇರಿದ್ದಾರೆ. ಟೆಲಿಗ್ರಾಮ್, ಇನ್‌ಸ್ಟಾಗ್ರಾಮ್ ಹಾಗೂ ಹೂಪ್ ಆ್ಯಪ್‌ಗಳ ಮೂಲಕ ಇವರು ಐಎಸ್ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರೇ? ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಎನ್‌ಐಎ ಅಧಿಕಾರಿ ತಿಳಿಸಿದ್ದಾರೆ.

ಎನ್‌ಐಎ ಹಾಗೂ ಕರ್ನಾಟಕ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಿನ್ನೆಯಷ್ಟೇ ಐಎಸ್‌ನೊಂದಿಗೆ ಸಂಪರ್ಕ ಹೊಂದಿದ್ದ ಶಂಕೆಯಲ್ಲಿ ಮಂಗಳೂರಿನಲ್ಲಿ ದೀಪ್ತಿ ಮಾರ್ಲಾ ಅಲಿಯಾಸ್ ಮರಿಯಂ ಎಂಬುವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: ಮಾಜಿ ಶಾಸಕ ಬಿ.ಎಂ.ಇದಿನಬ್ಬ ಪುತ್ರನ ಮನೆ ಮೇಲೆ NIA ದಾಳಿ; ಮೊಮ್ಮಗನ ಪತ್ನಿ ದೀಪ್ತಿ ಮರಿಯಂ ಬಂಧನ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.