ETV Bharat / bharat

ದೇಶಾದ್ಯಂತ ಎನ್‌ಐಎ ದಾಳಿ: 100ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರ ಬಂಧನ - ED Raid on PFI

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮತ್ತು ಎಸ್​ಡಿಪಿಐ ಕಚೇರಿಗಳು ಹಾಗೂ ನಾಯಕರ ಮನೆಗಳ ಮೇಲೆ ಎನ್‌ಐಎ ಅಧಿಕಾರಿಗಳು ಕಳೆದ ಮಧ್ಯರಾತ್ರಿಯಿಂದಲೇ ದಾಳಿ ನಡೆಸುತ್ತಿದ್ದು, 100 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

NIA raids in several places
NIA raids in several places
author img

By

Published : Sep 22, 2022, 10:30 AM IST

ದೆಹಲಿ/ಹೈದರಾಬಾದ್​: ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ದೇಶಾದ್ಯಂತ ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್​ಐ) ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಅಧಿಕಾರಿಗಳು ದಾಳಿ ನಡೆಸುತ್ತಿದ್ದು ಈಗಾಗಲೇ 100ಕ್ಕೂ ಹೆಚ್ಚು ಜನರನ್ನು ಬಂಧಿಸಿರುವ ಮಾಹಿತಿ ಲಭ್ಯವಾಗಿದೆ. ಕೇರಳ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ಸೇರಿದಂತೆ ದೇಶದ ವಿವಿಧೆಡೆ ಇರುವ ಪಿಎಫ್​​ಐ ಕಚೇರಿಗಳ ಮೇಲೆ ಅಧಿಕಾರಿಗಳು ದಾಖಲೆಗಳ ಶೋಧ ನಡೆಸುತ್ತಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಒಟ್ಟು 11 ರಾಜ್ಯಗಳ ಪಿಎಫ್​ಐ ಕಚೇರಿ ಹಾಗೂ ಸದಸ್ಯರ ನಿವಾಸಗಳ ಮೇಲೆ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದು, 106 ಪಿಎಫ್​ಐ ಕಾರ್ಯಕರ್ತರನ್ನು ಅರೆಸ್ಟ್‌ ಮಾಡಲಾಗಿದೆ.

  • NIA sealed the Telangana PFI head office in Chandrayangutta, Hyderabad in connection with a case registered earlier by NIA. NIA, ED, Paramilitary along with local police sealed the PFI office. pic.twitter.com/yQzVyJWfDy

    — ANI (@ANI) September 22, 2022 " class="align-text-top noRightClick twitterSection" data=" ">

ಎಲ್ಲೆಲ್ಲಿ ಎಷ್ಟು ಪಿಎಫ್‌ಐ ಕಾರ್ಯಕರ್ತರ ಬಂಧನ?: ಕೇರಳದಲ್ಲಿ 22, ಕರ್ನಾಟಕ 20, ಮಹಾರಾಷ್ಟ್ರ 20, ಆಂಧ್ರಪ್ರದೇಶ 5, ಅಸ್ಸೋಂ 9, ದೆಹಲಿ 3, ಮಧ್ಯಪ್ರದೇಶ 4, ಪುದುಚೇರಿ 3, ತಮಿಳುನಾಡು 10, ಉತ್ತರ ಪ್ರದೇಶ 8 ಹಾಗೂ ರಾಜಸ್ಥಾನದಲ್ಲಿ ಇಬ್ಬರು ಪಿಎಫ್‌ಐ ಕಾರ್ಯಕರ್ತರು ಎನ್​ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ಇದನ್ನೂ ಓದಿ: ದೇಶಾದ್ಯಂತ ಮಧ್ಯರಾತ್ರಿಯಿಂದಲೇ PFI ಕಚೇರಿಗಳ ಮೇಲೆ ಎನ್​ಐಎ, ಇಡಿ ದಿಢೀರ್‌ ದಾಳಿ

ಪಿಎಫ್ಐ ಮೇಲಿನ ಗುರುತರ ಆರೋಪಗಳೇನು?: ಭಯೋತ್ಪಾದನೆಗೆ ನಿಧಿ ಸಂಗ್ರಹ, ಉಗ್ರರಿಗೆ ತರಬೇತಿ ಶಿಬಿರ ಆಯೋಜನೆ, ನಿಷೇಧಿತ ಸಂಘಟನೆಗಳಿಗೆ ಸೇರ್ಪಡೆಯಾಗಲು ಜನರಿಗೆ ಪ್ರಚೋದನೆ ನೀಡುತ್ತಿರುವ ಮಾಹಿತಿ ಆಧಾರದ ಮೇಲೆ ಈ ದಾಳಿ ನಡೆಸಲಾಗಿದೆ. ಮುಖ್ಯವಾಗಿ ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ ರಾಷ್ಟ್ರೀಯ, ರಾಜ್ಯ ಹಾಗೂ ಸ್ಥಳೀಯ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ.

ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ, 2020ರ ದೆಹಲಿ ಗಲಭೆ, ಹತ್ರಾಸ್​​ನಲ್ಲಿ ಸಾಮೂಹಿಕ ಅತ್ಯಾಚಾರದ ಸಂಚು ರೂಪಿಸಿದ್ದ ಆರೋಪಿಗಳಿಗೆ ಹಣಕಾಸಿನ ನೆರವು ನೀಡಿರುವ ಬಗ್ಗೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದೆ. ಈ ದಾಳಿಯಲ್ಲಿ ಇಡಿ ಕೂಡಾ ಭಾಗಿಯಾಗಿದೆ.

2006ರಲ್ಲಿ ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ ರಚನೆಯಾಗಿದೆ. ದೆಹಲಿಯಲ್ಲಿ ಸಂಘಟನೆ ಪ್ರಧಾನ ಕಚೇರಿ ಹೊಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.