ETV Bharat / bharat

ಪಂಜಾಬ್‌ ಒಳಬೇಗುದಿ: ನಾಳೆ ಒಂದೇ ವೇದಿಕೆಯಲ್ಲಿ ಸಿಧು, ಸಿಎಂ ಅಮರೀಂದರ್‌ ಕಾಣಿಸಿಕೊಳ್ತಾರಾ?

ಕ್ರಿಕೆಟರ್‌ ಕಂ ರಾಜಕಾರಣಿ ನವಜೋತ್‌ ಸಿಂಗ್‌ ಸಿಧು ಅವರನ್ನು ಪಂಜಾಬ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷರನ್ನಾಗಿ ಮಾಡಿದ ಬಳಿಕವೂ ಅಲ್ಲಿನ ಸಿಎಂ ನಡುವಿನ ಮುಸುಕಿನ ಗುದ್ದಾಟಕ್ಕೆ ಇತಿಶ್ರೀ ಹಾಡಿರುವಂತೆ ಕಾಣ್ತಿಲ್ಲ. ಸರ್ಕಾರವನ್ನು ಟೀಕಿಸಿದ್ದಾರೆ ಎಂಬ ಕಾರಣಕ್ಕೆ ಸಿಧು ವಿರುದ್ಧ ಮುನಿಸಿಕೊಂಡಿದ್ದರೂ ಸಿಎಂ ಅಮರೀಂದರ್‌ ನಾಳೆ ನಡೆಯಲಿರುವ ಪಿಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ.

Newly appointed punjab congress chief navjot singh sidhu writes the second letter to cm amarinder singh
ನಾಳೆ ಒಂದೇ ವೇದಿಕೆಯಲ್ಲಿ ಸಿಧು, ಸಿಎಂ ಅಮರೀಂದರ್‌ ಕಾಣಿಸಿಕೊಳ್ತಾರಾ?
author img

By

Published : Jul 22, 2021, 9:42 PM IST

ಚಂಢೀಗಢ: ಪಂಜಾಬ್ ರಾಜ್ಯ ಕಾಂಗ್ರೆಸ್‌ನಲ್ಲಿನ ಭಿನ್ನಾಭಿಪ್ರಾಯಗಳು ಅಂತ್ಯವಾದಂತೆ ಕಾಣ್ತಿದೆ. ಆ ಪಕ್ಷದ ಪ್ರಮುಖ ನಾಯಕರು ಒಗ್ಗೂಡಿದ್ದಾರೆಂದು ಹೇಳಲಾಗ್ತಿದೆ. ನಿನ್ನೆ ತನಕ ಎಡಪಂಥೀಯರಾಗಿದ್ದ ಸಿಎಂ ಅಮರಿಂದರ್ ಸಿಂಗ್ ಮತ್ತು ಹೊಸ ಪಿಪಿಸಿಸಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ನಾಳೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪಿಸಿಸಿ ನಾಯಕನಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿ ಸಿಎಂ ಅಮರೀಂದರ್‌ ಸಿಂಗ್ ಅವರಿಗೆ ನೂತನ ಅಧ್ಯಕ್ಷ ಸಿಧು ಎರಡನೇ ಪತ್ರ ಬರೆದಿದ್ದಾರೆ. ಈ ಪತ್ರಕ್ಕೆ 56 ಶಾಸಕರು ಸಹಿ ಹಾಕಿದ್ದಾರೆ. ಇದಾದ ಸ್ವಲ್ಪ ಸಮಯದ ನಂತರ ಸಿಎಂ ಅಮರೀಂದರ್‌ ಅವರು ಪಕ್ಷದ ಶಾಸಕರು ಮತ್ತು ಸಂಸದರು ಸೇರಿದಂತೆ ಪಕ್ಷದ ಹಿರಿಯ ಮುಖಂಡರನ್ನು ತಮ್ಮ ಮನೆಗೆ ಆಹ್ವಾನಿಸಿದ್ದಾರೆ. ಅಲ್ಲಿಂದ ಶುಕ್ರವಾರ ಬೆಳಿಗ್ಗೆ ಎಲ್ಲರೂ ಒಟ್ಟಿಗೆ ಪಂಜಾಬ್ ಕಾಂಗ್ರೆಸ್ ಭವನಕ್ಕೆ ಹೋಗುವಂತೆ ತಿಳಿಸಲಾಗಿದೆ. ಸಿಎಂ ಅಮರೀಂದರ್ ಸಿಂಗ್ ಅವರು ಕಾಂಗ್ರೆಸ್ ಶಾಸಕರು, ಸಂಸದರು ಮತ್ತು ಪಕ್ಷದ ಹಿರಿಯ ಮುಖಂಡರನ್ನು ಭೋಜನಕ್ಕೆ ಆಹ್ವಾನಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಊಟದ ನಂತರ ಪಂಜಾಬ್ ಕಾಂಗ್ರೆಸ್ ಭವನಕ್ಕೆ ತೆರಳಲಿದ್ದಾರೆ ಎಂದು ಸಿಎಂ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: ‘ಸಾರ್ವಜನಿಕವಾಗಿ ಕ್ಷಮೆ ಕೇಳುವವರೆಗೂ ಸಿಧು ಭೇಟಿ ಸಾಧ್ಯವಿಲ್ಲ’: ಕ್ಯಾಪ್ಟನ್​​ ಪಟ್ಟು

ತೀವ್ರ ಬದಲಾವಣೆ

ಪಿಪಿಸಿಸಿ ನೂತನ ಅಧ್ಯಕ್ಷರಾಗಿ ನವಜೋತ್‌ ಸಿಂಗ್‌ ಸಿಧು ನೇಮಕವಾದ ನಂತರ ಇಬ್ಬರೂ ನಾಯಕರು ಭೇಟಿಯಾಗಿರಲಿಲ್ಲ. ಸಿಎಂ, ಸಿದ್ಧುಗೆ ಕನಿಷ್ಠ ಅಭಿನಂದನೆಯನ್ನೂ ಸಲ್ಲಿಸಲಿರಲಿಲ್ಲ. ರಾಜ್ಯ ಸರ್ಕಾರವನ್ನು ಟೀಕಿಸಿ ಟ್ವೀಟ್ ಮಾಡಿದ್ದ ಬಗ್ಗೆ ಸಿಎಂ ಕೋಪಗೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಈ ವಿಷಯದಲ್ಲಿ ಸರ್ಕಾರಕ್ಕೆ ಕ್ಷಮೆಯಾಚಿಸಿದರೂ ಸಿಧು ಅವರನ್ನು ಭೇಟಿ ಮಾಡದಿರಲು ಅಮರೀಂದರ್‌ ನಿರ್ಧರಿಸಿದ್ದರು. ಬುಧವಾರವೂ ಇಬ್ಬರ ನಾಯಕರ ಬೆಂಬಳಿತ ಪ್ರತಿನಿಧಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.