ETV Bharat / bharat

ಉತ್ತರಪ್ರದೇಶ ಹೆದ್ದಾರಿಯಲ್ಲಿ ಸುಟ್ಟ ಗಾಯಗಳಿಂದ ಪತ್ತೆಯಾದ ನವವಿವಾಹಿತೆ.. ತನಿಖೆ ಚುರುಕು! - ಉತ್ತರ ಪ್ರದೇಶದಲ್ಲಿ ನಡೆದಿದೆ

ಮದುವೆಯಾದ ಮೂರೇ ದಿನಕ್ಕೆ ನವವಿವಾಹಿತೆ ಆ್ಯಸಿಡ್​ ದಾಳಿಗೆ ಒಳಗಾಗಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

Newly-married woman found with burn injuries on highway in UP

author img

By

Published : Apr 26, 2023, 11:08 AM IST

ಬರೇಲಿ( ಉತ್ತರಪ್ರದೇಶ): ಮದುವೆಯಾಗಿ ಮೂರೇ ದಿನಕ್ಕೆ ನವವಧುವಿನ ಮೇಲೆ ಆ್ಯಸಿಡ್​ ದಾಳಿ ನಡೆದಿರುವ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆ್ಯಸಿಡ್​ ದಾಳಿಗೆ ಒಳಗಾಗಿ ಶೇ 40ರಷ್ಟು ಸುಟ್ಟ ಗಾಯಗಳಿಗೆ ಒಳಗಾದ ಸಂತ್ರಸ್ತೆ ದೆಹಲಿ ಮತ್ತು ಲಖನೌ ಹೆದ್ದಾರಿಯಲ್ಲಿ ಬೆತ್ತಲಾಗಿ ಬಿದ್ದಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

25 ವರ್ಷದ ಮಹಿಳೆ ಸ್ಥಿತಿ ಸದ್ಯ ಚಿಂತಾಜನಕವಾಗಿದ್ದು, ಚಿಂತಾಜನಕವಾಗಿದ್ದ ಆಕೆಯನ್ನು ವೈದ್ಯರು ಬದುಕುಳಿಸುವ ಪ್ರಯತ್ನ ನಡೆಸಿದ್ದಾರೆ. ವರದಿ ಅನುಸಾರ ಮಹಿಳೆ ಏಪ್ರಿಲ್​ 22ರಂದು ಮದುವೆಯಾಗಿದ್ದರಷ್ಟೇ. ಅವರು ಮರುದಿನ ತನ್ನ ತವರಿಗೆ ಮರಳಿದ್ದರು ಎನ್ನಲಾಗಿದೆ. ಮಂಗಳವಾರ ಫಂತೆಗಂಜ್​ ಪಶ್ಚಿಮ ಪ್ರದೇಶದಲ್ಲಿ ನವ ವಿವಾಹಿತೆ ಪೊದೆಗಳ ಮಧ್ಯೆ ಬೆತ್ತಲಾಗಿ, ಸುಟ್ಟ ಗಾಯಗಳಿಂದ ಕಂಡು ಬಂದಿದ್ದಾರೆ ಎಂದು ವರದಿಯಾಗಿದೆ. ಗಂಭೀರ ಸಮಸ್ಯೆಯಲ್ಲಿದ್ದ ಮಹಿಳೆ ಹೇಗೋ ತನ್ನ ಕುರಿತು ಪೊಲೀಸರಿಗೆ ಮಾಹಿತಿ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಇದರಿಂದಾಗಿ ನವ ವಿವಾಹಿತೆಯ ತಂದೆಯನ್ನು ಪೊಲೀಸರು ಠಾಣೆಗೆ ಕರೆಯಿಸಿ, ಮಗಳ ಬಗ್ಗೆ ವಿಚಾರಿಸಿದ್ದಾರೆ. ಈ ಬಗ್ಗೆ ಕೂಲಂಕಷ ವಿಚಾರಣೆ ನಡೆಸಿದ್ದಾರೆ.

ಇದನ್ನು ಓದಿ: ಹಿಟ್ ಅಂಡ್​​ ಡ್ರ್ಯಾಗ್ ಪ್ರಕರಣ : ಬ್ಯಾನೆಟ್​ಗೆ ಸಿಲುಕಿದ ರಿಕ್ಷಾ ಚಾಲಕ 200 ಮೀಟರ್​ ವರೆಗೆ ಎಳೆದೊಯ್ದ ಕಾರ್​​

ಈ ಕುರಿತು ಮಾತನಾಡಿರುವ ವೈದ್ಯರಾದ ಡಾ. ಜೆಪಿ ಮೌರ್ಯ, ರಾಸಾಯನಿಕ ಸುಟ್ಟ ಗಾಯಗಳಿಗೆ ಒಳಗಾಗಿದ್ದ ನವ ವಿವಾಹಿತೆಯನ್ನು ಪೊಲೀಸರು ಕರೆತಂದಿದ್ದಾರೆ. ದಾಳಿಗೆ ಒಳಗಾಗಿರುವ ನವ ವಿವಾಹಿತೆಯ ಮುಖ, ಕುತ್ತಿಗೆ, ತೋಳು, ಎದೆಯೆಲ್ಲಾ ಆ್ಯಸಿಡ್​ ದಾಳಿಗೆ ತುತ್ತಾಗಿದೆ. ಆಕೆಯ ಕುತ್ತಿಗೆಯಲ್ಲಿ ಕಲೆಗಳಿದ್ದು, ಮಹಿಳೆಯು ತಮ್ಮ ಜೀವ ಉಳಿಸಿಕೊಳ್ಳಲು ಹೋರಾಟ ಮಾಡಿರುವ ಶಂಕೆ ಆಕೆಯ ಮೇಲಿನ ಗಾಯ ಹಾಗೂ ಅವಳು ಹೇಗೋ ತಪ್ಪಿಸಿಕೊಂಡು ಪೊಲೀಸ್​ ಠಾಣೆಗೆ ಬಂದಿರುವುದರಿಂದ ಗೊತ್ತಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಹೀಗೆ ತೀವ್ರ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯನ್ನು ಸ್ತ್ರೀ ರೋಗ ತಜ್ಞರು, ಇಎನ್​ಟಿ ಮತ್ತು ಸುಟ್ಟ ಗಾಯ ತಜ್ಞರು ಪರೀಕ್ಷೆಗೆ ಒಳಪಡಿಸಿದ್ದಾರೆ. ಆಕೆಯನ್ನು ಹೆಚ್ಚಿನ ಚಿಕಿತ್ಸೆಗೆ ಲಕ್ನೋ ಮೆಡಿಕಲ್​ ಸೆಂಟರ್​ಗೆ ಕೂಡಾ ಕಳುಹಿಸಲಾಗಿದೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಪ್ರದೇಶ ಪೊಲೀಸರು, ಪ್ರಕರಣದ ತನಿಖೆಗೆ ಹಿರಿಯ ಪೊಲೀಸ್​​ ಸೂಪರಿಟೆಂಟ್​ ಪ್ರಭಾಕರ್​​ ಚೌಧರಿ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದಾರೆ. ಘಟನೆ ಸಂಬಂಧ ಯುವತಿಯ ಗಂಡನನ್ನು ವಿಚಾರಿಸಿ, ಸಮಗ್ರ ಮಾಹಿತಿಯನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಆದರೆ, ಈ ಬಗ್ಗೆ ಆತನಿಗೆ ಯಾವುದೇ ಮಾಹಿತಿ ಇಲ್ಲ. ಯುವತಿಯ ತಂದೆ ಈ ಪ್ರಕರಣ ಸಂಬಂಧ ಲಿಖಿತ ದೂರು ಸಲ್ಲಿಸಿದ್ದಾರೆ. ಅನುಮಾನಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಹಿಟ್ ಅಂಡ್​​ ಡ್ರ್ಯಾಗ್ ಪ್ರಕರಣ : ಬ್ಯಾನೆಟ್​ಗೆ ಸಿಲುಕಿದ ರಿಕ್ಷಾ ಚಾಲಕ 200 ಮೀಟರ್​ ವರೆಗೆ ಎಳೆದೊಯ್ದ ಕಾರ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.