ETV Bharat / bharat

NEP - ಹೊಸ ಪಠ್ಯಕ್ರಮ ಸಿದ್ಧ: ವರ್ಷಕ್ಕಿನ್ನು ಎರಡು ಮುಖ್ಯ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಂಕ ಉಳಿಸಿಕೊಳ್ಳುವ ಅವಕಾಶ

author img

By ETV Bharat Karnataka Team

Published : Aug 23, 2023, 5:30 PM IST

ಹೊಸ ಶಿಕ್ಷಣ ನೀತಿಯ ಪ್ರಕಾರ, 2024 ರ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗಿ ಹೊಸ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ. ಜೊತೆಗೆ ಮುಖ್ಯ ಪರೀಕ್ಷೆ, ಭಾಷಾ ವಿಷಯಗಳ ಆಯ್ಕೆಯನ್ನೂ ಬದಲಿಸಲಾಗಿದೆ.

ಎನ್​ಇಪಿ ಹೊಸ ಪಠ್ಯಕ್ರಮ
ಎನ್​ಇಪಿ ಹೊಸ ಪಠ್ಯಕ್ರಮ

ನವದೆಹಲಿ: ಹೊಸ ಶಿಕ್ಷಣ ನೀತಿಯ ಪಠ್ಯಕ್ರಮ ಸಿದ್ಧಪಡಿಸಲಾಗಿದ್ದು, ಕೆಲ ಮಹತ್ತರ ಬದಲಾವಣೆ ಮಾಡಲಾಗಿದೆ. ಜೊತೆಗೆ ವರ್ಷಕ್ಕೆ ಎರಡು ಬಾರಿ ಮುಖ್ಯ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಂಕಗಳನ್ನು ಉಳಿಸಿಕೊಳ್ಳುವ ಆಯ್ಕೆ ಮತ್ತು 11, 12 ನೇ ತರಗತಿಯಲ್ಲಿ ಒಂದರ ಬದಲು ಎರಡು ಭಾಷೆಗಳ ಅಧ್ಯಯನಕ್ಕೆ ಅವಕಾಶ ನೀಡಲಾಗಿದೆ. ಅದರಲ್ಲಿ ಒಂದು ಭಾರತೀಯ ಭಾಷೆಯನ್ನು ಕಡ್ಡಾಯಗೊಳಿಸಲಾಗಿದೆ.

ಈ ಬಗ್ಗೆ ಶಿಕ್ಷಣ ಸಚಿವಾಲಯ ಪ್ರಕಟಣೆ ಹೊರಡಿಸಿದ್ದು, 2024 ರ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗಿ ಹೊಸ ಪಠ್ಯ ಕ್ರಮ ಜಾರಿಯಾಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲಕವಾಗುವಂತೆ ಪಠ್ಯಕ್ರಮ ರೂಪಿಸಲಾಗಿದೆ. ಮಕ್ಕಳ ಮೇಲೆ ಪಠ್ಯಕ್ರಮದ ಒತ್ತಡ ಬೀಳದಂತೆ ವರ್ಷಕ್ಕೆ ಎರಡು ಮುಖ್ಯ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಇದು ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭ್ಯಾಸಕ್ಕೆ ಅವಕಾಶ ನೀಡಲಿದೆ ಎಂದು ಶಿಕ್ಷಣ ಸಚಿವಾಲಯ ಹೇಳಿದೆ.

ಎರಡು ಭಾಷಾ ವಿಷಯ, ಒಂದು ಭಾರತೀಯ: 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳ ಕಲಿಕೆಗೆ ಒಂದು ಭಾಷೆಯ ಬದಲಾಗಿ, ಎರಡು ಭಾಷಾ ವಿಷಯಗಳ ಆಯ್ಕೆಗೆ ಅವಕಾಶ ನೀಡಲಾಗಿದೆ. ಇದು ಭಾಷಾ ಜ್ಞಾನಕ್ಕೆ ಅವಕಾಶ ನೀಡುವುದರ ಜೊತೆಗೆ ಪರಭಾಷೆಗಳನ್ನು ತರಗತಿಯ ಮುಖಾಂತರ ಕಲಿಯಲು ಸಿಗಲಿದೆ. ಇದರಲ್ಲಿ ಮುಖ್ಯವಾಗಿ ಎರಡು ಭಾಷಾ ವಿಷಯದ ಆಯ್ಕೆ ನೀಡಲಾಗಿದ್ದರೂ, ಅದರಲ್ಲಿ ಒಂದು ಭಾರತೀಯ ಭಾಷೆಯನ್ನು ಕಡ್ಡಾಯ ಮಾಡಲಾಗಿದೆ. ಇನ್ನೊಂದು ಆಯ್ಕೆಯಾಗಿರುತ್ತದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಆಧಾರದ ಮೇಲೆ ಈ ಭಾಷಾ ವಿಷಯವನ್ನು ನೀಡಲಾಗಿದೆ.

ಸುಲಭ ಕಲಿಕೆಗೆ ಎರಡು ಪರೀಕ್ಷೆ : ಈಗಿರುವ ನಿಯಮಗಳ ಪ್ರಕಾರ ವರ್ಷಕ್ಕೆ ಒಂದು ಮುಖ್ಯ ಪರೀಕ್ಷೆಯನ್ನು ಮಾತ್ರ ನಡೆಸಲಾಗುತ್ತದೆ. ಇದು ಮಕ್ಕಳಿಗೆ ಹೆಚ್ಚಿನ ಕಲಿಕಾ ಒತ್ತಡವನ್ನು ಉಂಟು ಮಾಡಿದೆ ಎಂಬ ಆಪಾದನೆ ಕೇಳಿಬಂದಿದ್ದು, ಇದಕ್ಕೆ ಪರಿಹಾರವಾಗಿ ಹೊಸ ಪಠ್ಯ ನೀತಿಯಲ್ಲಿ ವರ್ಷಕ್ಕೆ ಎರಡು ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅವಕಾಶ ನೀಡಲಾಗಿದೆ. ಇದು ಮಕ್ಕಳ ಕಲಿಕೆಯ ಒತ್ತಡವನ್ನು ತಗ್ಗಿಸುವುದರ ಜೊತೆಗೆ ಅದರ ದಕ್ಷತೆಯನ್ನೂ ಹೆಚ್ಚಿಸುತ್ತದೆ ಎಂಬುದು ಇದರ ಹಿಂದಿನ ಉದ್ದೇಶ.

ಮುಖ್ಯ ಪರೀಕ್ಷೆಗಳನ್ನು ಸುಲಭ ಮಾಡಲು ಮತ್ತು ಮಕ್ಕಳು ಉರು ಹೊಡೆಯುವ ಬದಲಿಗೆ ವಿಷಯಗಳನ್ನೇ ಸಮರ್ಥವಾಗಿ ತಿಳಿದುಕೊಳ್ಳಲು ಎರಡು ಪರೀಕ್ಷೆಗಳು ಸಾಧನವಾಗಲಿವೆ. ಇದು ಮಕ್ಕಳು ಶೈಕ್ಷಣಿಕವಾಗಿ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ.

ವಿದ್ಯಾರ್ಥಿಗಳು ಉತ್ತಮವಾಗಿ ಅಭ್ಯಸಿಸಲು ಸಾಕಷ್ಟು ಸಮಯ ಮತ್ತು ಅವಕಾಶಗಳು ಸಿಗಲಿವೆ. ವರ್ಷಕ್ಕೆ ಕನಿಷ್ಠ ಎರಡು ಬಾರಿ ಮುಖ್ಯ ಪರೀಕ್ಷೆಗಳನ್ನು ನಡೆಸಿದಾಗ, ವಿದ್ಯಾರ್ಥಿಗಳು ಅವರು ಸಿದ್ಧವಾದ ವಿಷಯಗಳಲ್ಲಿ ಪರೀಕ್ಷೆಗೆ ಹಾಜರಾಗಬಹುದು. ಇದು ಅತ್ಯುತ್ತಮ ಸ್ಕೋರ್ ಗಳಿಸಲೂ ಅವಕಾಶ ಸಿಗುತ್ತದೆ ಎಂಬುದು ಶಿಕ್ಷಣ ಇಲಾಖೆಯ ಅಭಿಮತವಾಗಿದೆ.

11 ಮತ್ತು 12 ನೇ ತರಗತಿಗಳಲ್ಲಿನ ಭಾಷಾ ವಿಷಯಗಳ ಆಯ್ಕೆಯು ವಿಸ್ತೃತವಾಗಲಿದೆ. ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಈಗಿರುವ ನಿಯಮಿತ ಭಾಷೆಗಿಂತ ಹೆಚ್ಚಿನ ಆಯ್ಕೆ ಪಡೆಯಲಿದ್ದಾರೆ. ಜೊತೆಗೆ ಪಠ್ಯಕ್ರಮವನ್ನು ನಿಗದಿತ ಸಮಯಕ್ಕೆ 'ಪೂರ್ಣ' ಮಾಡುವ ಅನಿವಾರ್ಯತೆ ಇದರಿಂದ ತಪ್ಪಲಿದೆ. ಶಾಲಾ ಆಡಳಿತ ಮಂಡಳಿಗಳು ಮುಖ್ಯ ಪರೀಕ್ಷೆಗಳ ಜೊತೆಗೆ ಹಿಂಬಾಕಿ ಇರುವ ವಿಷಯಗಳ ಪೂರ್ಣಕ್ಕೂ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ. (PTI)

ಇದನ್ನೂ ಓದಿ: 40 ವರ್ಷದ ವ್ಯಕ್ತಿಯಲ್ಲಿ ಗಂಡು, ಹೆಣ್ಣಿನ ಎರಡೂ ಜನನಾಂಗ ಪತ್ತೆ: ಅಪರೂಪದ ಪ್ರಕರಣ ಇತ್ಯರ್ಥಪಡಿಸಿದ ಕಿಮ್ಸ್​ ವೈದ್ಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.