ETV Bharat / bharat

ಹೆಣ್ಣಾಗಿ ಹುಟ್ಟಿದ್ದೇ ತಪ್ಪಾಯ್ತು! ವರದಕ್ಷಿಣೆಗೋಸ್ಕರ ನವ ವಿವಾಹಿತೆ ಕೊಲೆ; ಗಂಗಾ ನದಿಯಲ್ಲಿ ಮೃತದೇಹ ಪತ್ತೆ - ವರದಕ್ಷಿಣೆಗೋಸ್ಕರ ನವವಿವಾಹಿತೆ ಕೊಲೆ

ವರದಕ್ಷಿಣೆಗೋಸ್ಕರ ನವ ವಿವಾಹಿತೆ ಕೊಲೆ ಮಾಡಿರುವ ಘಟನೆ ಬಿಹಾರದ ವೈಶಾಲಿಯಲ್ಲಿ ನಡೆದಿದೆ. ಕಟ್ಟಿಕೊಂಡ ಗಂಡನೇ ಈ ಕೆಲಸ ಮಾಡಿದ್ದಾನೆಂದು ತಿಳಿದು ಬಂದಿದೆ.

Bihar women murder
Bihar women murder
author img

By

Published : Jul 7, 2022, 7:25 PM IST

ವೈಶಾಲಿ(ಬಿಹಾರ): ಎರಡು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವವಿವಾಹಿತೆ ಕೊಲೆ ಮಾಡಲಾಗಿದೆ. ವರದಕ್ಷಿಣೆಗೋಸ್ಕರ ಈ ಹತ್ಯೆ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಬಿಹಾರದ ವೈಶಾಲಿಯಲ್ಲಿ ಈ ಘಟನೆ ನಡೆದಿದ್ದು, ನವವಿವಾಹಿತೆ ಮೃತದೇಹ ಗಂಗಾ ನದಿಯಲ್ಲಿ ಗೋಣಿ ಚೀಲದಲ್ಲಿ ಪತ್ತೆಯಾಗಿದೆ.

ಏನಿದು ಪ್ರಕರಣ?: ರಾಹುಲ್ ಕುಮಾರ್ ಹಾಗೂ ಪ್ರೀತಿ ದೇವಿ 2022ರ ಮೇ 13ರಂದು ಮದುವೆ ಮಾಡಿಕೊಂಡಿದ್ದರು. ಮದುವೆ ಬಳಿಕ ಚಿನ್ನದ ಸರ ಹಾಗೂ 50 ಸಾವಿರ ರೂಪಾಯಿ ನೀಡುವಂತೆ ಹೆಂಡತಿಗೆ ನಿತ್ಯ ಪತಿ ರಾಹುಲ್ ಕುಮಾರ್ ಪೀಡಿಸುತ್ತಿದ್ದನು. ಇದರ ಬೆನ್ನಲ್ಲೇ ಅವರ ಕೊಲೆ ಮಾಡಿದ್ದು, ಮೃತದೇಹವನ್ನ ಗೋಣಿಚೀಲದಲ್ಲಿ ತುಂಬಿ ಗಂಗಾ ನದಿಯಲ್ಲಿ ಎಸೆದಿದ್ದಾನೆ.

ಗುರುವಾರ ಬೆಳಗ್ಗೆ ಗಂಗಾನದಿ ದಡದಲ್ಲಿ ಕೆಲವರು ದನ ಮೇಯಿಸುತ್ತಿದ್ದಾಗ ಮಹಿಳೆಯ ಮೃತದೇಹ ಕಂಡಿದೆ. ಇದರ ಬೆನ್ನಲ್ಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ: ಪ್ರಾಣ ರಕ್ಷಕರಾದ ಪೊಲೀಸ್ ಸಿಬ್ಬಂದಿ .. ಗಂಗಾ ನದಿಯಲ್ಲಿ ಮುಳುಗುತ್ತಿದ್ದ ಇಬ್ಬರ ರಕ್ಷಣೆ: VIDEO

ಘಟನಾ ಸ್ಥಳಕ್ಕಾಗಮಿಸಿರುವ ಪೊಲೀಸರು ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗೋಸ್ಕರ ಹಾಜಿಪುರ ಸದರ್​ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೃತ ಪ್ರೀತಿ ದೇವಿ ಪೋಷಕರು ಗಂಡನ ಮನೆಯವರ ಮೇಲೆ ಗಂಭೀರ ಆರೋಪ ಮಾಡಿದ್ದು, ವರದಕ್ಷಿಣೆಗೋಸ್ಕರ ಮಗಳ ಕೊಲೆ ಮಾಡಿದ್ದಾರೆಂದು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೇಸ್​​​ ದಾಖಲು ಮಾಡಿಕೊಂಡಿದ್ದು, ಕೆಲವರನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.