ನವದೆಹಲಿ : ಕೇಂದ್ರ ಸಚಿವ ನಿತಿನ್ ಗಡ್ಕರಿ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್ಎಚ್ಎಐ) ಹೆದ್ದಾರಿಗಳಲ್ಲಿ ವಿದ್ಯುತ್ ವಾಹನಗಳಿಗೆ ಚಾರ್ಜಿಂಗ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿದರು.
ಕೋವಿಡ್-19 ಸಾಂಕ್ರಾಮಿಕದ ಪರಿಣಾಮದಿಂದಾಗಿ ವಾಹನ ಉದ್ಯಮವು ಸವಾಲಿನ ಹಂತವನ್ನು ಎದುರಿಸುತ್ತಿದೆ. ಅದು ಈಗ ಚೇತರಿಕೆಯ ಕ್ರಮದಲ್ಲಿರುವುದಕ್ಕೆ ಸಂತೋಷವಾಗಿದೆ. NHAI ಕೂಡ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹೆದ್ದಾರಿಗಳಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ತಿಳಿಸಿದರು.
ಭಾರತದ ಆಟೋ ಕ್ಷೇತ್ರವು ಒಟ್ಟಾರೆ ರಾಷ್ಟ್ರದ ಜಿಡಿಪಿಗೆ ಶೇ.7.1 ಮತ್ತು ಉತ್ಪಾದನಾ ಜಿಡಿಪಿಗೆ ಶೇ. 49ರಷ್ಟು ಕೊಡುಗೆ ನೀಡುತ್ತದೆ. ವಾರ್ಷಿಕ ₹7.5 ಲಕ್ಷ ಕೋಟಿ ವಹಿವಾಟು ಮತ್ತು ರೂ. 3.5 ಲಕ್ಷ ಕೋಟಿಗಳ ರಫ್ತು ಎಂದು ಗಡ್ಕರಿ ಗಮನ ಸೆಳೆದರು.
ಹಲವಾರು ಜಾಗತಿಕ ಬ್ರ್ಯಾಂಡ್‌ಗಳು ಭಾರತವನ್ನು ಪ್ರವೇಶಿಸುತ್ತಿರುವುದಕ್ಕೆ ನಾನು ಸಂತೋಷಪಡುತ್ತೇನೆ. ಜೊತೆಗೆ ಹಲವಾರು ಸ್ಥಳೀಯ ಉದ್ಯಮಿಗಳು ವಿದ್ಯುತ್ ವಾಹನಗಳನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲು ದೊಡ್ಡ ಸೌಲಭ್ಯಗಳನ್ನು ಸ್ಥಾಪಿಸುತ್ತಿದ್ದಾರೆ ಎಂದು ಹೇಳಿದರು.
ಒಂದು ವರದಿಯ ಪ್ರಕಾರ, ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟವು 2021ರ ಜುಲೈನಲ್ಲಿ 13,345 ಯುನಿಟ್‌ಗಳಷ್ಟಿದೆ. ಇದು ಅತ್ಯಂತ ಪ್ರೋತ್ಸಾಹದಾಯಕವಾಗಿದೆ ಎಂದು ತಿಳಿಸಿದರು.
ಹೊಸ ಸ್ಟಾರ್ಟ್‌ಅಪ್‌ಗಳಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ದೇಶೀಯ ಮಾರುಕಟ್ಟೆಯಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೀರ್ಘಾವಧಿಯ, ಕಡಿಮೆ ವೆಚ್ಚದ, ಹೆಚ್ಚಿನ ದಕ್ಷತೆಯ ಬ್ಯಾಟರಿಗಳು ಮತ್ತು ಇವಿ ಘಟಕಗಳನ್ನು ಅಭಿವೃದ್ಧಿಪಡಿಸುವ ಏಕಕಾಲದಲ್ಲಿ ಸಂಶೋಧನೆಯು ಸಹ ಇಂದಿನ ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು. ಅಸ್ತಿತ್ವದಲ್ಲಿರುವ ಡೀಸೆಲ್ ಬಸ್‌ಗಳಿಂದ ಮಾಲಿನ್ಯವನ್ನು ಕಡಿಮೆ ಮಾಡಲು ಒಂದು ಪರಿಹಾರವೆಂದರೆ ರೆಟ್ರೋಫಿಟ್ ತಂತ್ರಜ್ಞಾನಗಳ ಬಳಕೆ ಎಂದು ಅಭಿಪ್ರಾಯಪಟ್ಟರು.
ಓದಿ: ಬ್ಯಾಂಕಿಂಗ್ ವಲಯದಲ್ಲಿ ಇಂದಿನಿಂದ ಮಹತ್ವದ ಬದಲಾವಣೆ: ಡೆಬಿಟ್, ಕ್ರೆಡಿಟ್ ಕಾರ್ಡ್ ಮೇಲೂ ನಿರ್ಬಂಧ