ನವದೆಹಲಿ: ಭಯೋತ್ಪಾದನೆಗೆ ಹಣಕಾಸು ಪೂರೈಕೆ ಆರೋಪ ಪ್ರಕರಣದಲ್ಲಿ ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸೀನ್ ಮಲಿಕ್ನನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯವು ದೋಷಿ ಎಂದು ಪ್ರಕಟಿಸಿದೆ.
2017ರಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳ ಆರೋಪಗಳ ಸಂಬಂಧ ಯಾಸೀನ್ ಮಲಿಕ್ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದರು. ಇಂದು ನ್ಯಾಯಾಲಯದ ವಿಚಾರಣೆ ವೇಳೆ ಯಾಸೀನ್ ಮಲಿಕ್ ದೋಷಿ ಎಂದು ಸಾಬೀತಾದ ನಂತರ ಪೊಲೀಸರು ಆತನನ್ನು ಕೋರ್ಟ್ನಿಂದ ಕರೆತಂದರು.
ಅಲ್ಲದೇ, ಆರ್ಥಿಕ ಸ್ಥಿತಿ-ಗತಿ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಅಪರಾಧಿ ಯಾಸೀನ್ಗೆ ಕೋರ್ಟ್ ಸೂಚಿಸಿದೆ. ಇತ್ತ, ಎನ್ಐಎ ಕೂಡ ಈತನ ಆರ್ಥಿಕತೆ ಬಗ್ಗೆ ವರದಿ ನೀಡುವಂತೆ ತಿಳಿಸಿದೆ. ಈ ಪ್ರಕರಣದಲ್ಲಿ ಶಿಕ್ಷೆ ಪ್ರಮಾಣದ ಬಗ್ಗೆ ಮೇ 25ರಂದು ವಾದ-ಪ್ರತಿವಾದ ನಡೆಯಲಿದೆ.
ಇದನ್ನೂ ಓದಿ: ಭದ್ರತಾ ಪರಿಶೀಲನೆ ವೇಳೆ ಆಡಿಟೋರಿಯಂನಿಂದ ಬಿದ್ದ ಗುಪ್ತಚರ ಇಲಾಖೆ ಅಧಿಕಾರಿ ಸಾವು: ಸಿಸಿಟಿವಿ ದೃಶ್ಯ