ETV Bharat / bharat

ಉಗ್ರ ಸಂಘಟನೆ ಜೊತೆ ಶಿಕ್ಷಣ ಸಂಸ್ಥೆ​ ನಂಟು ಶಂಕೆ.. ಕಾಶ್ಮೀರದಲ್ಲಿ ಎನ್​ಐಎ ದಾಳಿ

ಉಗ್ರ ಸಂಘಟನೆ ಜಮಾತ್​ ಎ ಇಸ್ಲಾಂ ಜೊತೆ ಕಾಶ್ಮೀರದ ಅಲ್ ಹುದಾ ಎಜುಕೇಷನಲ್ ಟ್ರಸ್ಟ್‌ ನಂಟು ಹೊಂದಿರುವ ಆರೋಪದ ಮೇಲೆ ಎನ್​ಐಎ ದಾಳಿ ಮಾಡಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

nia-conducts-raids
ಕಾಶ್ಮೀರದಲ್ಲಿ ಎನ್​ಐಎ ದಾಳಿ
author img

By

Published : Oct 11, 2022, 10:55 AM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಲ್ಲದೇ, ಉಗ್ರ ಕೃತ್ಯಕ್ಕೆ ನಿಧಿ ಸಂಗ್ರಹಣ ಮಾಡುತ್ತಿದೆ ಎಂಬ ಆರೋಪದ ಮೇಲೆ ಜಮ್ಮು ಕಾಶ್ಮೀರದ ಅಲ್ ಹುದಾ ಎಜುಕೇಷನಲ್ ಟ್ರಸ್ಟ್‌ಗೆ ಸೇರಿದ ಹಲವು ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ದಳ(ಎನ್​ಐಎ) ದಾಳಿ ಮಾಡಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ಜಮ್ಮು ಮತ್ತು ಕಾಶ್ಮೀರದ ರಾಜೌರಿ, ಪೂಂಚ್, ಜಮ್ಮು, ಶ್ರೀನಗರ, ಪುಲ್ವಾಮಾ, ಬುದ್ಗಾಮ್, ಶೋಪಿಯಾನ್ ಮತ್ತು ಬಂಡಿಪೋರಾ ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿರುವ ಟ್ರಸ್ಟ್​ನ ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿರುವ ಅಲ್ ಹುದಾ ಎಜುಕೇಷನಲ್ ಟ್ರಸ್ಟ್‌ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿದ್ದು, ಅದರ ಅನುಮಾನಾಸ್ಪದ ಚಟುವಟಿಕೆಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಯುಎಪಿಎ ಕಾಯ್ದೆಯಡಿ ಉಗ್ರ ಸಂಘಟನೆ ಎಂದು ಘೋಷಿಸಲಾದ ಜಮಾತ್-ಎ-ಇಸ್ಲಾಮಿ ಜೊತೆ ಅಲ್ ಹುದಾ ಎಜುಕೇಷನಲ್ ಟ್ರಸ್ಟ್‌ ಚಟುವಟಿಗಳನ್ನು ಹೊಂದಿದೆ ಎಂಬ ಆಪಾದನೆ ಮೇಲೆ ಎನ್​ಐಎ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಸ್ಥಳೀಯ ಪೊಲೀಸರು ಮತ್ತು ಸಿಆರ್‌ಪಿಎಫ್ ಜೊತೆಗೂಡಿ ಎನ್​ಐಎ ಕಾರ್ಯಾಚರಣೆ ನಡೆಸಿದೆ.

ಓದಿ: ಸರ್ಕಾರಿ ವಸತಿ ಶಾಲೆಗಳಲ್ಲಿ ಆರ್​ಎಸ್​ಎಸ್​ ತಾಲೀಮು ಶಿಬಿರ.. ಎಸ್​ಎಫ್​ಐ ವಿರೋಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.