ETV Bharat / bharat

ಕೇರಳದ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ : ಆರೋಪಿ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಿದ ಎನ್​ಐಎ - ರಾಷ್ಟ್ರೀಯ ತನಿಖಾ ದಳ

ಕೇರಳ ಕೋಯಿಕ್ಕೋಡ್​ನಲ್ಲಿ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್​ಐಎ ಅಧಿಕಾರಿಗಳು ಆರೋಪಿ ವಿರುದ್ಧ ದೋಷಾರೋಪಪಟ್ಟಿಯನ್ನು ಸಲ್ಲಿಸಿದ್ದಾರೆ. ಆರೋಪಿ ಒಬ್ಬನೇ ಕೃತ್ಯ ಎಸಗಿರುವುದಾಗಿ ಅಧಿಕಾರಿಗಳು ಆರೋಪಪಟ್ಟಿಯಲ್ಲಿ ತಿಳಿಸಿದ್ದಾರೆ.

Etv Bharat
Etv Bharat
author img

By ETV Bharat Karnataka Team

Published : Sep 30, 2023, 8:35 PM IST

ಕೊಚ್ಚಿ (ಕೇರಳ) : ಕೇರಳದ ಕೋಯಿಕ್ಕೋಡ್​ ಎಲತ್ತೂರ್​ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ದೋಷಾರೋಪಪಟ್ಟಿಯನ್ನು ಸಲ್ಲಿಸಿದೆ. ಕೊಚ್ಚಿಯ ಎನ್​ಐಎ ನ್ಯಾಯಾಲಯಕ್ಕೆ ಅಧಿಕಾರಿಗಳು ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣ ಪ್ರಮುಖ ಆರೋಪಿ ದೆಹಲಿ ಮೂಲಕ ಶಾರುಖ್​ ಸೈಫಿ ಎಂಬಾತ ಏಕಾಂಗಿಯಾಗಿ ಕೃತ್ಯ ಎಸಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಏಪ್ರಿಲ್​ 02ರಂದು ಆರೋಪಿ ಶಾರುಖ್​ ಸೈಫಿ, ಆಲಪ್ಪುಳ - ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್​ಪ್ರೆಸ್​​ ರೈಲಿನಲ್ಲಿ ಪ್ರಯಾಣಿಕನೊಬ್ಬನ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದನು. ಘಟನೆಯಲ್ಲಿ ಮೂವರು ಮೃತಪಟ್ಟು, 9 ಮಂದಿಗೆ ಸುಟ್ಟಗಾಯಗಳಾಗಿತ್ತು. ಅಂದು ರಾತ್ರಿ 9.45 ಸುಮಾರಿಗೆ ರೈಲು ಕೋಯಿಕ್ಕೋಡ್​ ನಗರ ದಾಟಿ ಇಲ್ಲಿನ ಕೊರಪುಳ ಸೇತುವೆ ಸಂಚರಿಸುವ ಮಧ್ಯೆ ಆರೋಪಿ ಕೃತ್ಯ ಎಸಗಿದ್ದನು. ಬಳಿಕ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಶಾರುಖ್ ಸೈಫಿಯನ್ನು ಕೇಂದ್ರ ಗುಪ್ತಚರ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಬಂಧಿಸಿದ್ದರು.

ಆರೋಪಿಯು ಆನ್​ಲೈನ್​ನಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಆಕರ್ಷಿತನಾಗಿ ಕೃತ್ಯ ಎಸಗಿದ್ದಾನೆ. ಜಿಹಾದಿ ಚಟುವಟಿಕೆಯ ಭಾಗವಾಗಿ ಆರೋಪಿಯು ಯೋಜನೆ ರೂಪಿಸಿ ರೈಲಿಗೆ ಬೆಂಕಿ ಹಚ್ಚಿದ್ದಾನೆ. ಅಪರಾಧದಿಂದ ಗುರುತಿಸಿಕೊಳ್ಳದಿರಲು ಆರೋಪಿಯು ಕೇರಳವನ್ನು ಆಯ್ಕೆ ಮಾಡಿದ್ದಾನೆ ಎಂದು ಅಧಿಕಾರಿಗಳು ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : ಕೇರಳದ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿ ಯೂಟ್ಯೂಬರ್​ ಪೆಟ್ರೋಲ್​ ಖರೀದಿಸಿದ್ದು ಎಲ್ಲಿ ಗೊತ್ತಾ?

ಕೃತ್ಯ ಎಸಗಿದ ಬಳಿಕ ಆರೋಪಿಯು ದೆಹಲಿಗೆ ತೆರಳಿ ಸಾಮಾನ್ಯನಂತೆ ಜೀವನ ನಡೆಸಲು ಯೋಜನೆ ರೂಪಿಸಿದ್ದ. ಈ ಬಗ್ಗೆ ಆರೋಪಿಯ ಹೇಳಿಕೆ ಮತ್ತು ದೂರವಾಣಿ ಕರೆಗಳಿಂದ ಕಲೆ ಹಾಕಿದ ಮಾಹಿತಿಯಿಂದ ತಿಳಿದುಬಂದಿದೆ ಎಂದು ಎನ್​ಐಎ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗಿದೆ.

ಇದಕ್ಕೂ ಮೊದಲು, ಈ ಪ್ರಕರಣದ ತನಿಖೆಯನ್ನು ಕೇರಳದ ಕ್ರೈಂ ಬ್ರಾಂಚ್​ ಪೊಲೀಸರು ನಡೆಸುತ್ತಿದ್ದರು. ತನಿಖೆಯಲ್ಲಿ ಕೃತ್ಯದ ಹಿಂದೆ ಉಗ್ರರ ನಂಟು ಇರುವುದು ಪತ್ತೆಯಾಗಿತ್ತು. ಬಳಿಕ ಯುಎಪಿಎ ಆರೋಪ ಕೇಳಿಬಂದ ಹಿನ್ನೆಲೆ ಎನ್​ಐಎ ಏಪ್ರಿಲ್​ 18ರಂದು ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು.

ಘಟನೆ ಹಿಂದೆ ಇನ್ನಷ್ಟು ಮಂದಿ ಶಂಕಿತರು ಇರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಅಲ್ಲದೇ ಕೇರಳವನ್ನು ಗುರಿಯಾಗಿಸಲು ಆರೋಪಿ ಸಂಚು ರೂಪಿಸಿದ್ದನು. ಹಾಗಾಗಿ ಘಟನೆ ಹಿಂದೆ ಸ್ಥಳೀಯರ ಕೈವಾಡ ಇರಬಹುದೆಂದು ಅಂದಾಜಿಸಲಾಗಿತ್ತು. ಇದೀಗ ಎನ್​ಐಎ, ಆರೋಪಿ ಭಯೋತ್ಪಾದನಾ ಕೃತ್ಯಗಳಿಗೆ ಆಕರ್ಷಿತನಾಗಿ ಒಬ್ಬನೇ ಕೃತ್ಯ ಎಸಗಿರುವುದಾಗಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್​ನಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ : ಎನ್​ಐಎ ಕಾರ್ಯಾಚರಣೆ.. ಐವರು ಖಲಿಸ್ತಾನಿ ಉಗ್ರರ ಸುಳಿವು ನೀಡಿದವರಿಗೆ ನಗದು ಬಹುಮಾನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.