ETV Bharat / bharat

ಹೊಲಿಗೆ ಯಂತ್ರ ಉದ್ಯಮದತ್ತ ಮುಖ ಮಾಡದ ಹೊಸ ತಲೆಮಾರಿನ ಉದ್ಯಮಿಗಳು: ಬಹುತೇಕ ಕಾರ್ಖಾನೆಗಳು ಬಂದ್.. - ಅಳಿವಿನಂಚಿಗೆ ಸರಿದ ಹೊಲಿಗೆ ಯಂತ್ರ ಉದ್ಯಮ

ಪಂಜಾಬ್​ನ ಲುಧಿಯಾನದಲ್ಲಿ ಹಿಂದೆ ಹೊಲಿಗೆ ಯಂತ್ರಗಳು ಮತ್ತು ಅದರ ಭಾಗಗಳನ್ನು ತಯಾರಿಸುವ 1,300ಕ್ಕೂ ಹೆಚ್ಚು ಕಾರ್ಖಾನೆಗಳನ್ನು ಇದ್ದವು. ಆದರೆ, ಇಂದು ಅಂತಹ ಸುಮಾರು 250 ಕಾರ್ಖಾನೆಗಳು ಮಾತ್ರ ಉಳಿದಿವೆ. ಇತ್ತೀಚೀನ ಚರ್ಷಗಳಲ್ಲಿ ಚೀನಾದಿಂದ ಹೊಲಿಗೆ ಯಂತ್ರದ ಆಮದವಾಗುತ್ತಿರುವುದರಿಂದ ಲೂಧಿಯಾನದ ಹೊಲಿಗೆ ಯಂತ್ರ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ.

Ludhiana Sewing Machine Industry
ಲುಧಿಯಾನ ಹೊಲಿಗೆ ಯಂತ್ರ ಉದ್ಯಮ
author img

By

Published : Jul 1, 2023, 5:42 PM IST

ಲೂಧಿಯಾನ (ಪಂಜಾಬ್​): ಹೊಲಿಗೆ ಯಂತ್ರ ಉದ್ಯಮವು ಮುಚ್ಚುವ ಅಂಚಿನಲ್ಲಿದೆ. ಒಂದು ಕಾಲದಲ್ಲಿ ಹೊಲಿಗೆ ಯಂತ್ರ ಉದ್ಯಮವು ಲೂಧಿಯಾನದಲ್ಲಿ ಉಜ್ವಲವಾದ ಹೆಸರು ಪಡೆದಿತ್ತು. ಇಂದು ಕಪ್ಪು ಹೊಲಿಕೆ ಯಂತ್ರಗಳು, ಬಿಳಿ ಯಂತ್ರಗಳಾಗಿ ಬದಲಾಗಿವೆ. ಅನೇಕ ಕುಟುಂಬಗಳು ಈ ಕೆಲಸವನ್ನೂ ಬಿಟ್ಟಿವೆ. ಹೊಸ ತಲೆಮಾರಿನವರು ಕೂಡ ಹೊಲಿಗೆ ಯಂತ್ರ ಉದ್ಯಮವನ್ನು ತೊರೆದಿದ್ದಾರೆ.

ಲೂಧಿಯಾನದಲ್ಲಿ ಹೊಲಿಗೆ ಯಂತ್ರ ಉದ್ಯಮವು ಸ್ವಾತಂತ್ರ್ಯದ ಮೊದಲು ಪ್ರಾರಂಭವಾಯಿತು. 1942 ರೊಳಗೆ ಲುಧಿಯಾನದಲ್ಲಿ ಹೊಲಿಗೆ ಯಂತ್ರಗಳನ್ನು ತಯಾರಿಸಲು ಆರಂಭವಾಯಿತು. ಕಾಲಾನಂತರದಲ್ಲಿ, ಲುಧಿಯಾನದ ಹೊಲಿಗೆ ಯಂತ್ರ ಉದ್ಯಮವು 1990ರ ದಶಕದವರೆಗೆ ಪ್ರಗತಿ ಸಾಧಿಸಿತು. ಇದು ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಸಹ ಬೇಡಿಕೆಯಿತ್ತು. ಲುಧಿಯಾನದಲ್ಲಿ ನಿರ್ಮಿತವಾದ ಹೊಲಿಗೆ ಯಂತ್ರಗಳು ಏಷ್ಯಾದಾದ್ಯಂತ ಸರಬರಾಜು ಆಗುತ್ತಿದ್ದವು.

Ludhiana Sewing Machine Industry
ಲುಧಿಯಾನದ ಕಪ್ಪು ಹೊಲಿಗೆ ಯಂತ್ರಗಳು

ಆಗ ಇಲ್ಲಿ ಹೊಲಿಗೆ ಯಂತ್ರಗಳು ಮತ್ತು ಅದರ ಭಾಗಗಳನ್ನು ತಯಾರಿಸುವ 1,300ಕ್ಕೂ ಹೆಚ್ಚು ಕಾರ್ಖಾನೆಗಳನ್ನು ಇದ್ದವು. ಆದರೆ, ಇಂದು ಅಂತಹ ಸುಮಾರು 250 ಕಾರ್ಖಾನೆಗಳು ಮಾತ್ರ ಉಳಿದಿವೆ. ಅವು ಹೊಲಿಗೆ ಯಂತ್ರಗಳು ಅಥವಾ ಅದರ ಭಾಗಗಳನ್ನು ತಯಾರಿಸುತ್ತಿವೆ. ಕಾಲಾನಂತರ ಚೀನಾದಿಂದ ಹೊಲಿಗೆ ಯಂತ್ರದ ಆಮದವಾಗುತ್ತಿರುವುದರಿಂದ ಲೂಧಿಯಾನದ ಹೊಲಿಗೆ ಯಂತ್ರ ಉದ್ಯಮ ಕುಂಟುತ್ತಾ ಸಾಗುತ್ತಿದೆ.

ಲುಧಿಯಾನದ ಪ್ರಸಿದ್ಧ ಹೊಲಿಗೆ ಯಂತ್ರಗಳಿವು: ಜಾಮ್ಕೊ, ಸೆಕೊ, ಎಸ್‌ಕೆ ರಕ್ಸಾನಿಯಾ, ಜಿಎಸ್ ಮೆಕ್ಯಾನಿಕಲ್ ಕಾರ್ಪೊರೇಷನ್, ರಾಖೇಜಾ ಸನ್ಸ್, ಬಾರ್ನ್ ಸ್ವಿಂಗ್, ಬ್ರಾವೋ ಸ್ವಿಂಗ್ ಮೆಷಿನ್, ಆರ್‌ಎಂಐ ಮೆಷಿನ್, ಸಾಥಿ ಸ್ವಿಂಗ್ ಮೆಷಿನ್, ವಾಣಿ, ಪ್ರೆಗೊ, ರೀಜೆಂಟ್ ಸ್ವಿಂಗ್ ಮೆಷಿನ್, ಗಣೇಶ್ ಸೇರಿದಂತೆ ನೂರಾರು ಹೆಸರಿನ ಕಂಪನಿಗಳಾಗಿದ್ದವು. ಇನ್ನು ಪೈಲಟ್ ಸ್ವಿಂಗ್ ಮೆಷಿನ್, ದಿಲ್ಬರ್, ಗೋದ್ರೇಜ್, ಮ್ಯಾರಿಸನ್ ಮುಂತಾದ ಕಂಪನಿಗಳು ಕಪ್ಪು ಹೊಲಿಗೆ ಯಂತ್ರಗಳನ್ನು ತಯಾರಿಸಿದ್ದವು. ಆದರೆ, ಅನೇಕ ಕಂಪನಿಗಳು ಚೀನಾದ ಕಂಪನಿಗಳೊಂದಿಗೆ ಮೈತ್ರಿ ಮಾಡಿಕೊಂಡು ತಮ್ಮ ಬಿಳಿ ಯಂತ್ರವನ್ನು ಜೋಡಿಸಲು ಪ್ರಾರಂಭಿಸಿವೆ. ಆದರೂ ಅದರ ಭಾಗಗಳನ್ನು ಇಲ್ಲಿ ಮಾಡಲು ತುಂಬಾ ಕಷ್ಟ. ಹೆಚ್ಚಿನ ಸಮಯ ತೆಗದುಕೊಂಡು ಮೊದಲೇ ತಯಾರಿಸಲಾಗಿರುತ್ತದೆ. ಈಗ ಆ ಬಿಳಿ ಯಂತ್ರಗಳಿಗೆ ಹೆಚ್ಚು ಬೇಡಿಕೆಯಿದೆ. ಏಕೆಂದರೆ, ಅದು ಬಲವಾದ ಹಾಗೂ ವೇಗವಾಗಿರುತ್ತದೆ. ಕಪ್ಪು ಯಂತ್ರಕ್ಕಿಂತಲೂ ಉತ್ತಮವಾಗಿ ಹೊಲಿಯುತ್ತದೆ.

ಹೊಲಿಗೆ ಯಂತ್ರಗಳ ರಫ್ತು ಪ್ರಮಾಣ ಇಳಿಕೆ: ಲೂಧಿಯಾನದಲ್ಲಿ ತಯಾರಾದ ಹೊಲಿಗೆ ಯಂತ್ರಗಳ ರಫ್ತು ನಿರಂತರವಾಗಿ ಕಡಿಮೆಯಾಗುತ್ತಿದೆ. ಈ ಮೊದಲು ಲೂಧಿಯಾನದಿಂದ ತಯಾರಿಸಿದ ಯಂತ್ರಗಳು ಇಡೀ ಏಷ್ಯಾಕ್ಕೆ, ಯುರೋಪಿನ ಹಲವು ಭಾಗಗಳಿಗೆ ಸರಬರಾಜು ಮಾಡಲ್ಪಟ್ಟವು, ಆದರೆ, ಈಗ ಪೂರ್ವ ಏಷ್ಯಾಕ್ಕೆ ಮಾತ್ರ. ಇದು ಅತ್ಯಂತ ಕಡಿಮೆ ಲಾಭದಲ್ಲಿ ಮಾರಾಟ ಮಾಡಲಾಗುತ್ತದೆ. ಲೂಧಿಯಾನದ ಹೊಲಿಗೆ ಯಂತ್ರ ತಯಾರಿಕಾ ಕಾರ್ಖಾನೆಯು ಒಂದು ಯಂತ್ರದಿಂದ 60ರಿಂದ 70 ರೂ.ಗಳ ಲಾಭವಾಗುತ್ತಿದೆ.

ಇದರಿಂದಾಗಿ ಹೊಲಿಗೆ ಯಂತ್ರ ತಯಾರಕರಿಗೆ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ. ಹೊರರಾಜ್ಯಗಳಲ್ಲಿ ಮಾತ್ರವಲ್ಲದೇ ನಮ್ಮದೇ ಪಂಜಾಬ್‌ನಲ್ಲಿಯೂ ಕಪ್ಪು ಹೊಲಿಗೆ ಯಂತ್ರಕ್ಕೆ ಬೇಡಿಕೆ ತುಂಬಾ ಕಡಿಮೆಯಾಗಿದೆ. ಈ ಹಿಂದೆ ಮದುವೆಯಾದ ಹುಡುಗಿಗೆ ಕಪ್ಪು ಬಣ್ಣದ ಹೊಲಿಗೆ ಯಂತ್ರವನ್ನು ನೀಡಲಾಗುತ್ತಿತ್ತು, ಆದರೆ, ಈಗ ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಮಾತ್ರ ಈ ಯಂತ್ರವನ್ನು ಹುಡುಗಿಗೆ ನೀಡಲಾಗಿದ್ದು, ಇದರಿಂದ ಕೈಯಿಂದ ನಿರ್ವಹಿಸುವ ಯಂತ್ರದ ಬೇಡಿಕೆ ತುಂಬಾ ಕಡಿಮೆಯಾಗಿದೆ.

ಅಳಿವಿನಂಚಿಗೆ ಸರಿದ ಹೊಲಿಗೆ ಯಂತ್ರ ಉದ್ಯಮ: ಲೂಧಿಯಾನ ಹೊಲಿಗೆ ಯಂತ್ರ ಸಂಘದ ಅಧ್ಯಕ್ಷ ಜಗಬೀರ್ ಸಿಂಗ್ ಸೋಖಿ ಮಾತನಾಡಿ, ಹೊಸ ತಲೆಮಾರಿನವರು ಹೊಲಿಗೆ ಯಂತ್ರಗಳು ವ್ಯವಹಾರದಲ್ಲಿ ಆಸಕ್ತಿ ವಹಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿವೆ. ಹೊಸ ತಲೆಮಾರು ವಿದೇಶಕ್ಕೆ ತೆರಳುತ್ತಿದ್ದಾರೆ ಮತ್ತು ಈಗ ಕೆಲವು ಹಳೆಯ ಮನೆಗಳು ಮಾತ್ರ ಉಳಿದಿವೆ. ಆದರೆ, ಹೊಸ ತಲೆಮಾರಿನ ಬಹುತೇಕರು ಹೊಲಿಗೆ ಯಂತ್ರಗಳನ್ನು ವ್ಯವಹಾರವನ್ನೇ ಬಿಟ್ಟಿದ್ದಾರೆ. ಹೊಸ ತಲೆಮಾರಿನವರು ವ್ಯಾಪಾರದಲ್ಲಿ ತೊಡಗಿಸಿಕೊಳ್ಳದ ಕಾರಣ, ಇಡೀ ಹೊಲಿಗೆ ಯಂತ್ರ ಉದ್ಯಮ ಅಳಿವಿನಂಚಿಗೆ ಸರಿಯುತ್ತಿದೆ.

ಹೊಲಿಗೆ ಯಂತ್ರ ಉದ್ಯಮಕ್ಕೆ ಸರ್ಕಾರಗಳ ನಿರಾಸಕ್ತಿ: ಲೂಧಿಯಾನದಲ್ಲಿ ಕಪ್ಪು ಹೊಲಿಗೆ ಯಂತ್ರದ ವ್ಯವಹಾರ ಉತ್ತುಂಗದಲ್ಲಿದ್ದಾಗ ಕೇಂದ್ರ ಸರ್ಕಾರ ಯಂತ್ರಕ್ಕೆ ರಫ್ತು ಸುಂಕದಲ್ಲಿ ದೊಡ್ಡ ಪರಿಹಾರವನ್ನು ನೀಡಿತು. ಇದರಿಂದಾಗಿ ಉದ್ಯಮಿಗಳು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಸಾಕಷ್ಟು ಸಹಾಯ ಮಾಡಿದರು. ಆಗ ಅವರು ಯಂತ್ರಗಳನ್ನು ರಫ್ತು ಮಾಡಿದರು. ವಿದೇಶಗಳಿಗೆ ಯಂತ್ರಗಳನ್ನು ಸರಬರಾಜು ಮಾಡಲಾಗುತ್ತಿತ್ತು.

ಆದರೆ, ಚೀನಾ ಅಗ್ಗದ ತಂತ್ರಜ್ಞಾನವನ್ನು ಕಂಡುಹಿಡಿದಿದೆ. ಅವುಗಳ ಗುಣಮಟ್ಟ ಮತ್ತು ಸಮಂಜಸವಾದ ಬೆಲೆಗಳು ಗ್ರಾಹಕರನ್ನು ಚೀನಾ ಯಂತ್ರಗಳು ಆಕರ್ಷಿಸಿದವು. ಲೂಧಿಯಾನದಲ್ಲಿ ವೈಟ್‌ ಮಷಿನ್‌ ತಯಾರಾಗುತ್ತಿಲ್ಲ. ಸರ್ಕಾರ ಮಾತ್ರ ಈ ಉದ್ಯಮಕ್ಕೆ ಯಾವುದೇ ನೆರವು ನೀಡುತ್ತಿಲ್ಲ. ಹೊಲಿಗೆ ಯಂತ್ರದ ಉದ್ಯಮವನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಹಾಗಾಗಿಯೇ ಹೊಲಿಗೆ ಯಂತ್ರದ ಉದ್ಯಮವು ಈ ಸ್ಥಿತಿಗೆ ತಲುಪಿದೆ ಎನ್ನುತ್ತಾರೆ ಹೊಲಿಗೆ ಯಂತ್ರ ಉದ್ಯಮಕ್ಕೆ ಸಂಬಂಧಿಸಿದ ಉದ್ಯಮಿಗಳು.

ಇದನ್ನೂ ಓದಿ: Flying car: ವಿಶ್ವದ ಮೊದಲ ಹಾರುವ ಎಲೆಕ್ಟ್ರಿಕ್ ಕಾರಿಗೆ 2.46 ಕೋಟಿ ರೂಪಾಯಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.