ETV Bharat / bharat

NIA: ಬಿಹಾರ ಕೊಲೆ ಪ್ರಕರಣದ ಮೂವರ ವಿರುದ್ಧ 2ನೇ ಪೂರಕ ಆರೋಪಪಟ್ಟಿ ಸಲ್ಲಿಸಿದ ಎನ್‌ಐಎ

ಕಳೆದ ಆರು ವರ್ಷಗಳಿಂದ ಜೈಲಿನಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಜಿಲ್ಲೆಯ ಬಂಧಿತ ಪ್ರತ್ಯೇಕತಾವಾದಿ ಹುರಿಯತ್ ನಾಯಕ ಅಯಾಜ್ ಅಕ್ಬರ್ ಆಸ್ತಿಯನ್ನು ಎನ್​ಐಎ ಜಪ್ತಿ ಮಾಡಿದೆ.

NIA filed 2nd supplementary charge sheet
ಮೂವರ ವಿರುದ್ಧ 2ನೇ ಪೂರಕ ಆರೋಪಪಟ್ಟಿ ಸಲ್ಲಿಸಿದ ಎನ್‌ಐಎ
author img

By

Published : Jun 13, 2023, 3:45 PM IST

ನವದೆಹಲಿ: ನಿಷೇಧಿತ ಸಂಘಟನೆಯಾದ ಸಿಪಿಐ (ಮಾವೋವಾದಿ) ಅಥವಾ ನಕ್ಸಲರು ನರೇಶ್ ಸಿಂಗ್ ಭೋಕ್ತರನ್ನು ಅಪಹರಿಸಿ ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಎರಡನೇ ಪೂರಕ ಆರೋಪಪಟ್ಟಿ ಸಲ್ಲಿಸಿದೆ.

ಬಿಹಾರದ ನಿವಾಸಿಗಳಾದ ವಿನಯ್ ಯಾದವ್, ನವಲ್ ಜಿ ಮತ್ತು ಜಿಲೇಬಿಯಾ ಯಾದವ್ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ 1967 ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಬಿಹಾರದ ಪಾಟ್ನಾದ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಜಾರ್ಖಂಡ್ ಮತ್ತು ಬಿಹಾರದಲ್ಲಿ ವ್ಯಾಪಕ ಶೋಧ ನಡೆಸಿದೆ.

ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು ಒಂಬತ್ತು ಜನರನ್ನು ಬಂಧಿಸಲಾಗಿದ್ದು, ಮೂಲತಃ ಬಿಹಾರ ಪೊಲೀಸರು ನವೆಂಬರ್ 3, 2018 ರಂದು ಪ್ರಕರಣ ದಾಖಲಿಸಿದ್ದರು ಮತ್ತು ಕಳೆದ ವರ್ಷ ಜೂನ್ 24 ರಂದು ಎನ್ಐಎ ತಂಡ ಒವರನ್ನು ವಶಕ್ಕೆ ಪಡೆದುಕೊಂಡಿತ್ತು. ಎನ್‌ಐಎ ಈ ವರ್ಷದ ಫೆಬ್ರವರಿ 25 ರಂದು ಒಬ್ಬ ಆರೋಪಿ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಸಿತ್ತು.

ಜನರನ್ನು ಭಯಭೀತಗೊಳಿಸುವ ಉದ್ದೇಶದಿಂದ ಮಾಡಿದ್ದ ನರೇಶ್ ಸಿಂಗ್ ಭೋಕ್ತಾ ಅವರ ಕ್ರೂರ ಹತ್ಯೆಗೆ ಕಾರಣವಾದ ಪಿತೂರಿಯಲ್ಲಿ ಉನ್ನತ ಸಿಪಿಐ (ಮಾವೋವಾದಿ) ಕಮಾಂಡರ್‌ಗಳ ಕೈವಾಡ ಇರುವುದು ಈ ಪ್ರಕರಣದ ಕುರಿತು ಎನ್​ಐಎ ನಡೆಸಿದ ತನಿಖೆಯಿಂದ ಬಹಿರಂಗವಾಗಿದೆ. ನರೇಶ್ ಸಿಂಗ್ ಭೋಕ್ತಾ ಹತ್ಯೆಗೆ ಬಳಸಲಾದ ಶಸ್ತ್ರಾಸ್ತ್ರಗಳು ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ತಿಳಿಸಿದೆ.

ಇಂದು ಚಾರ್ಜ್‌ಶೀಟ್ ಮಾಡಿರುವ ಮೂವರೂ ನಿಷೇಧಿತ ಸಿಪಿಐ (ಮಾವೋವಾದಿ) ಅಥವಾ ನಕ್ಸಲ್ ಸಂಘಟನೆಯ ಸದಸ್ಯರು ಎಂದು ಕಂಡುಬಂದಿದ್ದು, ಅವರನ್ನು ಕಳೆದ ವರ್ಷ ಡಿಸೆಂಬರ್ 15 ರಂದು ಬಂಧಿಸಲಾಗಿತ್ತು. ಆರೋಪಿ ಪ್ರಮೋದ್ ಮಿಶ್ರಾ ಅಂಜನ್ವಾ ಅರಣ್ಯದಲ್ಲಿ ಕರೆದಿದ್ದ ಸಿಪಿಐ (ಮಾವೋವಾದಿ) ವಲಯದ ಕಮಾಂಡರ್‌ಗಳು ಮತ್ತು ಉನ್ನತ ನಾಯಕರ ಸಭೆಯಲ್ಲಿ ಭಾಗವಹಿಸಿದ್ದನು. ಈ ಸಭೆಯಲ್ಲಿ ಭೋಕ್ತಾ ಸೇರಿದಂತೆ ಶಂಕಿತ ಪೊಲೀಸ್ ಮಾಹಿತಿದಾರರನ್ನು ನಿರ್ಮೂಲನೆ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.

ಈ ಮೂವರು ಇತರ ಸಹ-ಆರೋಪಿ ವ್ಯಕ್ತಿಗಳೊಂದಿಗೆ ನರೇಶ್ ಸಿಂಗ್ ಭೋಕ್ತಾ ಅವರ ಅಪಹರಣ ಮತ್ತು ಜನ್ ಅದಾಲತ್ (ಸಾರ್ವಜನಿಕ ಸಭೆ ಎಂದು ಕರೆಯಲ್ಪಡುವ) ನಡೆಸುವಲ್ಲಿ ಭಾಗಿಯಾಗಿದ್ದರು. ಮತ್ತು ಅಲ್ಲಿ ಭೋಕ್ತವನ್ನು ಹತ್ಯೆ ಮಾಡುವ ಕುರಿತು ನಿರ್ಧರಿಸಲಾಗಿತ್ತು.

ಅಯಾಜ್ ಅಕ್ಬರ್ ಆಸ್ತಿ ಜಪ್ತಿ ಮಾಡಿದ ಎನ್​ಐಎ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಜಿಲ್ಲೆಯ ಬಂಧಿತ ಪ್ರತ್ಯೇಕತಾವಾದಿ ಹುರಿಯತ್ ನಾಯಕ ಅಯಾಜ್ ಅಕ್ಬರ್ ಆಸ್ತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಜಪ್ತಿ ಮಾಡಿದೆ. ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್‌ನ ಆದೇಶದ ಮೇರೆಗೆ ಏಜೆನ್ಸಿಯ ಅಧಿಕಾರಿಗಳು ಜಿಲ್ಲೆಯ ಶಾಲ್ತೆಂಗ್ ಪ್ರದೇಶದಲ್ಲಿರುವ ಅಕ್ಬರ್‌ನ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಕಳೆದ ಆರು ವರ್ಷಗಳಿಂದ ಅಕ್ಬರ್ ಜೈಲಿನಲ್ಲಿದ್ದು, ಸೋಮವಾರ ಎನ್‌ಐಎ ಕುಪ್ವಾರ ಜಿಲ್ಲೆಯ ಜಹೂರ್ ಅಹ್ಮದ್ ವತಾಲಿ ಅವರ ಆಸ್ತಿಯನ್ನು ಜಪ್ತಿ ಮಾಡಿದೆ. ಆಸ್ತಿಯ ಮೇಲೆ ಜನಸಾಮಾನ್ಯರಿಗೆ ತಿಳಿಯಲು ನೋಟಿಸ್ ಅನ್ನು ಲಗತ್ತಿಸಲಾಗಿದೆ. ಗಿದೆ" ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಐಎಸ್​ಡಿ-ಎನ್​ಐಎ ಭರ್ಜರಿ ಕಾರ್ಯಾಚರಣೆ.. ಅಲ್ ಖೈದಾ ಜೊತೆ ನಂಟು, ಬೆಂಗಳೂರಿನಲ್ಲಿ ಶಂಕಿತ ಅರೆಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.