ಶ್ರೀನಗರ (ಜಮ್ಮು-ಕಾಶ್ಮೀರ): ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿದ ಪ್ರಕರಣ ಸಂಬಂಧ ಪ್ರಮುಖ ಆರೋಪಿಯೊಬ್ಬನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಪುಲ್ವಾಮಾದ ಪತ್ರಿಗಮ್ ನಿವಾಸಿ ಮುಷ್ತಾಕ್ ಅಹ್ಮದ್ ಮಿರ್ ಅವರ ಪುತ್ರ ಅಬಿದ್ ಅಹ್ಮದ್ ಮಿರ್ ಎಂಬಾತನೇ ಬಂಧಿತ ಆರೋಪಿ.
ಜಮ್ಮುವಿನ ಸುಂಜ್ವಾನ್ ಪ್ರದೇಶದಲ್ಲಿ ಏಪ್ರಿಲ್ 22ರಂದು ಉಗ್ರರು ಅಡಗಿರುವ ಮಾಹಿತಿ ಮೇರೆಗೆ ಸಿಐಎಸ್ಎಫ್ ಯೋಧರು ಮತ್ತು ಪೊಲೀಸರು ಜಂಟಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು. ಇದರಲ್ಲಿ ಎಎಸ್ಐ ಹುತಾತ್ಮರಾಗಿದ್ದರು.
ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದವು. ಈ ಪ್ರಕರಣದ ಸಂಬಂಧ ಏ.26ರಂದು ಎನ್ಐಎ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿತ್ತು. ಬಂಧಿತ ಆರೋಪಿಯು ನಿಷೇಧಿತ ಜೈಶ್-ಎ-ಮುಹಮ್ಮದ್ ಸಂಘಟನೆಯ ನಂಟು ಹೊಂದಿದ್ದ. ಪಾಕಿಸ್ತಾನಿ ನಿರ್ವಹಕರ ಸಂಪರ್ಕದಲ್ಲಿದ್ದ ಮತ್ತು ಇದೇ ಪ್ರಕರಣದಲ್ಲಿ ಈಗಾಗಲೇ ಬಂಧಿತನಾದ ಬಿಲಾಲ್ ಅಹ್ಮದ್ ವಾಗೇಯ ನಿಕಟವರ್ತಿಯಾಗಿದ್ದೇನೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಯಾಸೀನ್ ಮನೆ ಬಳಿ ದೇಶದ್ರೋಹದ ಘೋಷಣೆ, ಕಲ್ಲು ತೂರಾಟ.. 10 ಜನರ ಬಂಧನ