ನವದೆಹಲಿ : ದೇಶದ ಹಲವು ನಗರದಲ್ಲಿ ಕೊರೊನಾ ಲಸಿಕೆ ಕೊರತೆ ಉಂಟಾಗುತ್ತಿರುವ ಬೆನ್ನಲ್ಲೆ ನೀತಿ ಆಯೋಗ ಸಿಹಿ ಸುದ್ದಿ ನೀಡಿದೆ. ಆಗಸ್ಟ್ ವೇಳೆಗೆ ಭಾರತಕ್ಕೆ ಮತ್ತೊಂದು ಸ್ಥಳೀಯ ಲಸಿಕೆ ಬರಲಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿನೋದ್ ಕೆ ಪಾಲ್ ಹೇಳಿದ್ದಾರೆ.
‘ಬಯೋಲಾಜಿಕಲ್ ಇ’ ಸಂಸ್ಥೆ ಬಹುಕಾಲದಿಂದ ಲಸಿಕೆ ತಯಾರಿಕೆಯಲ್ಲಿ ತೊಡಗಿದೆ. ಅದರಲ್ಲಿ ಆರಂಭಿಕ ಪರೀಕ್ಷಾ ಫಲಿತಾಂಶವು ಉತ್ತೇಜನಕಾರಿಯಾಗಿದೆ. ಅಲ್ಲದೆ ಆಗಸ್ಟ್ ಅಂತ್ಯದ ವೇಳೆಗೆ ಲಸಿಕೆ ಭಾರತದಲ್ಲಿ ಲಭ್ಯವಾಗಲಿದೆ ಎಂದಿದ್ದಾರೆ.